Press ID & Credential Portal
Apply / Verify  ➔
LIVE TV LocalCrimeNationalInternationalPoliticsBusinessEducationTechnologyEntertainmentSportsHealthFeatureTravelingBeautyRecipes
Press & Media Credential Portal
✕
1. Apply for Press ID Card
Register official reporter application with Email OTP.
➔
2. Download Approved Badge
Enter Card ID to receive authorization code via email.
3. Verify Reporter ID & Card (View Only)
For Public & Police: Check if card is authentic.
Local News | Districts Gadag

ಈಶ್ವರೀಯ ವಿಶ್ವವಿದ್ಯಾಲಯದಲ್ಲಿ ಆಯುರ್ವೇದ ದಿನಾಚರಣೆ 



ಗದಗ,ಸೆ,೨೫ : ಪ್ರಾಸ್ತಾವಿಕ ಸಂದೇಶ ನೀಡಿ ರಾಜಯೋಗಿನಿ ಬ್ರಹ್ಮಕುಮಾರಿ ಜಯಂತಿ ಯವರು ಮಾತನಾಡುತ್ತಾ "ಆಯುರ್ವೇದ ಭಾರತೀಯ ಪ್ರಾಚೀನ ವೈದ್ಯಕೀಯ ಪದ್ಧತಿಯಾಗಿದೆ. ಆಯುರ್ವೇದದ ದೃಷ್ಟಿಯಿಂದಲೂ ಜನಗಳಿಗೆ ವಿಶೇಷ ಸ್ಥಾನವಿದೆ. ಚರಕ ಸಂಹಿತೆ ಮತ್ತು ಸುಶ್ರುತ ಸಂಹಿತೆ ಮುಂತಾದ ಗ್ರಂಥಗಳಲ್ಲಿ ಪ್ರಾಚೀನ ಆಯುರ್ವೇದ ಜ್ಞಾನವನ್ನು ವಿವರಿಸಲಾಗಿದೆ. ರೋಗ ಗುಣಪಡಿಸುವ ಜೊತೆ ದೈಹಿಕ, ಮಾನಸಿಕ, ಆಧ್ಯಾತ್ಮಿಕ ಸಮತೋಲನ ಕಾಯ್ದುಕೊಳ್ಳಲು ಮಾರ್ಗದರ್ಶನ ನೀಡುತ್ತದೆ. ನೈಸರ್ಗಿಕ ಚಿಕಿತ್ಸೆಯಲ್ಲಿ ಅಡ್ಡ ಪರಿಣಾಮಗಳಿಲ್ಲ. ಯೋಗ, ಧ್ಯಾನಕ್ಕೂ ಆಯುರ್ವೇದದಲ್ಲಿ ಸ್ಥಾನವಿದೆ. ಈ ನಿಟ್ಟಿನಲ್ಲಿ ಈಶ್ವರೀಯ ವಿಶ್ವವಿದ್ಯಾಲಯ ಕಲಿಸುವ ರಾಜಯೋಗ ಮತ್ತು ಆಯುರ್ವೇದ ಪದ್ಧತಿ ಒಂದಾಗಿ ಕೆಲಸ ಮಾಡಿದರೆ ವ್ಯಕ್ತಿಯ ಭವಿಷ್ಯವನ್ನು ಆರೋಗ್ಯಕರ ಮಾಡಲು ಸಾಧ್ಯವಿದೆ. ಭಾರತ ಸರ್ಕಾರವು ಸಹ ಈ ವರ್ಷ "ಆರೋಗ್ಯಕರ ಭವಿಷ್ಯಕ್ಕಾಗಿ ಆಯುರ್ವೇದ" ಎಂಬ ಧ್ಯೇಯ ವಾಕ್ಯದೊಂದಿಗೆ ರಾಷ್ಟ್ರೀಯ ಆಯುರ್ವೇದ ದಿನವನ್ನು ಆಚರಿಸುತ್ತಿದೆ" ಎಂದು ನುಡಿದರು.  
"ಮೂಲಭೂತವಾದಂತಹ ಜೀವನಶೈಲಿಯಿಂದ ಬೇರೆ ಕಡೆ ಹೋಗ್ತಾ ಇರೋದ್ರಿಂದ ಎಲ್ಲಾ ತೊಂದರೆಗಳು, ಆರೋಗ್ಯ ಸಮಸ್ಯೆಗಳು ಹೆಚ್ಚಾಗುತ್ತಿವೆ. ಮೊದಲು ಜೀವನಶೈಲಿಯಲ್ಲಿ ? ಬೇಗ ಮಲಗಬೇಕು, ಬೇಗ ಏಳಬೇಕು. ಋತುವಿನ ಯಾವ ಆಹಾರ ಸೇವಿಸಬೇಕು, ವಾತಾವರಣದಲ್ಲಿ ಆಗುವಂತಹ ಬದಲಾವಣೆಗೆ ಅನುಸಾರವಾಗಿ ನಮ್ಮ ಆಹಾರ ಪದ್ಧತಿ ಬದಲಾವಣೆ ಮಾಡಿಕೊಳ್ಳಬೇಕು. ತೊಂದರೆ ಬಂದ ಮೇಲೆ ಅದರ ಚಿಕಿತ್ಸೆ ಪಡೆಯೋದು ಬೇರೆ, ಅದಕ್ಕಿಂತ ಮೊದಲು ಬರದಂತೆ ಇರೋದೇ ಬಹಳ ಮುಖ್ಯ. ಇದೇ ಆಯುರ್ವೇದದ ಮೂಲಭೂತ ಸಿದ್ಧಾಂತ."  ಎಂದು ಡಿ.ಜಿ. ಎಂ. ಆರ್ಯುವೇದಿಕ್ ಕಾಲೇಜಿನ ಪಂಚಕರ್ಮವಿಭಾಗದ ಮುಖಸ್ಥರಾದ   ಡಾ. ಜಯರಾಜ ಬಸರಿಗಿಡದ್ ಅಣ್ಣನವರು ಗಿಡಕ್ಕೆ ನೀರು ಹಾಕುವುದರ ಮೂಲಕ ಉದ್ಘಾಟಿಸಿ ಮಾತಾನಾಡಿದರು.
ಡಾ. ಪ್ರವೀಣ ಸರ್ವದೆ, ಮುಖ್ಯ ಅತಿಥಿಗಳಾಗಿ ಮಾತನಾಡುತ್ತಾ-  ಆಯುರ್ವೇದ ಚಿಕಿತ್ಸೆ ನಮ್ಮ ದೇಶದ  ಹಳೆಯ ಪದ್ಧತಿ. ನಮ್ಮ ಹಿಂದಿನ ಕಾಲದ ಪೂರ್ವಜರು ಇದನ್ನು ಅಳವಡಿಸಿಕೊಂಡು ಬಂದಿದ್ದಾರೆ. ಆಯುರ್ವೇದ ಚಿಕಿತ್ಸೆ ಕೂಡ ವೇಗವಾಗಿ ಕೆಲಸ ಮಾಡುತ್ತದೆ ಆದರೆ ಸರಿಯಾದ ರೀತಿಯಲ್ಲಿ ಮತ್ತು ಸರಿಯಾದ ಪಥ್ಯ ಮಾಡಬೇಕು!" ಎಂದು ನುಡಿದರು. 
 ಡಾ. ಅಶ್ವಿನಿ ಸರ್ವದೇ ಮಾತನಾಡುತ್ತಾ- ಆಯುರ್ವೇದವನ್ನು ಜೀವನದಲ್ಲಿ ತರಲು ಯೂಟ್ಯೂಬ್ ಅಥವಾ ಇಂಟರ್ನೆಟ್ನಲ್ಲಿರುವ ಮಾಹಿತಿಗಳಿಗೆ ಮೊರೆ ಹೋಗದೆ ನೇರವಾಗಿ ವೈದ್ಯರನ್ನೇ ಸಂಪರ್ಕಿಸಿದರೆ ಅದು ಹೆಚ್ಚು ಪರಿಣಾಮಕಾರಿ ಹಾಗೂ ಸುರಕ್ಷಿತ ಎಂದು ತಿಳಿಸಿದರು. 
ಡಾ. ಅಶೋಕ ಮತ್ತಿಗಟ್ಟಿ, ಸರ್ಕಾರಿ ಆಯುರ್ವೇದ ವೈದ್ಯಾಧಿಕಾರಿ ಮಾತನಾಡುತ್ತಾ?"ಆಯುರ್ವೇದ ನಮ್ಮ ಭಾರತೀಯ ಸಂಸ್ಕೃತಿ, ಭಾರತದ ಪರಂಪರೆ. ಬ್ರಿಟಿಷರು ಬಂದು ಭಾರತದಿಂದಲೇ ಎಲ್ಲಾ ಕಲಿತುಕೊಂಡು ಹೋದರು. ಮೊದಲು ಶಸ್ತ್ರಚಿಕಿತ್ಸೆ ಶುರು ಮಾಡಿದವರು ಶುಶ್ರುತ. ಯೋಗ, ಆಯುರ್ವೇದ ಮತ್ತು ಪ್ರಕೃತಿ ಚಿಕಿತ್ಸೆಯಿಂದ ನಾವು ನಮ್ಮ ಆರೋಗ್ಯ ರಕ್ಷಿಸಿಕೊಳ್ಳಬಹುದು ಎಂದು ಮಾತನಾಡಿ ಕೆಲವೊಂದು ಆರೋಗ್ಯ ಸೂತ್ರಗಳನ್ನು ತಿಳಿಸಿದರು."
ಕಾರ್ಯಕ್ರಮದಲ್ಲಿ ಎಲ್ಲಾ ಆಯುರ್ವೇದ ವೈದ್ಯರನ್ನು ಸನ್ಮಾನಿಸಿ ಗೌರವಿಸಲಾಯಿತು.
ಕಾರ್ಯಕ್ರಮವನ್ನು ಬ್ರಹ್ಮಕುಮಾರಿ ರೇಖಾನಿರೂಪಿಸಿದರು. ಬ್ರಹ್ಮಕುಮಾರಿ ಸಾವಿತ್ರಿ ಸ್ವಾಗತಿಸಿದರು, ಬ್ರಹ್ಮಕುಮಾರಿ ಮಮತಾ ವಂದನಾರ್ಪಣೆ ಮಾಡಿದರು."  

 

 

Author
KhushiHost News CMS Pro ®
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಅಂಧ, ವಿಕಲಚೇತನರ ಬಾಳಿಗೆ ಬೆಳಕಾದ ಸ್ನೇಹ ಜ್ಯೋತಿ ಸಂಸ್ಥೆ : ಧರ್ಮಾಧ್ಯಕ್ಷ ಡೇರಿಕ್ ಫರ್ನಾಂಡಿಸ್ ಧಾರವಾಡ ಜಿಲ್ಲಾ ಕ್ರೀಡಾ ವಸತಿ ನಿಲಯದ ಅಥ್ಲೇಟಿಕ್ ಕ್ರೀಡಾಕೂದಲ್ಲಿ ಸಾಧನೆಮಹಿಳೆಯರ ಸಾಮಾಜಿಕ, ಆರ್ಥಿಕ ಪ್ರಗತಿಗೆ ಜ್ಞಾನವಿಕಾಸ ಕಾರ್ಯಕ್ರಮ ಪೂರಕ: ದಯಾಶೀಲಅಂಜನಾದ್ರಿ ದೇವಸ್ಥಾನದ ಆಡಳಿತ ವಿವಾದ: ನ್ಯಾಯಾಲಯದ ಆದೇಶದಂತೆ ಅವಕಾಶ ನೀಡಿಸುರಕ್ಷಿತ ಬಚಪನ್ ಅಭಿಯಾನ: ಬೂದಗುಂಪಾದಲ್ಲಿ ಮಕ್ಕಳ ಹಕ್ಕುಗಳು & ಕಾನೂನುಗಳ ಜಾಗೃತಿ ಕಾರ್ಯಕ್ರಮನವೆಂಬರ್ 3 ರಂದು ಗಂಗಾವತಿಯಲ್ಲಿ ಬಸವಾದಿ ಶಿವಶರಣರ ಬೃಹತ್ ಹಿಂದೂ ಸಮಾವೇಶನಾಳೆ ದಲಿತ ಸೇನೆ ರಾಜ್ಯ ಸಮಿತಿಯ ಪೂರ್ವಭಾವಿ ಸಭೆ ಹಾಗೂ ನೂತನ ಪದಾಧಿಕಾರಿಗಳಿಗೆ ಸನ್ಮಾನಹುಲಿಗೆಮ್ಮ ದೇವಿ ದೇವಸ್ಥಾನದ ಅಧಿಕಾರಿ ವಿರುದ್ಧ ದೂರು ದಾಖಲಿಸಿ ಕ್ರಮಕ್ಕೆ ಒತ್ತಾಯಕೊಪ್ಪಳ ಭಾಗ್ಯನಗರ ಬಂದ್‌ಗೆ ಹೈದರಾಬಾದ್ ಕರ್ನಾಟಕ ಯುವಶಕ್ತಿ ಬೆಂಬಲಹಣಕಾಸು ಒಳಗೊಳ್ಳುವಿಕೆ ಸ್ಯಾಚುರೇಶನ್ ಅಭಿಯಾನ: ವಿಶೇಷ ಜಾಗೃತಿ ಪೋಸ್ಟರ್ ಬಿಡುಗಡೆ