ಬೆಂಗಳೂರು: ಮೇ ಎರಡನೇ ವಾರದಲ್ಲಿ ಸಿಹಿ ಸುದ್ದಿ ನೀಡುವ ಭರವಸೆ ಹೈಕಮಾಂಡ್ ನೀಡಿದೆ ಎಂದು ವಿಧಾನಸಭೆ ಮುಖ್ಯ ಸಚೇತಕ ಹಾಗೂ ಶಾಸಕ Ashok Pattan ತಿಳಿಸಿದ್ದಾರೆ.
ಸಚಿವ ಸಂಪುಟ ಪುನರ್‌ರಚನೆ (Cabinet Reshuffle) ಕುರಿತಂತೆ ವಿಧಾನಸೌಧದಲ್ಲಿ ಪ್ರತಿಕ್ರಿಯಿಸಿದ ಅವರು, ಮೇ 2ನೇ ವಾರದಲ್ಲಿ ಸಿಹಿ ಸುದ್ದಿ ಕೊಡಲಾಗುತ್ತದೆ ಎಂದು ಸುರ್ಜೇವಾಲ ಭರವಸೆ ನೀಡಿದ್ದಾರೆ, ಅದಕ್ಕಾಗಿ ನಾವು ನಿರೀಕ್ಷೆಯಲ್ಲಿ ಇದ್ದೇವೆ ಎಂದರು. ಮೇ 4ರಂದು ಪಂಚ ರಾಜ್ಯಗಳ ಚುನಾವಣಾ ಫಲಿತಾಂಶ ಪ್ರಕಟವಾಗಲಿದ್ದು, ಅದರ ಬಳಿಕ ಸುಮಾರು 40 ಮಂದಿ ಶಾಸಕರು ದೆಹಲಿಗೆ ತೆರಳಿ ಹೈಕಮಾಂಡ್‌ನ್ನು ಮತ್ತೊಮ್ಮೆ ಭೇಟಿ ಮಾಡುವುದಾಗಿ ತಿಳಿಸಿದರು. D. K. Shivakumar ಅವರ ಹುಟ್ಟುಹಬ್ಬಕ್ಕೆ ಸಿಹಿ ಸುದ್ದಿ ಸಿಗುತ್ತದೆಯೇ ಇಲ್ಲವೇ ಎಂಬುದು ಹೈಕಮಾಂಡ್ ನಿರ್ಧಾರವಾಗಿದ್ದು, ಅವರಿಗೆ ಮುಂಗಡ ಶುಭಾಶಯಗಳನ್ನು ತಿಳಿಸುತ್ತೇನೆ ಎಂದು ಹೇಳಿದರು. ಸಂಪುಟ ಪುನರ್‌ರಚನೆ ಆಗಲೇಬೇಕೆಂಬುದು ನಮ್ಮ ಸ್ಪಷ್ಟ ಆಗ್ರಹ ಎಂದು ಹೇಳಿದರು.
ಸಚಿವ ಡಿ. ಸುಧಾಕರ್ ವಿಚಾರದಲ್ಲಿ H. D. Kumaraswamy ನೀಡಿದ ಹೇಳಿಕೆಗೆ ಪ್ರತಿಕ್ರಿಯಿಸಿದ ಅವರು, ಅವರು ವೆಂಟಿಲೇಟರ್‌ನಲ್ಲಿ ಇರುವ ಸಂದರ್ಭದಲ್ಲಿ ಇಂತಹ ಹೇಳಿಕೆಗಳು ಸರಿಯಲ್ಲ. ಇಂತಹ ಸೂಕ್ಷ್ಮ ಸಂದರ್ಭಗಳಲ್ಲಿ ಮಾನವೀಯತೆ ಕಾಪಾಡಿಕೊಳ್ಳಬೇಕು ಎಂದು ಕುಮಾರಸ್ವಾಮಿ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.