ಮುಗಳಖೋಡ ,06 : ಸರಳ ಆಡಳಿತ ನಡೆಸಲು ಸ್ಪಂದಿಸದೆ ಅತಿ ಗೈರು ಹಜಾರಾತಿಯಲ್ಲಿ ಏಕ ಪಕ್ಷಿಯ ನಡೆಗೆ ಬೇಸತ್ತು ಮುಖ್ಯಾಧಿಕಾರಿ ಪಾವಡಿ ಶೆಟ್ಟಿ ಬದಲಾಯಿಸಿ ಪ್ರಾಮಾಣಿಕ ಹಾಗೂ ದಕ್ಷ ಅಧಿಕಾರಿ ನೇಮಿಸಿ ಎಂದು
ಪುರಸಭೆಯ ಅಧ್ಯಕ್ಷೆ ಶಾಂತವ್ವ ಗೋಕಾಕ ಉಪಾಧ್ಯಕ್ಷೆ ಲಕ್ಷ್ಮೀ ಭಾಯಿ ಶೇಗುಣಸಿ ಭಾಜಪ ಪಕ್ಷದ ಆಡಳಿತದ ಸರ್ವ್ ಸದಸ್ಯರು ಪುರಸಭೆಯ ಕಚೇರಿ ಮುಂದೆ ಅಹೊರಾತ್ರಿ ಧರಣಿ ಸತ್ಯಾಗ್ರಹ ಕೈಗೊಂಡಿರುವರು .
ಸೋಮವಾರ 5 ಬೆಳಿಗ್ಗೆ ಹನ್ನೊಂದು ಘಂಟೆಗೆ ಏಕಾ ಏಕಿ ಮುಖ್ಯಾಧಿಕಾರಿ ಮಹೇಂದ್ರ ಪಾವಡಿ ಶೆಟ್ಟಿ ಗೈರು ಹಜಾರಾತಿಯಲ್ಲಿ ಕರ್ತವ್ಯಕ್ಕೆ ಬೆರಳೆಣಿಕೆಯ ಸಿಬ್ಬಂದಿಗಳು ಕಛೇರಿಗೆ ಆಗಮಿಸುತ್ತಿದ್ದಂತೆ ಮುಖ್ಯಾಧಿಕಾರಿ ಬರುವವರೆಗೂ ಯಾರೂ ಕಛೇರಿ ಕೆಲಸಕ್ಕೆ ಅಣಿಯಾಗಕೂಡದು ಈ ವಿಷಯ ಮೇಲಧಿಕಾರಿಗಳಿಗೆ ತಿಳಿಸಿ ಏಕಪಕ್ಷೀಯ ಹಾಗೂ ದೋಷಪೊರಿತ ಆಡಳಿತಕ್ಕೆ ಬೇಸತ್ತು ಸಾರ್ವಜನಿಕರಿಂದ ದೋಷಿತರಾಗಿ ಒಳ್ಳೆಯ ಆಡಳಿತ ವ್ಯವಸ್ಥೆ ನಮ್ಮದಾಗಿರಬೇಕು ಎಂಬ ಅಚಲವಾದ ನಿರ್ಧಾರ ನಮ್ಮದಾಗಿದ್ದು ಒಳ್ಳೆಯ ಅಧಿಕಾರಿ ಹಾಗೂ ಅವಶ್ಯ ಸಿಬ್ಬಂದಿಗಳನ್ನು ನಿಯೋಜಿಸುವರೆಗೆ ನಾವು ಅಹೊರಾತ್ರಿ ಧರಣಿ ಸತ್ಯಾಗ್ರಹ ನಡೆಸುತ್ತೆವೆ ಎಂದು ಸದಸ್ಯ ಚೇತನ ಯಡವಣ್ಣವರ ಹಾಲಪ್ಪಾ ಶೇಗುಣಸಿ ಧರಣಿ ನಿರತ ಸದಸ್ಯರು ಕಾರ್ಯಕರ್ತರು ಹೇಳಿದರು.
ಅಧ್ಯಕ್ಷೆ ಶಾಂತವ್ವ ಗೋಕಾಕ, ಉಪಾಧ್ಯಕ್ಷ ಲಕ್ಷ್ಮೀ ಭಾಯಿ ಶೇಗುಣಸಿ, ಗಂಗವ್ವಾ ಬೆಳಗಲಿ , ಗೀತಾ ಪ್ರಧಾನಿ, ಅನುಸೂಯಾ ಲಮಾಣಿ, ಮಂಗಲ ಪಣದಿ,ಐರವ್ವ ವಾಡೆನ್ನವರ , ಚೇತನ ಯಡವಣ್ಣವರ, ಹಾಲಪ್ಪಾ ಶೇಗುಣಸಿ, ರಾಜು ನಾಯಿಕ ,ಮಹಾಂತೇಶ ಯರಡೆತ್ತಿ ,ಕೆಂಪಣ್ಣಾ ಅಂಗಡಿ ಹಾಗೂ ಮುಖಂಡರು ಕಾರ್ಯಕರ್ತರು ಇದ್ದರು.
ಕೆಆರ್ ಎಸ್ ಪಕ್ಷದ ಮೋಹನ ಲಮಾಣಿ ತಮ್ಮ ಸಂಗಡಿಗರೊಂದಿಗೆ ಮುಖ್ಯಾಧಿಕಾರಿ ಹಾಗೂ ಇಲ್ಲಿಯ ಅವ್ಯವಸ್ಥೆ ಆಡಳಿತದಿಂದ ಸಾರ್ವಜನಿಕರಿಗೆ ಬಹಳ ದಿನದಿಂದ ತೊಂದರೆ ಯಾಗುತ್ತಿದ್ದು ನಿಮ್ಮ ಹೋರಾಟಕ್ಕೆ ನಮ್ಮ ಪಕ್ಷದ ಬೆಂಬಲ ವಿದೆ ಎಲ್ಲರೂ ಒಂದಾಗಿ ಒಳ್ಳೆಯ ಕೆಲಸ ಮಾಡೋಣ ಎಂದು ಧರಣಿ ಸತ್ಯಾಗ್ರಹ ಬೆಂಬಲ ನೀಡಿ ಕೆಲವೊಂದಿಷ್ಟು ಪ್ರಾಮಾಣಿಕ ಪತ್ರಕರ್ತರಿಂದ ಪತ್ರಿಕೆಗಳಲ್ಲಿ ಇಂತಹ ಸುದ್ದಿ ಪ್ರಕಟವಾಗುತ್ಯವೆ ಪ್ರಮುಖ ಸುದ್ದಿ ಮಾಧ್ಯಮಗಳಲ್ಲಿ ಪ್ರಕಟ ವಾಗುದಿಲ್ಲಾ ಎಂದಾಗ ಇದರಲ್ಲಿ ಅಪ್ರಾಮಾಣಿಕರು ಯಾರೂ ಎಂದು ಹೇಳಲೇ ಬೇಕು ಎಂದು ಪತ್ರಕರ್ತರು ಪಟ್ಟು ಹಿಡಿದಾಗ ಕೆಲವು ದೃಶ್ಯ ಮಾಧ್ಯಮಗಳ ಹೆಸರು ಹೇಳಿ ವಿಷಾದ ವ್ಯಕ್ತಪಡಿಸಿದರು.
ಫೋಟೋ.........ಅಧ್ಯಕ್ಷೆ ಶಾಂತವ್ವಾ ಗೋಕಾಕ ಮುಂದಾಳತ್ವದಲ್ಲಿ ಅಹೊರಾತ್ರಿ ಧರಣಿ ಕೈಗೊಂಡ ಪುರಸಭೆ ಸದಸ್ಯರು.