ಯರಗಟ್ಟಿ: ವಿದ್ಯುತ್ ಸಮರ್ಪಕ ವಾಗಿ ಪೂರೈಸುವಂತೆ ಆಗ್ರಹಿಸಿ ನೂರಾರು ರೈತರು ಸೋಮವಾರ ಹೆಸ್ಕಾಂ ಕಚೇರಿಗೆ ಮುತ್ತಿಗೆ ಹಾಕಿ ಪ್ರತಿಭಟನೆ ನಡೆಸಿದರು.
ತೀವ್ರ ಅಭಾವ ಹಾಗೂ ಬರದ ಪರಿಸ್ಥಿತಿಯಿಂದಾಗಿ ಈಗಾಗಲೇ ಬೆಳೆಗಳು ಒಣಗುವ ಹಂತ ತಲುಪಿವೆ. ವಿದ್ಯುತ್ ಪೂರೈಕೆಯಲ್ಲಿನ ವಿಳಂಬದಿಂದಾಗಿ ಕಬ್ಬು, ಅರಿಸಿನ, ಮೆಕ್ಕೆಜೋಳ ಸೇರಿದಂತೆ ಪ್ರಮುಖ ನೀರಾವರಿ ಬೆಳೆಗಳು ಬಾಡುತ್ತಿವೆ ಎಂದು ರೈತರು ಆಕ್ರೋಶ ವ್ಯಕ್ತಪಡಿಸಿದರು.
’ರಾತ್ರಿ ವೇಳೆ ನಿರಂತರ ವಿದ್ಯುತ್ ಕಡಿತದಿಂದಾಗಿ ಕಳ್ಳತನ ಹೆಚ್ಚಾಗಿದ್ದು, ಕುರಿ-ಮೇಕೆ, ಪಂ??ಸೆ??ಗಳ ಕೇಬ??ಗಳು ಹಾಗೂ ಸಂಗ್ರಹಿಸಿಟ್ಟ ಧಾನ್ಯಗಳು ಕಳುವಾಗುತ್ತಿವೆ. ವಿದ್ಯುತ್ ಅಭಾವದಿಂದ ವಿದ್ಯಾರ್ಥಿಗಳ ಅಭ್ಯಾಸಕ್ಕೂ ತೀವ್ರ ತೊಂದರೆಯಾಗುತ್ತಿದೆ. ಪದೇ ಪದೇ ವೋಲ್ಟೇಜ್ ವ್ಯತ್ಯಯ ಹಾಗೂ ವಿದ್ಯುತ್ ಸ್ಥಗಿತಗೊಳ್ಳುವುದರಿಂದ ಮೋಟಾರ್ಗಳು ಸುಟ್ಟು ಹೋಗಿ ರೈತರಿಗೆ ನ? ಸಂಭವಿಸುತ್ತಿದೆ’ ಎಂದು ರೈತರು ಅಳಲು ತೋಡಿಕೊಂಡರು.
ಹಗಲಿನಲ್ಲಿ ೭ ಗಂಟೆಗಳ ಕಾಲ ನಿರಂತರ ತ್ರೀ-ಫೇಸ್ ವಿದ್ಯುತ್ ಹಾಗೂ ಸಂಜೆ ೬.೩೦ರಿಂದ ಬೆಳಿಗ್ಗೆ ೪ ಗಂಟೆಯವರೆಗೆ ಸಿಂಗಲ್-ಫೇಸ್ ವಿದ್ಯುತ್ ಪೂರೈಸಬೇಕು. ಅಧಿಕಾರಿಗಳು ವಿದ್ಯುತ್ ವ್ಯತ್ಯಯದ ಕುರಿತು ಮುಂಚಿತವಾಗಿ ರೈತರೊಂದಿಗೆ ಚರ್ಚಿಸಿ ನಿರ್ಧಾರ ಕೈಗೊಳ್ಳಬೇಕು. ರೈತರನ್ನು ಹೀಗೆಯೇ ಸಂಕ?ಕ್ಕೆ ತಳ್ಳಿದರೆ ಮುಂಬರುವ ದಿನಗಳಲ್ಲಿ ತಕ್ಕ ಪಾಠ ಕಲಿಸಬೇಕಾಗುತ್ತದೆ’ ಎಂದು ರೈತರು ಎಚ್ಚರಿಕೆ ನೀಡಿದರು.
ಪ್ರತಿಭಟನಾ ಸ್ಥಳಕ್ಕೆ ಆಗಮಿಸಿದ ಹೆಸ್ಕಾಂ ಅಧಿಕಾರಿ ಮಹಾಂತೇಶ ಯರಗಟ್ಟಿ ಅವರು ಪ್ರತಿಭಟನಕಾರರೊಂದಿಗೆ ಚರ್ಚಿಸಿದರು.
ಹಗಲು ೬ ಗಂಟೆಗಳ ಕಾಲ ತ್ರೀ-ಫೇಸ್ ವಿದ್ಯುತ್ ಹಾಗೂ ಸಂಜೆ ೭ ರಿಂದ ರಾತ್ರಿ ೧೧ ಗಂಟೆಯವರೆಗೆ ಡೆಲ್ಟಾ ವಿದ್ಯುತ್ ಅನ್ನು ಯಾವುದೇ ಅಡೆತಡೆಯಿಲ್ಲದೆ ನಿರಂತರವಾಗಿ ಪೂರೈಸಲಾಗುವುದು’ ಎಂದು ಅಧಿಕಾರಿಗಳು ಭರವಸೆ ನೀಡಿದರು. ಅಧಿಕಾರಿಗಳ ಈ ಭರವಸೆಗೆ ಸಮ್ಮತಿಸಿದ ರೈತರು ಪ್ರತಿಭಟನೆಯನ್ನು ಹಿಂಪಡೆದರು.
ರೈತ ಮುಖಂಡರಾದ ರೈತ ಸಂಘದ ತಾಲೂಕಾಧ್ಯಕ್ಷ ರಂಗಪ್ಪ ಗಂಗರಡ್ಡಿ, ವೆಂಕಣ್ಣಾ ಹುರಕನ್ನವರ, ರಾಮಕೃ? ಎಳ್ಳಮ್ಮಿ, ಗಿರೇಪ್ಪ ಗಂಗರಡ್ಡಿ, ಸಿಂಧೂರ ತೆಗ್ಗೆ, ಶಿವಲಿಂಗಪ್ಪಾ ನುಗ್ಗಾನಟ್ಟಿ, ಶಿವಲಿಂಗಪ್ಪಾ ಬಿರದಾರ ಪಾಟೀಲ, ಅಶೋಕ ನಂದಿ, ಶಂಕರ ಬಗನಾಳ, ಈರಪ್ಪಾ ಬಳಿಗಾರ, ಶಂಕರಪ್ಪಾ. ಮೀಲ್ಲಾನಟ್ಟಿ, ಉಮೇಶ ಬಳಿಗಾರ, ಕಲ್ಲಪ್ಪ ಬಿರಾದಾರಪಾಟೀಲ, ಶ್ರೀಶೈಲ ದಿಡಗನ್ನವರ, ಶಾನೂರ ಶಿಕ್ಕಲಗಿ, ಫಕೀರಪ್ಪ ಗುಡುಮಕೇರಿ, ಯಕ್ಕೇರಪ್ಪ ತಳವಾರ, ಮಲಿಕ ಜಮಾದಾರ, ವಿಠ್ಠಲ ಚುಂಚನೂರ ಸೇರಿದಂತೆ ಅನೇಕ ರೈತರು ಇದ್ದರು.
೧೨ ಯರಗಟ್ಟಿ ೦೨
ಪೋಟೊ ಶೀರ್ಷಿಕೆ