ಚಿಕ್ಕಮಗಳೂರು: ಚಿನ್ನ ಅಡವಿಟ್ಟು ಪಡೆದ ಸಾಲದ (Gold Loan) ಹಣ ಖಾತೆಗೆ ಜಮೆಯಾದ ಕೆಲವೇ ಕ್ಷಣಗಳಲ್ಲಿ ಸೈಬರ್ ವಂಚಕರು ಬ್ಯಾಂಕ್ (Bank) ಖಾತೆಯಿಂದ ಹಣ ಎಗರಿಸಿದ ಘಟನೆ ಚಿಕ್ಕಮಗಳೂರಲ್ಲಿ (Chikkamagaluru) ನಡೆದಿದೆ.
ನಗರದ ವಕೀಲರೊಬ್ಬರು ಬ್ಯಾಂಕ್‌ನಲ್ಲಿ ಚಿನ್ನ ಅಡವಿಟ್ಟು 4.14 ಲಕ್ಷ ರೂ. ಸಾಲ ಪಡೆದಿದ್ದರು. ಆದರೆ ಬ್ಯಾಂಕ್‌ನಿಂದ ಹೊರಬರುವ ಮುನ್ನವೇ ಅವರ ಖಾತೆಯಿಂದ 99,584 ರೂ. ಹಣ ಮಾಯವಾಗಿದೆ. ವಿಶೇಷವೆಂದರೆ ಯಾವುದೇ ಓಟಿಪಿ ಬಂದಿಲ್ಲ, ಅನುಮಾನಾಸ್ಪದ ಎಪಿಕೆ ಲಿಂಕ್ ಕೂಡ ಬಂದಿಲ್ಲ. ಆದರೂ ಅಮೆಜಾನ್ ಪೇ ಮೂಲಕ ವಂಚಕರು ಹಣ ವರ್ಗಾಯಿಸಿಕೊಂಡಿದ್ದಾರೆ. ಹಣ ಕಳೆದುಕೊಂಡ ವಕೀಲರು ಚಿಕ್ಕಮಗಳೂರು ಠಾಣೆಯಲ್ಲಿ ದೂರು ದಾಖಲಿಸಿದ್ದು, ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ.