ಮಾಸ್ಕೋ: ರಷ್ಯಾ ಮಿಲಿಟರಿ ಸಾರಿಗೆ ವಿಮಾನ ಬಂಡೆಗೆ ಅಪ್ಪಳಿಸಿ ಪತನವಾಗಿದ್ದು, ಅದರಲ್ಲಿದ್ದ ಎಲ್ಲಾ 29 ಮಂದಿ ಸಾವನ್ನಪ್ಪಿದ್ದಾರೆ. ಉಕ್ರೇನ್ ನಿಂದ ರಷ್ಯಾ ಸ್ವಾಧೀನ ಪಡಿಸಿಕೊಂಡ ಕಪ್ಪು ಸಮುದ್ರ ಸಮೀಪದ ದ್ವೀಪದಲ್ಲಿ ವಿಮಾನ ಪತನವಾಗಿದೆ. 23 ಪ್ರಯಾಣಿಕರು ಮತ್ತು ಆರು ಸಿಬ್ಬಂದಿ ಸಾವನ್ನಪ್ಪಿದ್ದಾರೆ ಎಂದು ರಕ್ಷಾ ರಕ್ಷಣಾ ಸಚಿವಾಲಯ ದೃಢಪಡಿಸಿದೆ.
ಕ್ರೈಮಿಯಾದಲ್ಲಿ ರಷ್ಯಾದ ಮಿಲಿಟರಿ ವಿಮಾನ ರಾಡಾರ್ ನಿಂದ ತಪ್ಪಿಸಿಕೊಂಡು ಪತನಗೊಂಡಿದೆ, 29 ಜನರು ಸಾವನ್ನಪ್ಪಿದ್ದಾರೆ. ಮಾರ್ಚ್ 31 ರಂದು ನಾಪತ್ತೆಯಾಗಿದ್ದ ರಷ್ಯಾದ ಆಂಟೊನೊವ್ -26 ಮಿಲಿಟರಿ ವಿಮಾನವು ಕ್ರಿಮಿಯನ್ ಪರ್ಯಾಯ ದ್ವೀಪದ ಮೇಲೆ ಹಾರುತ್ತಿದ್ದಾಗ ಪತನಗೊಂಡಿದೆ.
ಸಿಬ್ಬಂದಿ ಸೇರಿದಂತೆ 29 ಜನರು ಸಾವನ್ನಪ್ಪಿದ್ದಾರೆ. ಶೋಧ ಮತ್ತು ರಕ್ಷಣಾ ತಂಡವು ಅಪಘಾತದ ಸ್ಥಳವನ್ನು ಪತ್ತೆಹಚ್ಚಿದೆ. ವಿಮಾನದ ಅವಶೇಷಗಳ ಮೇಲೆ ಬಾಹ್ಯ ಪ್ರಭಾವದ ಯಾವುದೇ ಲಕ್ಷಣಗಳು ಕಂಡುಬಂದಿಲ್ಲ. ತಾಂತ್ರಿಕ ವೈಫಲ್ಯವು ಅಪಘಾತಕ್ಕೆ ಕಾರಣವಾಗಿರಬಹುದು. ಈವರೆಗೆ ಅಧಿಕಾರಿಗಳು ಏನನ್ನೂ ದೃಢಪಡಿಸಿಲ್ಲ.
ಮಾರ್ಚ್ 31 ರಂದು ಮಾಸ್ಕೋ ಸಮಯ ಸುಮಾರು 18:00 ಗಂಟೆಗೆ, ಕ್ರಿಮಿಯನ್ ಪರ್ಯಾಯ ದ್ವೀಪದ ಮೇಲೆ ನಿಗದಿತ ಹಾರಾಟದಲ್ಲಿದ್ದಾಗ An-26 ಮಿಲಿಟರಿ ಸಾರಿಗೆ ವಿಮಾನದೊಂದಿಗೆ ಸಂಪರ್ಕ ಕಡಿತಗೊಂಡಿದೆ” ಎಂದು ರಕ್ಷಣಾ ಸಚಿವಾಲಯ ತಿಳಿಸಿದೆ.
“ಶೋಧ ಮತ್ತು ರಕ್ಷಣಾ ತಂಡವು An-26 ವಿಮಾನದ ಅಪಘಾತದ ಸ್ಥಳವನ್ನು ಪತ್ತೆಹಚ್ಚಿದೆ. ಸ್ಥಳದಿಂದ ಬಂದ ವರದಿಗಳ ಪ್ರಕಾರ, ಆರು ಸಿಬ್ಬಂದಿ ಮತ್ತು ವಿಮಾನದಲ್ಲಿದ್ದ 23 ಪ್ರಯಾಣಿಕರು ಸಾವನ್ನಪ್ಪಿದ್ದಾರೆ” ಎಂದು ಸಚಿವಾಲಯ ತಿಳಿಸಿದೆ.