ನವದೆಹಲಿ: ಸೋಷಿಯಲ್ ಮೀಡಿಯಾದಲ್ಲಿ ‘ಕಾಕ್ರೋಚ್ ಜನತಾ ಪಾರ್ಟಿ’ ಭಾರೀ ಸದ್ದು ಮಾಡುತ್ತಿದೆ. ಫಾಲೋವರ್ಸ್ ಸಂಖ್ಯೆಯಲ್ಲಿ ಕೇವಲ ನಾಲ್ಕೇ ದಿನಗಳಲ್ಲಿ ಬಿಜೆಪಿಯನ್ನು ಸಿಜೆಪಿ ಮೀರಿಸಿ ಅಚ್ಚರಿ ಮೂಡಿಸಿದೆ. ಇನ್‌ಸ್ಟಾಗ್ರಾಮ್‌ನಲ್ಲಿ ಬಿಜೆಪಿಗೆ 8.7 ಮಿಲಿಯನ್ (87 ಲಕ್ಷ) ಫಾಲೋವರ್ಸ್ ಇದ್ದರೆ, ಈ ಡಿಜಿಟಲ್ ಪಾರ್ಟಿಯ ಫಾಲೋವರ್ಸ್ ಸಂಖ್ಯೆ 10.2 ಮಿಲಿಯನ್ (1.2 ಕೋಟಿ) ಗಡಿ ದಾಟಿದೆ. ಇದರೊಂದಿಗೆ ‘ಕಾಕ್ರೋಚ್ ಜನತಾ ಪಾರ್ಟಿ’ ಹೊಸ ಮೈಲಿಗಲ್ಲು ನಿರ್ಮಿಸಿದೆ.