Press ID & Credential Portal
Apply / Verify  ➔
LIVE TV LocalCrimeNationalInternationalPoliticsBusinessEducationTechnologyEntertainmentSportsHealthFeatureTravelingBeautyRecipes
Press & Media Credential Portal
✕
1. Apply for Press ID Card
Register official reporter application with Email OTP.
➔
2. Download Approved Badge
Enter Card ID to receive authorization code via email.
3. Verify Reporter ID & Card (View Only)
For Public & Police: Check if card is authentic.
Local News

ಭಗತ್‌ಸಿಂಗ್ ಅವರ ದೇಶಪ್ರೇಮ ಆದರ್ಶವಾಗಿದೆ-ಸಿದ್ದಲಿಂಗಶ್ರೀ



ತಾಳಿಕೋಟೆ,  ಪ್ರಸಿದ್ಧ ವ್ಯಕ್ತಿಗಳನ್ನು ಅನುಸರಿಸುವುದಕ್ಕಿಂತ ದೇಶಕ್ಕಾಗಿ ಬದುಕಿದ ಮಹನೀಯರನ್ನು ತಮ್ಮ ಜೀವನದ ಆದರ್ಶವನ್ನಾಗಿ ಮಾಡಿಕೊಳ್ಳಬೇಕು. ಭಗತ್ ಸಿಂಗ್ ಅವರ ದೇಶಪ್ರೇಮ, ಧೈರ್ಯ ಮತ್ತು ತ್ಯಾಗ ಯುವಕರಿಗೆ ಸದಾ ಸ್ಫೂರ್ತಿಯಾಗಬೇಕು ಎಂದು ಶ್ರೀ ಖಾಸ್ಗತೇಶ್ವರ ಮಠದ ಪೀಠಾಧಿಪತಿ ಪರಮಪೂಜ್ಯ ಶ್ರೀ ಸಿದ್ಧಲಿಂಗ ದೇವರು ನುಡಿದರು.
      ಭಗತ್ ಸಿಂಗ್ ಯುವಕ ಮಂಡಳಿಯ ಹತ್ತನೇ ವರ್ಷದ ದಶಮಾನೋತ್ಸವ ಗಣೇಶ ಉತ್ಸವ ಅಂಗವಾಗಿ ಶಿವಾಜಿ ಮಹಾಜ್ ವೃತ್ತದಲ್ಲಿ ಆಯೋಜಿಸಲಾದ ಹಿಂದೂ ಏಕತಾ ಸಮಾವೇಶ ಸಮಾರಂಭದಲ್ಲಿ ದಿವ್ಯ ಸಾನಿದ್ಯ ವಹಿಸಿ ಮಾತನಾಡುತ್ತಿದ್ದ ಅವರು ಇಷ್ಟು ದೊಡ್ಡ ಪ್ರಮಾಣದಲ್ಲಿ ಆಯೋಜಿಸಿರುವುದು ಸಂತಸದ ಸಂಗತಿ. ಸಾಮಾನ್ಯ ಕುಟುಂಬಗಳ ಯುವಕರು ತಮ್ಮ ತಮ್ಮ ಕೆಲಸಗಳ ನಡುವೆ ಸಮಯ ಮಾಡಿಕೊಂಡು ಧಾರ್ಮಿಕ ಹಾಗೂ ಸಾಮಾಜಿಕ ಕಾರ್ಯಕ್ರಮಗಳನ್ನು ಒಗ್ಗಟ್ಟಿನಿಂದ ನಡೆಸುತ್ತಿರುವುದು ಶ್ಲಾಘನೀಯ. ತಾಳಿಕೋಟೆಯಲ್ಲಿ ಇಂತಹ ಯುವಶಕ್ತಿ ಇದೆ ಎಂಬುದನ್ನು ಈ ಕಾರ್ಯಕ್ರಮ ತೋರಿಸಿಕೊಟ್ಟಿದೆ ಯುವಕರು ಇದೇ ರೀತಿ ಧರ್ಮ, ಸಮಾಜ ಹಾಗೂ ರಾಷ್ಟ್ರದ ಹಿತದ ದಾರಿಯಲ್ಲಿ ಸಾಗಬೇಕು. ಒಗ್ಗಟ್ಟಿನಿಂದ ಉತ್ತಮ ಕಾರ್ಯಗಳನ್ನು ಕೈಗೊಳ್ಳುವ ಮೂಲಕ ಸಮಾಜದಲ್ಲಿ ಸಕಾರಾತ್ಮಕ ಬದಲಾವಣೆ ತರಬೇಕು ಎಂದು ಕರೆ ನೀಡಿದರು.
     ಬಸನಗೌಡ ಪಾಟೀಲ ಯತ್ನಾಳ್ ಅವರ ಜನಪ್ರಿಯತೆ ಹಾಗೂ ಸರಳತೆಯನ್ನು ಪ್ರಸ್ತಾಪಿಸಿದ ಶ್ರೀಗಳು, ಅಪಾರ ಜನಪ್ರಿಯತೆ ಮತ್ತು ಅಭಿಮಾನವಿದ್ದರೂ ಸರಳವಾಗಿ, ತಗ್ಗಿ-ಬಗ್ಗಿ ನಡೆದುಕೊಳ್ಳುವ ಗುಣ ಅವರಲ್ಲಿದೆ. ತಾಳಿಕೋಟೆಗೆ ಅವರು ಆಗಮಿಸಿದಾಗ ಸ್ವಯಂಪ್ರೇರಿತವಾಗಿ ಸಾವಿರಾರು ಸಂಖ್ಯೆಯಲ್ಲಿ ಜನರು ಸೇರುತ್ತಿರುವುದು ಅವರ ಮೇಲಿನ ಜನರ ಅಭಿಮಾನಕ್ಕೆ ಸಾಕ್ಷಿಯಾಗಿದೆ ಎಂದರು.
      ಇಂದು ದೇಶದಾದ್ಯಂತ ಯುವಕರು ಗಣೇಶೋತ್ಸವವನ್ನು ಅತ್ಯಂತ ಸಂಭ್ರಮದಿಂದ ಆಚರಿಸುತ್ತಿದ್ದಾರೆ. ಗಣೇಶೋತ್ಸವವನ್ನು ಕೇವಲ ಮನೆಗಳಿಗೆ ಸೀಮಿತವಾಗಿದ್ದ ಹಬ್ಬದಿಂದ ಸಾರ್ವಜನಿಕ ಉತ್ಸವವನ್ನಾಗಿ ರೂಪಿಸುವ ಮೂಲಕ ಸಮಾಜವನ್ನು ಜಾಗೃತಗೊಳಿಸಿ, ಸಂಘಟಿಸುವ ಉದ್ದೇಶದಿಂದ ಲೋಕಮಾನ್ಯ ಬಾಲ ಗಂಗಾಧರ ತಿಲಕರು ಗಣೇಶೋತ್ಸವಕ್ಕೆ ಹೊಸ ರೂಪ ನೀಡಿದರು. ಅಂದಿನ ಕಾಲದಲ್ಲಿ ದೇಶದ ಸ್ವಾತಂತ್ರ್ಯಕ್ಕಾಗಿ ಜನರನ್ನು ಸಂಘಟಿಸಿ, ಜಾಗೃತಿ ಮೂಡಿಸುವ ಮಹತ್ವದ ವೇದಿಕೆಯಾಗಿ ಗಣೇಶೋತ್ಸವ ರೂಪುಗೊಂಡಿತ್ತು ಎಂದರು.
    ಹಿಂದೂತ್ವ ಎಂದರೆ ವಿಶಾಲವಾದ ಜೀವನದೃಷ್ಟಿ, ಸಂಸ್ಕೃತಿ ಮತ್ತು ಪರಂಪರೆಯನ್ನು ಒಳಗೊಂಡಿರುವ ವಿಚಾರ. ನಮ್ಮ ಪೂರ್ವಜರು ನಮಗೆ ನೀಡಿರುವ ಈ ಪರಂಪರೆಯನ್ನು ಗೌರವಿಸಿ, ಸಮಾಜದಲ್ಲಿ ಶಾಂತಿ, ಸೌಹಾರ್ದತೆ ಹಾಗೂ ಜಾಗೃತಿಯನ್ನು ಬೆಳೆಸುವ ಜವಾಬ್ದಾರಿ ನಮ್ಮೆಲ್ಲರ ಮೇಲಿದೆ. ವಿಶೇಷವಾಗಿ ಶ್ರಾವಣ ಮಾಸವು ಹಬ್ಬ-ಹರಿದಿನಗಳ ಪವಿತ್ರ ಮಾಸವಾಗಿದೆ. ಇಂತಹ ಸಂದರ್ಭದಲ್ಲಿ ಗಣೇಶನ ಆರಾಧನೆಯ ಮೂಲಕ ಒಳ್ಳೆಯ ವಿಚಾರಗಳನ್ನು ಜೀವನದಲ್ಲಿ ಅಳವಡಿಸಿಕೊಳ್ಳಬೇಕು. ವಿಘ್ನೇಶ್ವರ ಎಂದರೆ ವಿಘ್ನಗಳನ್ನು ನಿವಾರಿಸುವವನು. ಆದ್ದರಿಂದ ರಾಜ್ಯವನ್ನು ಕಾಡುತ್ತಿರುವ ಮಳೆ ಕೊರತೆ ಹಾಗೂ ಬರದ ಪರಿಸ್ಥಿತಿ ದೂರವಾಗಿ, ಉತ್ತಮ ಮಳೆ ಸುರಿದು ನಮ್ಮ ರೈತರ ಬದುಕಿನಲ್ಲಿ ಸಂತೋಷ ಮೂಡಲಿ ಎಂದು ಶ್ರೀ ಗಣೇಶನಲ್ಲಿ ಪ್ರಾರ್ಥಿಸೋಣವೆಂದರು.
       ಇನ್ನೋರ್ವ ಬಿಜೆಪಿ ಮಾಜಿ ಜಿಲ್ಲಾದ್ಯಕ್ಷ ಆರ್.ಎಸ್. ಪಾಟೀಲ ಕೂಚಬಾಳ ಅವರು ಮಾತನಾಡಿ, ರೈತರು ಸಂಕಷ್ಟದಲ್ಲಿರುವ ಸಂದರ್ಭದಲ್ಲಿ ಕೇವಲ ಒಬ್ಬರ ಮೇಲೆ ಮತ್ತೊಬ್ಬರು ಆರೋಪ ಮಾಡುತ್ತಾ ಕಾಲಹರಣ ಮಾಡುವುದರಿಂದ ಸಮಸ್ಯೆ ಪರಿಹಾರವಾಗುವುದಿಲ್ಲ. ರೈತರ ಸಮಸ್ಯೆಗಳಿಗೆ ಸರ್ಕಾರ ತಕ್ಷಣ ಸ್ಪಂದಿಸಿ ಸೂಕ್ತ ಪರಿಹಾರ ಕಲ್ಪಿಸಬೇಕು ಎಂದು ಹೇಳಿದರು.
     ತಮ್ಮ ನೇರ ನಡೆ-ನುಡಿ, ಸ್ಪಷ್ಟವಾದ ಮಾತು ಹಾಗೂ ಸಮಾಜದ ವಿಚಾರದಲ್ಲಿ ತಮ್ಮದೇ ಆದ ನಿಲುವಿನ ಮೂಲಕ ರಾಜ್ಯ ಮತ್ತು ರಾಷ್ಟ್ರಮಟ್ಟದಲ್ಲಿ ಜನಪ್ರಿಯತೆ ಗಳಿಸಿರುವ ಬಸನಗೌಡ ಪಾಟೀಲ ಯತ್ನಾಳ್ ಅವರ ಮೇಲಿರುವ ಪ್ರೀತಿ ಅಭಿಮಾನ ಇಂದು ಸಾಕ್ಷೀಕರಿಸಿದೆ ಇಂದು ನಮ್ಮ ಯುವಕರು ಕೇವಲ ಉತ್ಸವ ಆಚರಿಸುವುದಕ್ಕೆ ಸೀಮಿತವಾಗದೆ, ರಾಷ್ಟ್ರದ ಭದ್ರತೆ, ಏಕತೆ ಹಾಗೂ ಪ್ರಜಾಪ್ರಭುತ್ವದ ಬಲವರ್ಧನೆಗಾಗಿ ಜವಾಬ್ದಾರಿಯುತವಾಗಿ ಕಾರ್ಯನಿರ್ವಹಿಸಬೇಕು. ಭಾರತದ ಕೋಟ್ಯಂತರ ಜನರ ಶಕ್ತಿ ಮತ್ತು ಯುವಕರ ಸಾಮರ್ಥ್ಯದಿಂದ ಭಾರತವನ್ನು ಮತ್ತಷ್ಟು ಬಲಿಷ್ಠ ರಾಷ್ಟ್ರವನ್ನಾಗಿ ಮಾಡುವ ಕಾರ್ಯದಲ್ಲಿ ನಾವೆಲ್ಲರೂ ಕೈಜೋಡಿಸೋಣವೆಂದರು. 

 

Author
KhushiHost News CMS Pro ®
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಅಂಧ, ವಿಕಲಚೇತನರ ಬಾಳಿಗೆ ಬೆಳಕಾದ ಸ್ನೇಹ ಜ್ಯೋತಿ ಸಂಸ್ಥೆ : ಧರ್ಮಾಧ್ಯಕ್ಷ ಡೇರಿಕ್ ಫರ್ನಾಂಡಿಸ್ ಧಾರವಾಡ ಜಿಲ್ಲಾ ಕ್ರೀಡಾ ವಸತಿ ನಿಲಯದ ಅಥ್ಲೇಟಿಕ್ ಕ್ರೀಡಾಕೂದಲ್ಲಿ ಸಾಧನೆಮಹಿಳೆಯರ ಸಾಮಾಜಿಕ, ಆರ್ಥಿಕ ಪ್ರಗತಿಗೆ ಜ್ಞಾನವಿಕಾಸ ಕಾರ್ಯಕ್ರಮ ಪೂರಕ: ದಯಾಶೀಲಅಂಜನಾದ್ರಿ ದೇವಸ್ಥಾನದ ಆಡಳಿತ ವಿವಾದ: ನ್ಯಾಯಾಲಯದ ಆದೇಶದಂತೆ ಅವಕಾಶ ನೀಡಿಸುರಕ್ಷಿತ ಬಚಪನ್ ಅಭಿಯಾನ: ಬೂದಗುಂಪಾದಲ್ಲಿ ಮಕ್ಕಳ ಹಕ್ಕುಗಳು & ಕಾನೂನುಗಳ ಜಾಗೃತಿ ಕಾರ್ಯಕ್ರಮನವೆಂಬರ್ 3 ರಂದು ಗಂಗಾವತಿಯಲ್ಲಿ ಬಸವಾದಿ ಶಿವಶರಣರ ಬೃಹತ್ ಹಿಂದೂ ಸಮಾವೇಶನಾಳೆ ದಲಿತ ಸೇನೆ ರಾಜ್ಯ ಸಮಿತಿಯ ಪೂರ್ವಭಾವಿ ಸಭೆ ಹಾಗೂ ನೂತನ ಪದಾಧಿಕಾರಿಗಳಿಗೆ ಸನ್ಮಾನಹುಲಿಗೆಮ್ಮ ದೇವಿ ದೇವಸ್ಥಾನದ ಅಧಿಕಾರಿ ವಿರುದ್ಧ ದೂರು ದಾಖಲಿಸಿ ಕ್ರಮಕ್ಕೆ ಒತ್ತಾಯಕೊಪ್ಪಳ ಭಾಗ್ಯನಗರ ಬಂದ್‌ಗೆ ಹೈದರಾಬಾದ್ ಕರ್ನಾಟಕ ಯುವಶಕ್ತಿ ಬೆಂಬಲಹಣಕಾಸು ಒಳಗೊಳ್ಳುವಿಕೆ ಸ್ಯಾಚುರೇಶನ್ ಅಭಿಯಾನ: ವಿಶೇಷ ಜಾಗೃತಿ ಪೋಸ್ಟರ್ ಬಿಡುಗಡೆ