ಬಳ್ಳಾರಿ,ಸೆ,೨೯ : ಂIಆಙಔ ಯುವಜನ ಸಂಘಟನೆ ವತಿಯಿಂದ ಬಳ್ಳಾರಿಯ ಕೊಟ್ಟುರುಸ್ವಾಮಿ ಐಟಿಐ ನಲ್ಲಿ ಭಗತ್ ಸಿಂಗ್ ರವರ ೧೧೯ ನೆಯ ಜನ್ಮದಿನಾಚರಣೆ ಆಚರಿಸಲಾಯಿತು. ಈ ಸಂದರ್ಭದಲ್ಲಿ ಜಿಲ್ಲಾ ಕಾರ್ಯದರ್ಶಿ ಜಗದೀಶ್ ನೇಮಕಲ್ ಮಾತನಾಡಿ - ಭಗತ್ ಸಿಂಗ್ ಅವರ ಜೀವನದ ಹಲವಾರು ಮಹತ್ವದ ಅಂಶಗಳನ್ನು ನಾವು ಜೀವನದಲ್ಲಿ ಅಳವಡಿಸಿಕೊಳ್ಳಬೇಕು. ಕೇವಲ ಮಾಲಾರ್ಪಣೆ ಮಾಡಿ ಕಾರ್ಯಕ್ರಮಕ್ಕೋಸ್ಕರ ಮಾಡಿದರೆ ಅದು ಅವರಿಗೆ ಸಲ್ಲಿಸುವ ಗೌರವ ಆಗುವುದಿಲ್ಲ. ಬದಲಿಗೆ ಅವರ ವಿಚಾರಗಳನ್ನ ಜೀವನದಲ್ಲಿ ಅಳವಡಿಸಿಕೊಳ್ಳಬೇಕು. ಕೇವಲ ೨೩ ವಯಸ್ಸಿಗೆ ಅವರ ವೈಚಾರಿಕತೆ ಮತ್ತು ಹೋರಾಟ ಬ್ರಿಟಿಷರನ್ನೇ ನಡುಗಿಸಿತ್ತು. ರಾಜಿರಾಹಿತ ಸಮರಶೀಲ ಹೋರಾಟ ಮತ್ತು ಎಲ್ಲ ಧರ್ಮ ಜಾತಿಯ ಜನಗಳನ್ನು ಒಗ್ಗೂಡಿಸಿ ಹೋರಾಟ ಮಾಡುವ ಒಂದು ಕೆಲಸ ಬ್ರಿಟಿಷರಿಗೆ ನುಂಗಲಾರದ ತುತ್ತಾಗಿತ್ತು. ಅವರು ಸಾವಿನ ಕೊನೆಯ ಕ್ಷಣದ ವರೆಗೂ ಯಾವುದೇ ಅಳುಕಿಲ್ಲದೆ ತಮ್ಮ ತತ್ವ ಆದರ್ಷಗಳಿಗಾಗಿ ಮತ್ತು ಸ್ವತಂತ್ರ ಹೋರಾಟಕ್ಕೆ ಜೀವ ಕೊಡಲು ಭಾರತೀಯರು ಹೆದರುವುದಿಲ್ಲ ಎಂಬ ದಿಟ್ಟ ಸಂದೇಶವನ್ನು ನೀಡಿ ಹಲವಾರು ಹೋರಾಟಗಾರರಿಗೆ ಸ್ಫೂರ್ತಿ ನೀಡಿದರು. ಮತ್ತು ಇಂದಿನ ಸಮಸ್ಯೆಗಳಿಗೆ ಅಂದೆ ಅವರು ಪರಿಹಾರ ನೀಡಿದ್ದರು, ಶೋಷಣೆ ಮುಕ್ತ ಸಮಾಜ ನಿರ್ಮಾಣ ಮಾಡಲು ಸಮಾಜವಾದಿ ರಾಷ್ಟ್ರ ಕಟ್ಟುವ ಸಂಕಲ್ಪ ಮಾಡಿ ಅವರ ಸಂಘಟನೆಯ ಹೆಸರನ್ನೇ ಊಖಂ ಇಂದ ಊSಖಂ ಅಂತ ಬದಲಿಸಿ ಪ್ರತಿ ಹಂತದಲ್ಲೂ ರಾಜಿ ಆಗದೆ ರಾಜಿರಹಿತ ಹೋರಾಟ ಕಟ್ಟಿದ್ದರು. ಹಾಗಾಗಿ ಇಂದಿನ ಯುವಪೀಳಿಗೆ ಅವರ ವಿಚಾರಗಳನ್ನ ಮೈಗೂಡಿಸಿಕೊಂಡು ಇಂದಿನ ಸಮಸ್ಯೆಗಳಾದ ನಿರುದ್ಯೋಗ, ಭ್ರಷ್ಟಾಚಾರ, ಮಧ್ಯ ಮತ್ತು ಮಾದಕ ವಸ್ತುಗಳ ಮಾರಾಟದ ವಿರುದ್ಧ, ಕೋಮುಸಮಸ್ಯೆ, ಸಾಂಸ್ಕೃತಿಕ ಅದಃಪತನ ಗಳ ವಿರುದ್ಧ ಧ್ವನಿ ಎತ್ತಿ ಹೋರಾಟ ಕಟ್ಟಬೇಕಿದೆ ಎಂದರು.
ಕಾರ್ಯಕ್ರಮದ ಪ್ರಾಸ್ತಾವಿಕವಾಗಿ ಪ್ರಮೋದ್ ಈ. ಹೆಚ್ ಮಾತನಾಡಿದರು ಮತ್ತು ಕಾಲೇಜಿನ ಉಪನ್ಯಾಸಕರು ಮತ್ತು ವಿದ್ಯಾರ್ಥಿಗಳು ಉಪಸ್ಥಿತರಿದ್ದರು.