ಘಟಪ್ರಭಾ.,ಪ್ರತಿ ವರ್ಷದಂತೆ ಈ ವರ್ಷವೂ ಸಹ ಘಟಪ್ರಭಾ ಪುರಸಭೆಯಲ್ಲಿ ಪೌರ ಕಾರ್ಮಿಕರ ದಿನಾಚರಣೆಯನ್ನು ಸೆಪ್ಟೆಂಬರ್ 23 ರಂದು ಆಚರಿಸಲಾಯಿತು.
ಸಾನಿಧ್ಯವನ್ನು ವಹಿಸಿದ್ದ ಗುಬ್ಬಲಗುಡ್ಡ ಶ್ರೀ ಕೆಂಪಯ್ಯಾ ಸ್ವಾಮಿ ಮಠದ ಡಾ. ಮಲ್ಲಿಕಾರ್ಜುನ ಮಹಾಸ್ವಾಮಿಗಳು ಮಾತನಾಡಿ ಪೌರ ಕಾರ್ಮಿಕರ ಶ್ರಮದಿಂದ ಸಾರ್ವಜನಿಕರು ಸೌಖ್ಯವಾಗಿದ್ದರೆ ಎಂದರು.
ಅಧ್ಯಕ್ಷತೆಯನ್ನು ಪುರಸಭೆಯ ಮುಖ್ಯಾಧಿಕಾರಿ ಶ್ರೀ ಮತಿ ಎಂ ಎಸ್ ಪಾಟೀಲ ಅವರು ವಹಿಸಿ ಪೌರಕಾರ್ಮಿಕರ ಕರ್ತವ್ಯವನ್ನು ಮೆಚ್ಚಿ ಹಿತ ನುಡಿ ಗಳನ್ನು ಹೇಳಿದರು.
ಈ ಸಂದರ್ಭದಲ್ಲಿ ಪೂಜ್ಯ ಸ್ವಾಮೀಜಿಯವರನ್ನು ಹಾಗೂ ಸಾಮಾಜಿಕ ಕಾರ್ಯಕರ್ತರಾದ ಶ್ರೀಕಾಂತ ವಿ ಮಹಾಜನ ಅವರನ್ನು, ಮತ್ತು ಎಲ್ಲಾ ಪೌರ ಕಾರ್ಮಿಕರನ್ನು ಘಟಪ್ರಭಾ ಪುರಸಭೆಯ ವತಿಯಿಂದ ಸನ್ಮಾನ ಮಾಡಿ ಅಭಿನಂದಿಸಲಾಯಿತು.
ಈ ಸಂದರ್ಭದಲ್ಲಿ ಹಿರಿಯರಾದ ಡಿ ಎಮ್ ದಳವಾಯಿ ಕನ್ನಡ ರಕ್ಷಣಾ ವೇದಿಕೆ ರಾಜ್ಯಾಧ್ಯಕ್ಷ ಡಾ. ಕೆಂಪಣ್ಣಾ ಚೌಕಾಶಿ, ಮಲ್ಲಿಕಾರ್ಜುನ ತುಕ್ಕಾನಟ್ಟಿ, ಪ್ರವೀಣ ಮಟಗಾರ, ಮಾರುತಿ ದುಂಡಪ್ಪಾ ಹುಕ್ಕೇರಿ, ಈರಗೌಡ ಕಲಕುಟಗಿ, ಲಕ್ಷ್ಮಣ ಮೇತ್ರಿ, ಕುಮಾರ್ ಕರ್ಪೂರಮಠ, ಸಲೀಮ್ ಕಬ್ಬಿಣ, ನಾಗರಾಜ ನಾಯಿಕ , ರಾಜಶೇಖರ ರಜಪೂತವಶೇಖರ ಹೊನಕುಂಟಿ,ರಾಜು ವಗ್ಗನವರ,ವಿಠ್ಠಲ ಕೌಜಲಗಿ ಮತ್ತು ಘಟಪ್ರಭಾ ಪುರಸಭೆಯ ಎಲ್ಲಾ ಸಿಬ್ಬಂದಿಗಳು ಪೌರಕಾರ್ಮಿಕರು ಭಾಗವಹಿಸಿದ್ದರು.