, ಜಮಖಂಡಿ;ಬಿಜೆಪಿಯ ಸೇವಾ ಸಂಕಲ್ಪ ಯಾತ್ರೆ ಅ.8 ಗುರುವಾರ ದಂದು ನಡೆಯಲಿದೆ. ಕಾರ್ಯಕ್ರಮದಲ್ಲಿ ರಾಜ್ಯ ಬಿಜೆಪಿ ಅಧ್ಯಕ್ಷ ಬಿ.ವೈ ವಿಜಯೀಂದ್ರ ಸೇರಿದಂತೆ ರಾಜ್ಯದ ಹಲವು ಮುಖಂಡರು ಯಾತ್ರೆಯಲ್ಲಿ ಭಾಗವಹಿಸಲಿದ್ದಾರೆ ಎಂದು ಶಾಸಕ ಜಗದೀಶ ಗುಡಗುಂಟಿ ತಿಳಿಸಿದರು, ಮಂಗಳವಾರ ಸಂಜೆ ಗೃಹ ಕಚೇರಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು ಪ್ರಧಾನಿ ನರೇಂದ್ರ ಮೋದಿಯವರ ಹುಟ್ಟುಹಬ್ಬದ ಅಂಗವಾಗಿ ದೇಶಾದ್ಯಂತ ಒಂದು ತಿಂಗಳ ಕಾಲ ಬಿಜೆಪಿ ಸೇವಾಸಂಕಲ್ಪ ಯಾತ್ರೆ ನಡೆಸುತ್ತದೆ ಎಂದು ತಿಳಿಸಿದರು. ಅಂದು ತಾಲುಕಿನ ಸಿದ್ದಾಪುರ ಗ್ರಾಮದ ಕೆರೆಯ ಬಳಿ ಸಸಿ ನೆಡುವ ಕಾರ್ಯಕ್ರಮ ವಿದೆ. ಮುಧೋಳ ಬೈಪಾಸ್ ರಸ್ತೆಯ ವೀರಭದ್ರ ದೇವಸ್ಥಾನ ದಿಂದ ನಗರದ ಪ್ರಮುಖ ಬೀದಿಗಳಲ್ಲಿ ಪಾದಯಾತ್ರೆ ಹಾಗೂ ಸಂಜೆ ಬಸವ ಭವನದಲ್ಲಿ ವೇದಿಕೆಯ ಕಾರ್ಯಕ್ರಮ ಇರುತ್ತದೆ ಎಂದು ಹೇಳಿದರು.
ಮಾಜಿ ಶಾಸಕ ಶ್ರೀಕಾಂತ ಕುಲಕರ್ಣಿ ಮಾತನಾಡಿ ವಿಕಸಿತ ಭಾರತ ಹಿನ್ನೆಲೆಯಲ್ಲಿ ಒಂದು ತಿಂಗಳ ವರೆಗೆ ಸೇವಾ ಸಂಕಲ್ಪಯಾತ್ರೆ ನಡೆಯುತ್ತಿದೆ.ಗುರುವಾರ ಮುಧೋಳ ಮತ್ತು ಜಮಖಂಡಿಗಳಲ್ಲಿ ಯಾತ್ರೆ ನಡೆಯಲಿದೆ. ಬೂತ್ ಮಟ್ಟದ ಕಾರ್ಯಕರ್ತರು ಹಾಗೂ ಪಕ್ಷದ ಹಿರಿಯರು, ಮುಖಂಡರು ಹೆಚ್ಚಿನ ಸಂಖ್ಯೆಯಲ್ಲಿ ಕಾರ್ಯಕ್ರಮ ದಲ್ಲಿ ಭಾಗವಹಿಸಿ ಯಶಸ್ವಿ ಗೊಳಿಸಬೇಕು ಎಂದು ಮನವಿ ಮಾಡಿದರು. ಕಳೆದ 6 ವರ್ಷಗಳಿಂದ ಜಿಲ್ಲಾ ಪಂಚಾಯತ್ ಹಾಗೂ ತಾಲುಕು ಪಂಚಾಯತಿಯ ಚುನಾವಣೆಗಳು ನಡೆದಿಲ್ಲ ವಾದ್ದರಿಂದ ಚುನಾಯಿತ ಪ್ರತಿನಿಧಿಗಳಿಲ್ಲದ ಕಾರಣ ವರ್ಷಕ್ಕೆ 3ಸಾವಿರ ಕೋಟಿ ಯಂತೆ ಸುಮಾರು 18 ಸಾವಿರ ಕೋಟಿ ಅನುದಾನ ಬಂದಿಲ್ಲ, ಈ ಬಾರಿ ಚುನಾವಣೆಗಳು ನಡೆದರೆ ಜಿಪಂ ಮತ್ತು ತಾಪಂ ಗಳಿಗೆ ಕೇಂದ್ರ ದಿಂದ ನೇರ ಅನುದಾನ ಬರುತ್ತದೆ ಎಂದು ಹೇಳಿದರು. ಮುಖಂಡರಾದ ಈಶ್ವರ ಆದೆಪ್ಪನವರ, ಮಹದೇವಪ್ಪ ಇಟ್ಟಿ, ಮಲ್ಲು ದಾನಗೌಡ, ಅಜಯ ಕಡಪಟ್ಟಿ, ಸಂಗಮೇಶ ದಳವಾಯಿ ಯೋಗಪ್ಪ ಸವದಿ ಗಣೇಶ ಶಿರಗಣ್ಣವರ ಮುಂತಾದವರಿದ್ದರು.