ಘಟಪ್ರಭಾ :ಶ್ರೀ ಜೆ. ಜಿ. ಕೋ. ಆಪರೇಟಿವ್ ಹಾಸ್ಪಿಟಲ್ ಸೊಸೈಟಿಯ ಆಯುರ್ವೇದ ಮೆಡಿಕಲ್ ಕಾಲೇಜಿನಲ್ಲಿ ನ್ಯಾಷನಲ್ ಕಮಿಷನ್ ಆಫ್ ಇಂಡಿಯನ್ ಸಿಸ್ಟಮ್ ಆಪ್ ಮೆಡಿಸಿನ್ ನವದೆಹಲಿ ಇವರ ಮಾರ್ಗಸೂಚಕಗಳ ಪ್ರಕಾರ ಬುಧುವಾರ ದಿ: ೨೩-೦೯-೨೦೨೬ ರಂದು ೧೧ನೇ ರಾಷ್ಟ್ರೀಯ ಆಯುರ್ವೇದ ದಿನವನ್ನು ಅತ್ಯಂತ ವಿಜೃಂಭಣೆಯಿಂದ ಆಚರಿಸಲಾಯಿತು.
ಕಾರ್ಯಕ್ರಮದ ಪ್ರಾರಂಭದಲ್ಲಿ ಧನ್ವಂತರಿ ಪೂಜೆ ದೀಪ ಪ್ರಜ್ವಲನೆಯೊಂದಿಗೆ ತುಳಸಿ ಗಿಡಜಲ- ಸಿಂಚನದ ಮೂಲಕ ಮುಖ್ಯಅತೀಥಿಗಳಾಗಿ ಆಗಮಿಸಿದ್ದ-ಡಾ|| ಮೋಹನ ಭಸ್ಮೆ ಮಾನ್ಯ ತಹಶೀಲ್ದಾರರು & ತಾಲೂಕಾ ದಂಡಾಧಿಕಾರಿಗಳು ಗೋಕಾಕ, ಮತ್ತು ಕಾಲೇಜ್ ಪ್ರಾಂಶುಪಾಲರು ಹಾಗೂ ಎಲ್ಲ ಗಣ್ಯರು ಕಾರ್ಯಕ್ರಮವನ್ನು ಉದ್ಘಾಟಿಸಿದರು. ಡಾ|| ಎಸ್. ಬಿ.ಚೌಗಲಾ ಸ್ವಾಗತಿಸಿದರು.
ಡಾ|| ಸರ್ವಮಂಗಳಾ ಶಿರೋಳ, ನೋಡಲ್‌ಆಫೀಸರ್‌ಇವರು ಸತತ ೧೫ ದಿನಗಳ ಕಾಲ ನಡೆದರಾಷ್ಟ್ರೀಯಆಯುರ್ವೇದ ದಿನದ ಅಂಗವಾಗಿಆಯೋಜಿಸಲಾದವಿವಿಧ ಸ್ಪರ್ಧೆಗಳು, ಉಚಿತಆರೋಗ್ಯತಪಾಸಣಾ ಶಿಬಿರ, ಸಮುದಾಯಆರೋಗ್ಯಜಾಗೃತಿ- ಉಪನ್ಯಾಸಗಳು, ವಿವಿಧಗಿಡಮೂಲಿಕೆ ಸಸಿ ವಿತರಣೆ, ಆಯುರ್ವೇದ ಬಗ್ಗೆ ಗಣ್ಯರ ಸಂದೇಶಗಳ ಸಂಗ್ರಹ, ರೇಡಿಯೊ ಮಾತುಕತೆಹೀಗೆ ಹಲವಾರುವಿಭಿನ್ನಕಾರ್ಯ ಚಟುವಟಿಕೆಗಳ ಪೂರ್ಣ ವರದಿಯನ್ನು ಮಂಡಿಸಿದರು.
ಮುಖ್ಯ ಅತಿಥಿಗಳಾಗಿ ಆಗಮಿಸಿದ್ದಡಾ|| ಮೋಹನ್ ಭಸ್ಮೆ (ಏಂS) ತಹಸಿಲ್ದಾರರು ಮತ್ತು ತಾಲೂಕಾ ದಂಡಾದಿಕಾರಿಗಳು ಗೋಕಾಕ ಇವರುಸ್ವಸ್ಥಸ್ಯ ಸ್ವಾಸ್ಥ್ಯರಕ್ಷಣಂ, ಆತುರಸ್ಯ ವಿಕಾರ ಪ್ರಶಮನಂ ಚಎಂಬ ಮೂಲ ತತ್ವದ ಜೊತೆಗೆ ಆರೋಗ್ಯವಂತರ ಆರೋಗ್ಯವನ್ನು ಕಾಪಾಡುವುದು ಹಾಗೂ ಅನಾರೋಗ್ಯ ಬಂದಾಗಅದನ್ನು ನಿವಾರಿಸುವುದು. ಹಾಗೂ ಈಗಾಗಲೇ ಕೇಂದ್ರ ಸರ್ಕಾರ ಆಯುರ್ವೇದಕ್ಕೆ ಹೆಚ್ಚಿನ ಮಹತ್ವ ನೀಡುತ್ತಿದೆ. &ಈ ಪದ್ದತಿಯಿಂದ ಶಾಶ್ವತ ಪರಿಹಾರ ಸಾಧ್ಯಎಂದು ಆಯುರ್ವೇದದ ಮಹತ, ಸಮಾಜದಲಿ ಆಯುರ್ವೇದ ಚಿಕಿತ್ಸಾ ಪದ್ದತಿಯ ಬಳಕೆಮತ್ತು ವಿದ್ಯಾರ್ಥಿಗಳಲ್ಲಿ ಆಯುರ್ವೇದ ವ್ಯಾಸಂಗದಿಂದ ಸಿಗುವ ಅವಕಾಶಗಳ ಬಗ್ಗೆ ತಿಳಿಸಿದರು. ಪ್ರಾಂಶುಪಾಲರಾದ ಡಾ|| ಜೆ.ಕೆ. ಶರ್ಮಾರವರು ಆಯುರ್ವೇದದ ಮಹತ್ವ ಮತ್ತು ೧೧ ನೇರಾಷ್ಟ್ರೀಯ ಆಯುರ್ವೇದ ದಿನದಧ್ಯೇಯ ವಾಕ್ಯವಾದ ಆರೋಗ್ಯಕರ ಭವಿಷ್ಯಕ್ಕಾಗಿ ಆಯುರ್ವೇದ ವಿಷಯದ ಬಗ್ಗೆ ತಿಳಿಸಿದರು.
ಕಾರ್ಯಕ್ರಮದಲ್ಲಿ ಆಡಳಿತಾಧಿಕಾರಿಗಳಾದ ಶ್ರೀ ಎಸ್. ಬಿ. ಪಾಟೀಲ, ಉಪ-ಪ್ರಾಚಾರ್ಯರಾದ ಡಾ|| ಸಿ. ಎಸ್. ಮಾಳದಕರ ಮತ್ತು ಆಯುರ್ವೇದ ಆಸ್ಪತ್ರೆಡೀನ್‌ರಾದ ಡಾ|| ವಿ. ಎಸ್. ಕೊಟ್ರನ್ನವರರವರು ವೇದಿಕೆಯ ಮೇಲೆ ಉಪಸ್ಥಿತರಿದ್ದರು. ಶಿಕ್ಷಕ-ಶಿಕ್ಷಕೇತರ ಸಿಬ್ಬಂದಿ ವರ್ಗ ಮತ್ತು ಆಯುರ್ವೇದವೈದ್ಯ ವಿದ್ಯಾರ್ಥಿ- ವಿದ್ಯಾರ್ಥಿನಿಯರು ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು.ಡಾ|| ಪೂಜಾ ಕಡಕೋಳ, ಡಾ|| ರಾಜಶೇಖರ ಜಕಾತಿ ಕಾರ್ಯಕ್ರಮವನ್ನು ನಡೆಸಿಕೊಟ್ಟರು. ಡಾ|| ವಿಜಯಶ್ರೀ ಮಾದಗೌಡ ಇವರ ವಂದನಾರ್ಪಣೆಯೊಂದಿಗೆ ಕಾರ್ಯಕ್ರಮ ಮುಕ್ತಾಯವಾಯಿತು.