ಘಟಪ್ರಭಾ., ಪಟ್ಟಣದ ಶ್ರೀ ಕಾಳಿಕಾದೇವಿಯ ದೇವಸ್ಥಾನ ಘಟಪ್ರಭಾದ ಭಕ್ತಿ ಮತ್ತು ಶಕ್ತಿಯ ಕೇಂದ್ರವಾಗಿದ್ದು ನವರಾತ್ರಿ ಉತ್ಸವ, ವಿಶ್ವಕರ್ಮ ಜಯಂತಿ ಸೇರಿದಂತೆ ಹಲವರು ಕಾರ್ಯಕ್ರಮ ಗಳನ್ನು ಮಾಡುವ ಮೂಲಕ ಧಾರ್ಮಿಕ ಸಾಂಸ್ಕೃತಿಕ ಪರಂಪರೆಗಳನ್ನು ಬೆಳೆಸಲು ವಿಶ್ವ ಕರ್ಮ ಸಮಾಜ ತನ್ನದೇ ಆದ ಕೊಡುಗೆ ನೀಡುತ್ತಿದೆ ಇದು ಅತ್ಯಂತ ಸ್ವಾಗತಾರ್ಹ ವಿಷಯ ಎಂದು ಘಟಪ್ರಭಾ ಹೊಸ ಮಠದ ಪೂಜ್ಯ ಶ್ರೀ ವಿರೂಪಾಕ್ಷ ಮಹಾಸ್ವಾಮಿಗಳು ಹೇಳಿದರು.
ಅವರು ಘಟಪ್ರಭಾದ ಶ್ರೀ ಕಾಳಿಕಾದೇವಿಯ ದೇವಸ್ಥಾನದಲ್ಲಿ ನವರಾತ್ರಿ ಉತ್ಸವದ ಅಂಗವಾಗಿ ನಡೆದ ದೇವಿ ಪುರಾಣ ಮಂಗಲ ಕಾರ್ಯಕ್ರಮದ ಸಾನಿಧ್ಯ ವಹಿಸಿ ಮಾತನಾಡಿದರು.
ಗುಬ್ಬಲಗುಡ್ಡ ಕೆಂಪಣ್ಣಾ ಸ್ವಾಮಿಗಳ ಮಠದ ಪೂಜ್ಯ ಮೃತ್ಯುಂಜಯ ದೇವರು ದೇವಿ ಮಹಾತ್ಮೆ ವಿಶ್ವಕರ್ಮ ಸಮಾಜದ ಇತಿಹಾಸ ಕುರಿತು ವಿವರವಾಗಿ ತಿಳಿಸಿದರು.
ಶ್ರೀ ಭೀಮಾಚಾರ್ಯ ಅವರು ಒಂಭತ್ತು ದಿನಗಳ ದೇವಿ ಪುರಾಣ ನಡೆಸಿ ಕೊಟ್ಟರು.
ಕಾಳಿಕಾ ದೇವಸ್ಥಾನ ಟ್ರಸ್ಟ್ ಅಧ್ಯಕ್ಷ ಡಾ. ವಿರೂಪಾಕ್ಷ ಪತ್ತಾರ ಅವರು ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದರು,ಘಟಪ್ರಭಾದ ಸಾಮಾಜಿಕ ಕಾರ್ಯಕರ್ತರಾದ ಶ್ರೀಕಾಂತ ವಿ ಮಹಾಜನ ಕಾಳಿಕಾದೇವಿಯ ಮೂರ್ತಿ ಮಾಡಿಸಿದ ಆನಂದ ಪತ್ತಾರ ದಂಪತಿಗಳು, ಕಾಳಪ್ಪ ಆಚಾರ್ಯ, ಭೀಮಾಚಾರ್ಯ ದಂಪತಿಗಳು ಸೇರಿದಂತೆ ಹಲವಾರು ಮಹನೀಯರನ್ನು ದೇವಸ್ಥಾನ ಟ್ರಸ್ಟ್ ವತಿಯಿಂದ ಸನ್ಮಾನ ಮಾಡಿ ಗೌರವಿಸಲಾಯಿತು
ಅತಿಥಿಗಳಾಗಿ ಮಾರುತಿ ವಿಜಯನಗರ, ಸುರೇಶ್ ಕರೋಶಿ, ಶಿವಪುತ್ರ ಕೊಗನೂರ, ವಿಠ್ಠಲ ಹುಕ್ಕೇರಿ ಇದ್ದರು.
ಮಾರುತಿ ಕೌಜಲಗಿ ನೇತೃತ್ವದ ಭಜನಾ ಮಂಡಳಿ ಸದಸ್ಯರು ಸಂಗೀತ ಸೇವೆ ಸಲ್ಲಿಸಿದರು,
ಪಾಂಡುರಂಗ ಪೋತದಾರ ಮಲ್ಲಿಕಾರ್ಜುನ ವಿ ಪತ್ತಾರ ಮೋಹನ ಪತ್ತಾರ, ಬಸವರಾಜ ಬಡಿಗೇರ, ಡಾ, ರಾಘವೇಂದ್ರ ಪತ್ತಾರ, ಸುರೇಶ್ ಪೋತದಾರ ,
ಡಾ ಕೋಣಿನ, ಡಾ ಹೂಗಾರ, ಶಂಕರ ಕುರಣಗಿ, ಡಾ ಎನ್ ವಾಯ್ ಪಾಟೀಲ ಶಿರಾಳಕರ, ಬಡಿಗೇರ ಪತ್ತಾರ ಪೋತದಾರ ಸೇರಿದಂತೆ ವಿಶ್ವ ಕರ್ಮ ಸಮಾಜ ಮತ್ತು ಸರ್ವ ಸಮಾಜಗಳ ನಾಗರೀಕರು ಭಾಗವಹಿಸಿದ್ದರು.