ನೇಸರಗಿ.,ರಾಜ್ಯದಲ್ಲಿ ದೊಡ್ಡ ಜಿಲ್ಲೆ ಆಗಿರುವ ಬೆಳಗಾವಿ, ಎಲ್ಲ ಒಳಪಂಗಡಗಳನ್ನು ನಾವು ಗಣನೆಗೆ ತೆಗೆದುಕೊಂಡು ಎಲ್ಲ ಉಪ ಜಾತಿಗಳನ್ನು ಸೇರಿಸಿಕೊಂಡು ಅವರೊಡನೆ ಬೆರೆತು ಒಂದಾಗಿ ಕಳೆದ ಹಲವಾರು ವರ್ಷಗಳಿಂದ ಶ್ರೀ ಬಸವೇಶ್ವರ ಜಯಂತಿ ಹಾಗೂ ಸಮಾಜಮುಖಿ ಕಾರ್ಯಕ್ರಮಗಳನ್ನು ನಡೆಸಲು ರಾಜಕಾರಣಿಗಳು, ಮಠಾಧೀಷರಿಂದ ಮಾತ್ರ ಸಾಧ್ಯವಿಲ್ಲ ಸಮಾಜದ ಕಟ ಕಡೆಯ ವ್ಯಕ್ತಿಯಿಂದ ಹಿಡಿದು ಎಲ್ಲರೂ ಸಮಾಜದ ಒಳಿತಿಗೆ ಕಾರ್ಯ ಮಾಡಬೇಕು. 5 ಲಕ್ಷ ಜನರನ್ನು ಸಮಾಜದ ಕಾರ್ಯಕ್ರಮಗಳಿಗೆ ಕುಡಿಸುವದು ಮುಖ್ಯ ಅಲ್ಲ ಅವರನ್ನು ಜಾಗ್ರತಿ ಮಾಡಿಸುವದು ಸಮಾಜದ ಎಲ್ಲರ ಕರ್ತವ್ಯ ಆಗಿದ್ದು, ಬಸವ ಜಯಂತಿ ಉತ್ಸವ ಸಮಿತಿ ಕಳೆದ ಹಲವಾರು ವರ್ಷಗಳಿಂದ ಗಮನಾರ್ಹ ಕೆಲಸ ಮಾಡುತ್ತಿದೆ ಎಂದು ಕಿತ್ತೂರು ಶಾಸಕ ಬಾಬಾಸಾಹೇಬ ಪಾಟೀಲ ಹೇಳಿದರು.
ಅವರು ರವಿವಾರದಂದು ಬೆಳಗಾವಿ ನಗರದಲ್ಲಿ ಬಸವ ಜಯಂತಿ ಉತ್ಸವ ಸಮಿತಿ ವತಿಯಿಂದ ಸನ್ಮಾನ ಸ್ವೀಕರಿಸಿ ಮಾತನಾಡಿದರು.
ಈ ಅಭಿನಂದನಾ ಸಭೆಯಲ್ಲಿ ಪೂಜ್ಯರಾದ ಡಾ. ಸಿದ್ದರಾಮ ಮಹಾಸ್ವಾಮಿಗಳು, ಸಹಕಾರಿ ಸಚಿವ ಲಕ್ಷ್ಮಣ ಸವದಿ,ಡಾ. ಅಲ್ಲಮಪ್ರಭು ಮಹಾಸ್ವಾಮಿಗಳು, ಕಾರಂಜಿಮಠದ ಶ್ರೀಗಳು,ಶಾಸಕ ಅಶೋಕ ಪಟ್ಟಣ,ಮಾಜಿ ರಾಜಸಭಾ ಸದಸ್ಯ ಈರಣ್ಣ ಕಡಾಡಿ , ಮಾಜಿ ಸಂಸದ ರಮೇಶ ಕತ್ತಿ, ವಿ ಪ ಸದಸ್ಯ ಚನ್ನರಾಜ ಹತ್ತಿಹೊಳಿ,ಮಾಜಿ ಶಾಸಕರಾದ ಮಹಾಂತೇಶ ದೊಡ್ಡಗೌಡರ, ಡಾ. ವಿಶ್ವನಾಥ ಪಾಟೀಲ, ಜಗದೀಶ ಮೆಟಗುಡ,ಮಾಜಿ ವಿ ಪ ಸದಸ್ಯ ಮಹಾಂತೇಶ ಕವಟಗಿಮಠ, ಡಾ. ರವಿ ಪಾಟೀಲ, ಡಾ. ಮಹಾಂತೇಶ ಕಡಾಡಿ, ಮುರಗೇಂದ್ರಗೌಡ ಪಾಟೀಲ, ಶಂಕರ ಗುಡಸ್, ಬಸವರಾಜ ರೊಟ್ಟಿ ಸೇರಿದಂತೆ ಜಿಲ್ಲೆಯ ಮುಖಂಡರು, ಬಸವ ಅಭಿಮಾನಿಗಳು ಉಪಸ್ಥಿತರಿದ್ದರು.