ತಾಳಿಕೋಟೆ, ಪಟ್ಟಣದ ಶ್ರೀ ಖಾಸ್ಗತೇಶ್ವರ ಮಠದಲ್ಲಿ ಪೂಜ್ಯ ಶ್ರೀ ಖಾಸ್ಗತ ಮಹಾಶಿವಯೋಗಿಗಳ ೧೩೦ನೇ ಹಾಗೂ ಪೂಜ್ಯ ಶ್ರೀ ಮ.ನಿ.ಪ್ರ. ವಿರಕ್ತ ಮಹಾಸ್ವಾಮಿಗಳ ೧೨ನೇ ವರ್ಷದ ಪುಣ್ಯಸ್ಮರಣೋತ್ಸವ ಹಾಗೂ ಧರ್ಮಸಭೆ ಅ.೧ರಂದು ಗುರುವಾರ ಸಂಜೆ ೭ ಗಂಟೆಗೆ ಜರುಗಲಿದೆ.
ಪೂಜ್ಯ ಶ್ರೀ ಸಿದ್ದಲಿಂಗ ದೇವರ ದಿವ್ಯ ಪ್ರೇರಣೆಯ ಮೇರೆಗೆ ಧರ್ಮಸಭೆ ಹಾಗೂ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಆಯೋಜಿಸಲಾಗಿದ್ದು ಈ ಕಾರ್ಯಕ್ರಮದಲ್ಲಿ ಕೋಡೆಕಲ್ಲದ ಶ್ರೀ ಮ.ನಿ.ಪ್ರ. ಶಿವಕುಮಾರ ಮಹಾಸ್ವಾಮಿಗಳು ಹಾಗೂ ವಡವಡಗಿಯ ಶ್ರೀ ಮ.ನಿ.ಪ್ರ. ವೀರಸಿದ್ಧ ಮಹಾಸ್ವಾಮಿಗಳು ದಿವ್ಯ ಸಾನಿಧ್ಯ ವಹಿಸಲಿದ್ದು, ಗುಳಬಾಳದ ಪೂಜ್ಯ ಶ್ರೀ ಮರಿಹುಚ್ಚೇಶ್ವರ ಸ್ವಾಮಿಗಳು ಸಾನಿಧ್ಯ ವಹಿಸಲಿದ್ದಾರೆ. ರೊಟ್ಟಿಗಿಯ ಶ್ರೀ ವೇ.ಮೂ. ರಾಚಯ್ಯ ಶಾಸ್ತ್ರಿಗಳು ಹಿರೇಮಠ ಅವರು ಪ್ರವಚನ ಉಪಸ್ಥಿತರಿರಲಿದ್ದಾರೆ.
ಮುಖ್ಯ ಅತಿಥಿಗಳಾಗಿ ಎಸ್.ಕೆ.ಬಾಲಕೀಯರ ಪ್ರೌಢ ಶಾಲೆಯ ಮುಕ್ಯ ಶಿಕ್ಷಕ ಎ.ಬಿ.ಇರಾಜ ಅವರು ಆಗಮಿಸಲಿದ್ದಾರೆ.
ರಾತ್ರಿ ೯ ಗಂಟೆಗೆ ಸಂಗೀತ ಸಂಜೆ ಹಾಗೂ ಪ್ರಶಸ್ತಿ ಪುರಸ್ಕಾರ ಕಾರ್ಯಕ್ರಮ ನಡೆಯಲಿದ್ದು, ಶ್ರೀ ಖಾಸ್ಗತೇಶ್ವರ ಮಠದ ಪೂಜ್ಯ ಶ್ರೀ ಸಿದ್ಧಲಿಂಗ ದೇವರು ದಿವ್ಯ ಸಾನಿಧ್ಯ ವಹಿಸಲಿದ್ದಾರೆ. ಉದ್ಘಾಟಕರಾಗಿ ನಿವೃತ್ತ ಸಂಗೀತ ಶಿಕ್ಷಕ ಮಲ್ಲಿಕಾರ್ಜುನ ಭಜಂತ್ರಿ ಅವರು ಆಗಮಿಸಲಿದ್ದು ಅತಿಥಿಗಳಾಗಿ ಕೇಂಭಾವಿ ಸಂಗೀತ ಶಿಕ್ಷಕ ಬಸವರಾಜ ಭಂಟನೂರ, ಕಾಶಿನಾಥ ಸಾಲಿಮಠ, ಹಿರಿಯ ಪತ್ರಕರ್ತರಾದ ಜಿ.ಟಿ.ಘೋರ್ಪಡೆ, ಈಶ್ವರ ಬಡಿಗೇರ, ಪರಶುರಾಮ ಗುಬ್ಬೇವಾಡ ಅವರು ಆಗಮಿಸಲಿದ್ದಾರೆ.
ಈ ಸಂದರ್ಭದಲ್ಲಿ ಸಮಾಜದ ವಿವಿಧ ಕ್ಷೇತ್ರಗಳಲ್ಲಿ ಸೇವೆ ಸಲ್ಲಿಸಿದ ಶಿವಾನಂದ ಈ. ಹೂಗಾರ, ಸುಭಾಸ್ ಭೀ. ದಾಸರ, ಸರೋಜನಿ ನಿಂ. ಮಾಡಬಾಳ, ಪರಶುರಾಮ ಭೀ. ಗುಬ್ಬೇವಾಡ, ಲಕ್ಷ್ಮಣಸಿಂಗ ಆ. ಬಿಜಾಪುರ ಹಾಗೂ ಗುಂಡಣ್ಣ ಸಿ. ಹಂದಿಗನೂರ ಅವರಿಗೆ ವಿರಕ್ತಶ್ರೀ ಪ್ರಶಸ್ತಿ ನೀಡಿ ಗೌರವಿಸಲಾಗುವುದು.
ಇದೇ ಸಮಯದಲ್ಲಿ ಮಹ್ಮದಹರ್ಷಿದ ಅತ್ತಾರ, ರಾಜು ಅಲ್ಲಾಪೂರ ಅವರಿಗೆ ವಿಶೇಷ ಸನ್ಮಾನ ಜರುಗಲಿದೆ.
ಖ್ಯಾತ ಹಿಂದುಸ್ತಾನಿ ಶಾಸ್ತ್ರೀಯ ಸಂಗೀತ ಗಾಯಕ ಬಸವರಾಜ ವಂದಲಿ, ಆಕಾಶವಾಣಿ ಕಲಾವಿದೆ ಕು. ವಿಭಾ ಹೆಗಡೆ (ಬೆಂಗಳೂರು), ತಬಲಾ ವಾದಕ ಅಕ್ಷಯ ಜೋಶಿ (ಬೆಂಗಳೂರು) ಸೇರಿದಂತೆ ವಿವಿಧ ಹಿನ್ನೆಲೆ ಗಾಯಕರು ಹಾಗೂ ವಾದಕ ವೃಂದದವರಿಂದ ಅಹೋರಾತ್ರಿ ಸಂಗೀತ ಕಾರ್ಯಕ್ರಮಗಳು ಜರುಗಲಿವೆ.
ಸರ್ವಧರ್ಮದ ಭಕ್ತಾದಿಗಳು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡು ಶ್ರೀ ಖಾಸ್ಗತರ, ವಿರಕ್ತಶ್ರೀಗಳ ಕೃಪೆಗೆ ಪಾತ್ರರಾಗಬೇಕೆಂದು ಪ್ರಕಟನೆ ತಿಳಿಸಿದೆ.
ಇಂದಿನಿಂದ ಆದ್ಯಾತ್ಮೀಕ ಪ್ರವಚನ
ಶ್ರೀ ಖಾಸ್ಗತ ಹಾಗೂ ವಿರಕ್ತಶ್ರೀಗಳ ಪುಣ್ಯಸ್ಮರಣೋತ್ಸವ ಅಂಗವಾಗಿ ಇಂದು ದಿ. ೨೬ ರಿಂದ ಶ್ರೀಮಠದಲ್ಲಿ ಸಾಯಂಕಾಲ ೭ ಗಂಟೆಯಿಂದ ೮ ಗಂಟೆಯವರೆಗೆ ಆದ್ಯಾತ್ಮೀಕ ಪ್ರವಚನ ನಡೆಯಲಿದ್ದು ಪ್ರವಚನಕಾರರಾಗಿ ಶ್ರೀ ವೇ.ಮೂ. ರಾಚಯ್ಯ ಶಾಸ್ತ್ರಿಗಳು ಹಿರೇಮಠ ಅವರು ಆಗಮಿಸಲಿದ್ದಾರೆ.