ಯಾದಗಿರಿ ಅ.18: ಕಳೆದುಹೋದ ಮೊಬೈಲ್ ಫೋನ್ನ್ನು ಪೊಲೀಸ್ ಠಾಣೆಗೆ ತಂದು ಒಪ್ಪಿಸುವ ಮೂಲಕ ಆಟೋ ಚಾಲಕ ಮಲ್ಲಪ್ಪ ತಂದೆ ಭೀಮರಾಯ ಮಡಿವಾಳ ಅವರು ಪ್ರಾಮಾಣಿಕತೆ ಮೆರೆದಿದ್ದಾರೆ.
ದಿನಾಂಕ 18-10-2026ರಂದು ಬೆಳಗ್ಗೆ ಸುಮಾರು 8:30ರ ವೇಳೆಗೆ ಯಾದಗಿರಿ ನಗರದ ಕನಕ ಸರ್ಕಲ್ ಹತ್ತಿರ ಮಂತ್ರಾಲಯದ ನಿವಾಸಿ ಜಗದೀಶ ತಂದೆ ಬಸಣ್ಣ ಅವರು ಆಕಸ್ಮಿಕವಾಗಿ ತಮ್ಮ ಮೊಬೈಲ್ ಫೋನ್ ಕಳೆದುಕೊಂಡಿದ್ದರು.
ಈ ಸಂದರ್ಭದಲ್ಲಿ ಮೊಬೈಲ್ ಫೋನ್ ದೊರೆತ ಆಟೋ ಚಾಲಕ ಮಲ್ಲಪ್ಪ ತಂದೆ ಭೀಮರಾಯ ಮಡಿವಾಳ, ರಾಮಸಮುದ್ರ ನಿವಾಸಿ, ಅವರು ಮೊಬೈಲ್ನ್ನು ಯಾದಗಿರಿ ನಗರ ಸಂಚಾರಿ ಪೊಲೀಸ್ ಠಾಣೆಗೆ ತಂದು, ಪಿಎಸ್ಐ ಶ್ರೀಮತಿ ಗಂಗಮ್ಮ ಅವರಿಗೆ ಒಪ್ಪಿಸಿದರು.
ನಂತರ ಪೊಲೀಸರು ಮೊಬೈಲ್ನ ವಾರಸುದಾರರನ್ನು ಸಂಪರ್ಕಿಸಿ, ಕಳೆದುಹೋಗಿದ್ದ ಮೊಬೈಲ್ ಫೋನ್ನ್ನು ಅವರಿಗೆ ಮರಳಿ ಹಸ್ತಾಂತರಿಸಿದರು.
ತಮಗೆ ಸೇರದ ವಸ್ತುವನ್ನು ಅದರ ವಾರಸುದಾರರಿಗೆ ಮರಳಿಸುವ ಮೂಲಕ ಮಲ್ಲಪ್ಪ ಮಡಿವಾಳ ಅವರು ಪ್ರಾಮಾಣಿಕತೆ ಮತ್ತು ಮಾನವೀಯತೆಗೆ ಉತ್ತಮ ಉದಾಹರಣೆಯಾಗಿದ್ದಾರೆ. ಅವರ ಈ ಕಾರ್ಯಕ್ಕೆ ಸಾರ್ವಜನಿಕರಿಂದ ಮೆಚ್ಚುಗೆ ವ್ಯಕ್ತವಾಗಿದೆ.