Press ID & Credential Portal
Apply / Verify  ➔
LIVE TV LocalCrimeNationalInternationalPoliticsBusinessEducationTechnologyEntertainmentSportsHealthFeatureTravelingBeautyRecipes
Press & Media Credential Portal
✕
1. Apply for Press ID Card
Register official reporter application with Email OTP.
➔
2. Download Approved Badge
Enter Card ID to receive authorization code via email.
3. Verify Reporter ID & Card (View Only)
For Public & Police: Check if card is authentic.
Local News | Districts Belagavi

ಬಳ್ಳಾರಿ: ಹಾನಿಗೊಳಗಾದ ಬೆಳೆಗಳ ಖುದ್ದು ಪರಿಶೀಲನೆ ನಡೆಸಿದ ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿ ಡಾ. ತ್ರಿಲೋಕಚಂದ್ರ ಕೆ.ವಿ


ಬಳ್ಳಾರಿ,ಅ.19:  ಮಳೆ ಕೊರತೆಯಿಂದಾಗಿ ಹಾನಿಗೊಳಗಾದ ಬಳ್ಳಾರಿ ತಾಲೂಕಿನ ಹಲಕುಂದಿ ಹಾಗೂ ಬಿ.ಬೆಳಗಲ್ ಗ್ರಾಮಗಳ ಕೃಷಿ ಜಮೀನುಗಳಿಗೆ ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿ ಡಾ. ತ್ರಿಲೋಕಚಂದ್ರ ಕೆ.ವಿ ಅವರು, ಭೇಟಿ ನೀಡಿ ಬೆಳೆ ಪರಿಸ್ಥಿತಿಯನ್ನು ಖುದ್ದು ಪರಿಶೀಲಿಸಿದರು.
 ತೊಗರಿ ಹಾಗೂ ಮೆಣಸಿನಕಾಯಿ ಬೆಳೆಯನ್ನು ವೀಕ್ಷಿಸಿದ ಅವರು, ನೀರಿನ ಕೊರತೆಯಿಂದಾಗಿ ಬೆಳೆ ಬೆಳವಣಿಗೆ ಕುಂಠಿತಗೊAಡಿರುವುದನ್ನು ಹಾಗೂ ಇಳುವರಿ ಗಣನೀಯವಾಗಿ ಕುಸಿಯುವ ಸಾಧ್ಯತೆಯನ್ನು ಗಮನಿಸಿದರು. ಒಣಭೂಮಿ ಪ್ರದೇಶದಲ್ಲಿ ಮಳೆಯಾಗದೆ ತೊಗರಿ ಬೆಳವಣಿಗೆ ನಿಂತಿದ್ದು, ಹೂವು ಹಾಗೂ ಕಾಯಿ ಕಟ್ಟುವ ಹಂತದಲ್ಲೇ ಗಿಡಗಳು ಬಾಡುತ್ತಿರುವುದನ್ನು ಪರಿಶೀಲಿಸಿದರು.
*ಮಣ್ಣು ಪರೀಕ್ಷೆ ವರದಿ ವಿಳಂಬಕ್ಕೆ ಅಸಮಾಧಾನ:*
 ರೈತರಿಂದ ಸಂಗ್ರಹಿಸಿದ ಮಣ್ಣಿನ ಮಾದರಿಗಳ ಪರೀಕ್ಷೆ ಮತ್ತು ಕಾರ್ಡ್ ವಿತರಣೆ ತಿಂಗಳುಗಟ್ಟಲೆ ತಡವಾಗುತ್ತಿರುವುದಕ್ಕೆ ಅಸಮಾಧಾನ ವ್ಯಕ್ತಪಡಿಸಿದರು. ಮಣ್ಣು ಪರೀಕ್ಷಾ ವರದಿಯನ್ನು ಲ್ಯಾಮಿನೇಷನ್ ಮಾಡಿ ಕಾರ್ಡ್ ಕೊಡುವುದಕ್ಕಿಂತ, ಫಲಿತಾಂಶ ಬಂದ ತಕ್ಷಣವೇ ರೈತರ ಮೊಬೈಲ್‌ಗೆ ಎಸ್‌ಎಂಎಸ್ ಅಥವಾ ವಾಟ್ಸಾಪ್ ಮೂಲಕ ಸಂದೇಶ ರವಾನಿಸಬೇಕು ಎಂದು ತಾಕೀತು ಮಾಡಿದರು. ಬಿತ್ತನೆಗೆ ಮುಂಚೆಯೇ ಮಾಹಿತಿ ತಲುಪದಿದ್ದರೆ ಪರೀಕ್ಷೆ ನಡೆಸಿ ಪ್ರಯೋಜನವೇನು ಎಂದು ಅವರು ಪ್ರಶ್ನಿಸಿದರು. ಪ್ರಯೋಗಾಲಯಗಳ ಪೂರ್ಣ ಸಾಮರ್ಥ್ಯವನ್ನು ಬಳಸಿಕೊಂಡು ನಿಗದಿತ ಗುರಿಯನ್ನು ಶೀಘ್ರವಾಗಿ ತಲುಪುವಂತೆ ಹಾಗೂ ರೈತರಿಗೆ ಸಕಾಲದಲ್ಲಿ ಮಾಹಿತಿ ಒದಗಿಸುವಂತೆ ಅಧಿಕಾರಿಗಳಿಗೆ ಕಟ್ಟುನಿಟ್ಟಿನ ನಿರ್ದೇಶನ ನೀಡಿದರು.
*ರೈತರ ಜಮೀನಿನಲ್ಲೇ ನಿಂತು ಆಪ್ ಮೂಲಕ ಪರಿಶೀಲನೆ:*
 ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿ ಡಾ. ತ್ರಿಲೋಕಚಂದ್ರ ಕೆ.ವಿ ಅವರು, ರೈತರ ಜಮೀನಿನಲ್ಲಿ ನಿಂತು, ಬೆಳೆ ಸಮೀಕ್ಷೆ ಆಪ್ ಮೂಲಕ ವಿವರಗಳನ್ನು ದಾಖಲಿಸುವ ವಿಧಾನ, ಜಿಪಿಎಸ್ ಆಧಾರಿತ ಫೋಟೋ ಅಪ್‌ಲೋಡ್ ಹಾಗೂ ಸರ್ವೆ ನಂಬರ್ ಪರಿಶೀಲನಾ ಪ್ರಕ್ರಿಯೆಯನ್ನು ನೇರವಾಗಿ ವೀಕ್ಷಿಸಿದರು. ಜಿಲ್ಲೆಯಲ್ಲಿ ಬೆಳೆ ಸಮೀಕ್ಷೆ ಪ್ರಕ್ರಿಯೆ ಚುರುಕಿನಿಂದ ಸಾಗುತ್ತಿದ್ದು, ಕೃಷಿ ಅಧಿಕಾರಿಗಳ ಬಳಿ ಸ್ಥಳೀಯ ವಿಸ್ತೀರ್ಣ ಹಾಗೂ ರೈತರ ವಿವರಗಳ ಕುರಿತು ಮಾಹಿತಿ ಪಡೆದರು. ಪರಿಶೀಲನೆ ವೇಳೆ ತೊಗರಿ (ರೆಡ್ ಗ್ರಾಮ್) ಪ್ರಮುಖ ಬೆಳೆಯಾಗಿದ್ದು, ಅದರೊಂದಿಗೆ ಸಜ್ಜೆ ಅಂತರ ಬೆಳೆಯಾಗಿರುವುದು ಕಂಡುಬAದಿತು.
*ತAತ್ರಜ್ಞಾನ ಮತ್ತು ಪಾರದರ್ಶಕತೆ:*
 ಸರ್ವೇ ನಂಬರ್ ಹಾಗೂ ಹಿಸ್ಸಾ ನಂಬರ್‌ಗಳ ನಿಖರ ಸ್ಥಳದಲ್ಲೇ (ಜಿಯೋ-ಫೆನ್ಸಿಂಗ್ ವ್ಯಾಪ್ತಿಯಲ್ಲಿ) ನಿಂತು ಫೋಟೋ ತೆಗೆಯುವುದು ಕಡ್ಡಾಯವಾಗಿದೆ. ಸರ್ವೆ ಮಾಡುವವರ ಮುಖ ಗುರುತಿಸುವಿಕೆ ಮೂಲಕವೇ ಲಾಗಿನ್ ಆಗುವ ವ್ಯವಸ್ಥೆ ಇರುವುದರಿಂದ ಯಾವುದೇ ರೀತಿಯ ನಕಲಿ ದಾಖಲಾತಿಗೆ ಅವಕಾಶವಿಲ್ಲ ಎಂದು ಕೃಷಿ ಅಧಿಕಾರಿಗಳು ವಿವರಿಸಿದರು.
 ಮೇಲ್ವಿಚಾರಕರು ಸಮೀಕ್ಷೆಯನ್ನು ಪರಿಶೀಲಿಸಿ ಅನುಮೋದಿಸಿದ ತಕ್ಷಣ, ರೈತರ ಮೊಬೈಲ್‌ಗೆ ಬೆಳೆ ವಿವರಗಳ ಕುರಿತು ಎಸ್‌ಎಂಎಸ್ ರವಾನೆಯಾಗಲಿದೆ. ರೈತರು ‘ಬೆಳೆ ದರ್ಶಕ್' ಆಪ್ ಮೂಲಕ ತಮ್ಮ ಜಮೀನಿನ ಬೆಳೆ ವಿವರಗಳನ್ನು ಪರಿಶೀಲಿಸಿಕೊಳ್ಳಬಹುದಾಗಿದೆ.
 ಈ ಸಂದರ್ಭದಲ್ಲಿ ಅಧಿಕಾರಿಗಳು ಸ್ಥಳೀಯ ರೈತರೊಂದಿಗೆ ಚರ್ಚಿಸಿ, ಸಮೀಕ್ಷೆಯಲ್ಲಿ ಯಾವುದೇ ಲೋಪದೋಷಗಳಾಗದಂತೆ ನಿಖರವಾಗಿ ಬೆಳೆ ಮಾಹಿತಿ ನಮೂದಿಸುವಂತೆ ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿಯವರು, ಸಿಬ್ಬಂದಿಗೆ ಸೂಚನೆ ನೀಡಿದರು.
*ರೈತರ ಅಳಲು:*
 ಸಾಮಾನ್ಯವಾಗಿ ಎಕರೆಗೆ 20 ರಿಂದ 25 ಕ್ವಿಂಟಾಲ್‌ವರೆಗೆ ಬರಬೇಕಾಗಿದ್ದ ಇಳುವರಿ, ಪ್ರಸ್ತುತ ಪರಿಸ್ಥಿತಿಯಲ್ಲಿ ಕೇವಲ 2 ರಿಂದ 5 ಕ್ವಿಂಟಾಲ್ ಕೂಡ ಬರುವುದು ಕಷ್ಟಕರವಾಗಿದೆ. ಗಿಡಗಳಲ್ಲಿ ಕಾಯಿ ಕಟ್ಟುವ ಪ್ರಮಾಣ ಗಣನೀಯವಾಗಿ ಕಡಿಮೆಯಾಗಿದ್ದು, ಅಕಾಲಿಕವಾಗಿ ಕಾಯಿ ಒಣಗುತ್ತಿವೆ. ಪ್ರತಿ ಎಕರೆಗೆ ಬೀಜ, ಗೊಬ್ಬರ, ಕೀಟನಾಶಕ ಹಾಗೂ ನಿರ್ವಹಣೆಗಾಗಿ ರೈತರು ಲಕ್ಷಾಂತರ ರೂಪಾಯಿ ಖರ್ಚು ಮಾಡಿದ್ದೇವೆ. ಆದರೆ ಇಳುವರಿ ತೀವ್ರವಾಗಿ ಕುಸಿದಿರುವುದರಿಂದ ಹಾಕಿದ ಬಂಡವಾಳವೂ ಮರಳಿ ಬಾರದಂತಾಗಿ ಕಂಗಾಲಾಗಿದ್ದೇವೆ. ಬೆಳೆ ನಷ್ಟದಿಂದ ಸಂಕಷ್ಟದಲ್ಲಿರುವ ನಮಗೆ ಸೂಕ್ತ ಪರಿಹಾರ ಒದಗಿಸಬೇಕು ಹಾಗೂ ವಿಮಾ ಮೊತ್ತ ಶೀಘ್ರವಾಗಿ ತಲುಪುವಂತೆ ಕ್ರಮಕೈಗೊಳ್ಳಬೇಕೆಂದು ರೈತರು ಮನವಿ ಮಾಡಿದರು.
 ಇದಕ್ಕೆ ಪ್ರತಿಕ್ರಿಯಿಸಿದ ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿಗಳು, ಮಳೆಯಾಶ್ರಿತ ಬೆಳೆಗಳಿಗೆ ಪ್ರಧಾನಮಂತ್ರಿ ಫಸಲ್ ಬಿಮಾ ಯೋಜನೆ ಅಥವಾ ವಿಮಾ ಸೌಲಭ್ಯಗಳು ತಲುಪುತ್ತಿರುವ ಕುರಿತು ಕೃಷಿ ಮತ್ತು ತೋಟಗಾರಿಕೆ ಅಧಿಕಾರಿಗಳಿಂದ ಮಾಹಿತಿ ಪಡೆದುಕೊಂಡು, ನಿಯಮಾವಳಿಗಳ ಚೌಕಟ್ಟಿನಲ್ಲಿ ರೈತರಿಗೆ ನ್ಯಾಯಯುತ ಪರಿಹಾರ ಒದಗಿಸಲು ಕ್ರಮ ಕೈಗೊಳ್ಳುವುದಾಗಿ ತಿಳಿಸಿದರು.
 ಈ ವೇಳೆ ಜಿಲ್ಲಾಧಿಕಾರಿ ನಾಗೇಂದ್ರ ಪ್ರಸಾದ್.ಕೆ., ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಮಹಮ್ಮದ್ ಹಾರೀಸ್ ಸುಮೇರ್, ಜಿಪಂ ಉಪ ಕಾರ್ಯದರ್ಶಿ ಶಶಿಕಾಂತ್ ಶಿವಪುರೆ, ಸಹಾಯಕ ಆಯುಕ್ತ ರಾಜೇಶ್ ಹೆಚ್.ಡಿ., ಜಂಟಿ ಕೃಷಿ ನಿರ್ದೇಶಕ ಕೆ.ಸೋಮಸುಂದರ್, ತೋಟಗಾರಿಕೆ ಇಲಾಖೆಯ ಜಂಟಿ ನಿರ್ದೇಶಕ ಶಶಿಕಾಂತ್ ಕೋಟಿಮನಿ, ಬಳ್ಳಾರಿ ತಾಲೂಕು ತಹಶೀಲ್ದಾರರಾದ ಟಿ.ರೇಖಾ ಸೇರಿದಂತೆ ವಿವಿಧ ಇಲಾಖೆಗಳ ಅಧಿಕಾರಿಗಳು ಹಾಗೂ ರೈತರು, ಸಾರ್ವಜನಿಕರು ಇದ್ದರು.

Author
KhushiHost News CMS Pro ®
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಅಂಧ, ವಿಕಲಚೇತನರ ಬಾಳಿಗೆ ಬೆಳಕಾದ ಸ್ನೇಹ ಜ್ಯೋತಿ ಸಂಸ್ಥೆ : ಧರ್ಮಾಧ್ಯಕ್ಷ ಡೇರಿಕ್ ಫರ್ನಾಂಡಿಸ್ ಧಾರವಾಡ ಜಿಲ್ಲಾ ಕ್ರೀಡಾ ವಸತಿ ನಿಲಯದ ಅಥ್ಲೇಟಿಕ್ ಕ್ರೀಡಾಕೂದಲ್ಲಿ ಸಾಧನೆಮಹಿಳೆಯರ ಸಾಮಾಜಿಕ, ಆರ್ಥಿಕ ಪ್ರಗತಿಗೆ ಜ್ಞಾನವಿಕಾಸ ಕಾರ್ಯಕ್ರಮ ಪೂರಕ: ದಯಾಶೀಲಅಂಜನಾದ್ರಿ ದೇವಸ್ಥಾನದ ಆಡಳಿತ ವಿವಾದ: ನ್ಯಾಯಾಲಯದ ಆದೇಶದಂತೆ ಅವಕಾಶ ನೀಡಿಸುರಕ್ಷಿತ ಬಚಪನ್ ಅಭಿಯಾನ: ಬೂದಗುಂಪಾದಲ್ಲಿ ಮಕ್ಕಳ ಹಕ್ಕುಗಳು & ಕಾನೂನುಗಳ ಜಾಗೃತಿ ಕಾರ್ಯಕ್ರಮನವೆಂಬರ್ 3 ರಂದು ಗಂಗಾವತಿಯಲ್ಲಿ ಬಸವಾದಿ ಶಿವಶರಣರ ಬೃಹತ್ ಹಿಂದೂ ಸಮಾವೇಶನಾಳೆ ದಲಿತ ಸೇನೆ ರಾಜ್ಯ ಸಮಿತಿಯ ಪೂರ್ವಭಾವಿ ಸಭೆ ಹಾಗೂ ನೂತನ ಪದಾಧಿಕಾರಿಗಳಿಗೆ ಸನ್ಮಾನಹುಲಿಗೆಮ್ಮ ದೇವಿ ದೇವಸ್ಥಾನದ ಅಧಿಕಾರಿ ವಿರುದ್ಧ ದೂರು ದಾಖಲಿಸಿ ಕ್ರಮಕ್ಕೆ ಒತ್ತಾಯಕೊಪ್ಪಳ ಭಾಗ್ಯನಗರ ಬಂದ್‌ಗೆ ಹೈದರಾಬಾದ್ ಕರ್ನಾಟಕ ಯುವಶಕ್ತಿ ಬೆಂಬಲಹಣಕಾಸು ಒಳಗೊಳ್ಳುವಿಕೆ ಸ್ಯಾಚುರೇಶನ್ ಅಭಿಯಾನ: ವಿಶೇಷ ಜಾಗೃತಿ ಪೋಸ್ಟರ್ ಬಿಡುಗಡೆ