ತಾಳಿಕೋಟೆ: ತಾಲೂಕಿನ ಬಿ. ಸಾಲವಾಡಗಿ ಗ್ರಾಮದ ೫೦ ವರ್ಷದ ಮಹಿಳೆಯೊಬ್ಬರು ಕಾಣೆಯಾಗಿರುವ ಕುರಿತು ತಾಳಿಕೋಟೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಬಿ. ಸಾಲವಾಡಗಿ ಗ್ರಾಮದ ನಿವಾಸಿ ಸುವರ್ಣ ಗಂಡ ಗೌಡಪ್ಪಗೌಡ ಬಿರಾದಾರ (೫೦) ಕಾಣೆಯಾದ ಮಹಿಳೆ. ಇವರು ಮಾನಸಿಕ ಕಾಯಿಲೆಯಿಂದ ಬಳಲುತ್ತಿದ್ದು, ಸೆ. ೨೭ರಂದು ಬೆಳಿಗ್ಗೆ ೧೦ ಗಂಟೆಗೆ ಬಿ. ಸಾಲವಾಡಗಿ ಗ್ರಾಮದ ತಮ್ಮ ಮನೆಯಿಂದ ತಾಳಿಕೋಟೆಯಲ್ಲಿರುವ ತಮ್ಮ ಸಂಬಂಧಿಕರ ಮನೆಗೆ ಹೋಗುವುದಾಗಿ ಹೇಳಿ ತೆರಳಿದ್ದರು. ಆದರೆ, ತಾಳಿಕೋಟೆಯ ಮನೆಗೂ ತಲುಪದೆ, ಸ್ವಗ್ರಾಮದ ಮನೆಗೂ ಮರಳದೆ ಕಾಣೆಯಾಗಿದ್ದಾರೆ ಎಂದು ಮಹಿಳೆಯ ಸಂಬಂಧಿ ಜ್ಯೋತಿ ಹಣಮಂತರೆಡ್ಡಿ ಬಿರಾದಾರ ಅವರು ಠಾಣೆಗೆ ದೂರು ಸಲ್ಲಿಸಿದ್ದರಲ್ಲಿ ತಿಳಿಸಿದ್ದಾರೆ.
ಮನೆಯಿಂದ ಹೂಗುವಾಗ ಹಸಿರು ಬಣ್ಣದ ಸೀರೆ ತೊಟ್ಟಿದ್ದು ಕಣ್ಣಡ ಭಾಷೆ ಮಾತನಾಡುತ್ತಾಳೆ, ಬಿಳಿ ಬಣ್ಣದ ಸಾದಾರಣ ಮೈಕಟ್ಟು, ಎತ್ತರು ೫.೨ ಹೊಂದಿದ್ದು ಈ ಬಗ್ಗೆ ಯಾರಿಗಾದರೂ ಮಾಹಿತಿ ಸಿಕ್ಕಲ್ಲಿ ದೂರವಾಣಿ ಸಂಖ್ಯೆ : ೦೮೩೫೬-೨೬೬೩೩೩, ೯೪೮೦೮೦೪೨೩೭, ೯೪೮೦೮೦೪೨೬೫, ಸಂಪರ್ಕಿಸಬೇಕೆಂದು ಪಿಎಸ್ಐ ಶ್ರೀಮತಿ ಜ್ಯೋತಿ ಖೊತ್ ಅವರು ತಿಳಿಸಿದ್ದಾರೆ.