ಬೆಳಗಾವಿ,ಸೆ.೨೪ : ಡಾ. ಮಲ್ಲಿಕಾರ್ಜುನ ಛಬ್ಬಿ ಅವರಿಂದ ರಚಿತವಾದ ವಿಮರ್ಶೆ ಕೃತಿ *ಅನುವರ್ತನ* , ಮತ್ತು *ನವಿಲುತೋಟ* ಹಾಗೂ ಶ್ರೀಶೈಲ ಸಿ. ಹೆಬ್ಬಳ್ಳಿ (ದೊಡ್ಡವಾಡ) ಗಜಲ್ ಗಳನ್ನು ಒಳಗೊಂಡ ಕೃತಿ *ನೋವಿರದ ನಲಿವು ಎಲ್ಲಿರುವುದು* ಮತ್ತು *ಬಾಳ ಕಡಲಿನ ತೆರೆಗಳು* ಕವನ ಸಂಕಲನ ಹಾಗೂ ಅಪ್ಪಾಸಾಹೇಬ ಬ. ಲಿಂಬಿಗಿಡದ ಅವರ ಕವನ ಸಂಕಲನಗಳನ್ನು ಒಳಗೊಂಡ *ಕಳಕಳಿಯ ಕಂದಮ್ಮಗಳು* ಹಾಗೂ ಕರ್ನಾಟಕ ರಾಜ್ಯ ವಿಜ್ಞಾನ ಪರಿಷತ್ತು ಬೆಂಗಳೂರು ಇವರಿಂದ ಪ್ರಕಟಿಸಿದ ಪ್ರೊ. ಜೆ. ಆರ್. ಲಕ್ಷ್ಮಣರಾವ್ ಹಾಗೂ ಪ್ರೊ. ಅಡ್ಯನಡ್ಕ ಕೃಷ್ಣಭಟ್ ಅವರು ಸಂಪಾದಿಸಿರುವ *ಇಂಗ್ಲಿಷ್-ಕನ್ನಡ ವಿಜ್ಞಾನ ಶಬ್ದಕೋಶ* ಎಂಬ ಆರು ಪುಸ್ತಕಗಳನ್ನು ಕೇಂದ್ರ ಬಸವ ಸಮಿತಿಯ ಹಿರಿಯ ನಿರ್ದೇಶಕರು, ಕನ್ನಡ ಸಾಹಿತ್ಯ ಪರಿಷತ್ತಿನ ಬೆಳಗಾವಿ ಜಿಲ್ಲಾ ಮಾಜಿ ಅಧ್ಯಕ್ಷರಾದ ಮೋಹನ ಬಸನಗೌಡ ಪಾಟೀಲ ಅವರು ಮೂಡಲಗಿ ತಾಲ್ಲೂಕಿನ ಹುಣಶ್ಯಾಳ ಪಿ. ವಾಯ್. ಗ್ರಾಮದ ಆರೂಢ ಜ್ಯೋತಿ ಚೈತನ್ಯ ಪ್ರಾಥಮಿಕ ಶಾಲೆಯ ಕೋಚಿಂಗ್ ವಿಭಾಗದ ಶಿಕ್ಷಕರು ಉದಯೋನ್ಮುಖ ಬರಹಗಾರ,ಕವಿ ಶಿವಾನಂದ ಬಸನಾಯ್ಕ ಪಟ್ಟಿಹಾಳ (ಇಂಚಲ)* ಇವರಿಗೆ ಪರಿಚಯಿಸಲು ನೀಡುವ ಮೂಲಕ ಸಾಹಿತ್ಯದ ಬೆಳವಣಿಗೆಗೆ ಮತ್ತಷ್ಟು ಪ್ರೋತ್ಸಾಹ ನೀಡಿದರು.