Press ID & Credential Portal
Apply / Verify  ➔
LIVE TV LocalCrimeNationalInternationalPoliticsBusinessEducationTechnologyEntertainmentSportsHealthFeatureTravelingBeautyRecipes
Press & Media Credential Portal
✕
1. Apply for Press ID Card
Register official reporter application with Email OTP.
➔
2. Download Approved Badge
Enter Card ID to receive authorization code via email.
3. Verify Reporter ID & Card (View Only)
For Public & Police: Check if card is authentic.
Crime News

ಸುಪ್ರೀಂ ಕೋರ್ಟ್‌ನಲ್ಲಿ ದರ್ಶನ್‌ ಎರಡನೇ ಜಾಮೀನು ಅರ್ಜಿ

ನವದೆಹಲಿ: ರೇಣುಕಾಸ್ವಾಮಿ ಹತ್ಯೆ ಪ್ರಕರಣದಲ್ಲಿ (Renukaswamy Case) ಬಂಧನದಲ್ಲಿರುವ ನಟ ದರ್ಶನ್‌ (Actor Darshan) ಮತ್ತೊಮ್ಮೆ ಜಾಮೀನಿಗಾಗಿ ಸುಪ್ರೀಂ ಕೋರ್ಟ್‌ (Supreme Court) ಮೊರೆ ಹೋಗಿದ್ದಾರೆ.

ಹಿರಿಯ ವಕೀಲ ಮುಕುಲ್ ರೋಹ್ಟಗಿ ಅವರ ಕಚೇರಿಯಿಂದ ದರ್ಶನ್ ಪರ ಜಾಮೀನು ಅರ್ಜಿ ಸಲ್ಲಿಸಲಾಗಿದೆ. ಜೈಲು ಸೇರಿದ ಎಂಟು ತಿಂಗಳ ಬಳಿಕ ಈ ಅರ್ಜಿ ಸಲ್ಲಿಕೆಯಾಗಿದ್ದು, ಮೇ 4ರಂದು ವಿಚಾರಣೆಗೆ ದಿನಾಂಕ ನಿಗದಿಯಾಗಿದೆ.

ಜಾಮೀನು ಅರ್ಜಿಯಲ್ಲಿ, ಪ್ರಕರಣದ ಟ್ರಯಲ್ ಈಗಾಗಲೇ ಆರಂಭವಾಗಿದ್ದರೂ ಎಂಟು ತಿಂಗಳಾದರೂ ಸಾಕ್ಷಿಗಳ ವಿಚಾರಣೆ ಪೂರ್ಣಗೊಂಡಿಲ್ಲ ಎಂದು ಉಲ್ಲೇಖಿಸಲಾಗಿದೆ. ಸಾಕ್ಷಿಗಳ ವಿಚಾರಣೆ ನಿಧಾನಗತಿಯಲ್ಲಿ ಸಾಗುತ್ತಿದ್ದು, ಈ ವೇಗದಲ್ಲಿ ಮುಂದುವರಿದರೆ ಟ್ರಯಲ್ ಮುಗಿಯಲು ಇನ್ನೂ ಹಲವು ವರ್ಷಗಳು ಬೇಕಾಗಬಹುದು ಎಂದು ತಿಳಿಸಲಾಗಿದೆ.

ಇದಲ್ಲದೆ, ಟ್ರಯಲ್‌ಗೆ ಪೂರ್ಣ ಸಹಕಾರ ನೀಡಲು ಸಿದ್ಧನಿರುವುದಾಗಿ ದರ್ಶನ್ ಅರ್ಜಿಯಲ್ಲಿ ತಿಳಿಸಿದ್ದಾರೆ. ಈ ಹಿನ್ನೆಲೆ, ಏಪ್ರಿಲ್ ಎರಡನೇ ವಾರದಲ್ಲಿ ಮಧ್ಯಂತರ ಜಾಮೀನು ಮಂಜೂರು ಮಾಡುವಂತೆ ಮನವಿ ಸಲ್ಲಿಸಲಾಗಿದೆ.

ಇದುವರೆಗೆ ಟ್ರಯಲ್ ಪ್ರಾರಂಭವಾದ ನಂತರ ಕೇವಲ 15 ಸಾಕ್ಷಿಗಳ ವಿಚಾರಣೆ ಮಾತ್ರ ನಡೆದಿದೆ. ಆದರೆ ಪ್ರಕರಣದಲ್ಲಿ ಒಟ್ಟು 273 ಸಾಕ್ಷಿಗಳಿದ್ದು, ವಿಚಾರಣೆ ಪ್ರಕ್ರಿಯೆ ಇನ್ನೂ ದೀರ್ಘವಾಗುವ ಸಾಧ್ಯತೆ ಇದೆ.

ಟ್ರಯಲ್ ಕೋರ್ಟ್‌ನಲ್ಲಿ ರೇಣುಕಾಸ್ವಾಮಿ ಪೋಷಕರನ್ನು ಹೊರತುಪಡಿಸಿ, ಮುಖ್ಯವಾಗಿ ಮಹಜರು ಸಾಕ್ಷಿಗಳ ವಿಚಾರಣೆ ಮಾತ್ರ ನಡೆಯುತ್ತಿದೆ ಎಂದು ತಿಳಿಸಲಾಗಿದೆ.

ಇದೇ ವೇಳೆ, ಆರೋಪಿಗಳಿಂದ ಟ್ರಯಲ್ ಅವಧಿಯಲ್ಲಿ ವಿವಿಧ ಅರ್ಜಿಗಳನ್ನು ಸಲ್ಲಿಸಲಾಗಿದ್ದು, ಅವು ವಿಚಾರಣೆಯಲ್ಲಿ ವಿಳಂಬಕ್ಕೆ ಕಾರಣವಾಗಿವೆ.

ಟ್ರಯಲ್ ವೇಳೆ ಸಲ್ಲಿಸಲಾದ ಅರ್ಜಿಗಳ ವಿವರ:

  • ಹಾಸಿಗೆ ಮತ್ತು ದಿಂಬು ನೀಡುವಂತೆ ಮನವಿ

  • ಮನೆ ಊಟ ನೀಡಲು ವಿನಂತಿ

  • ಓಪನ್ ಕೋರ್ಟ್‌ನಲ್ಲಿ ಹಾಜರುಪಡಿಸುವಂತೆ ಕೋರಿಕೆ

  • ಕುಟುಂಬ ಸದಸ್ಯರನ್ನು ಪ್ರತ್ಯೇಕವಾಗಿ ಭೇಟಿ ಮಾಡಲು ಅನುಮತಿ

  • ತನಿಖಾಧಿಕಾರಿಗಳ ಹೇಳಿಕೆ ಸುಳ್ಳು ಎಂದು ಆರೋಪ

  • ಮೊಬೈಲ್ ಸೀಜ್ ವೇಳೆ ಕೊಠಡಿ ಟೈಲ್ಸ್ ಬದಲಾವಣೆ ಕುರಿತು ಆಕ್ಷೇಪಣೆ

ಇವುಗಳ ಹೊರತಾಗಿ, ಎಂಟು ತಿಂಗಳ ಅವಧಿಯಲ್ಲಿ ಏಳುಕ್ಕಿಂತ ಹೆಚ್ಚು ಪ್ರತ್ಯೇಕ ಅರ್ಜಿಗಳನ್ನು ಸಲ್ಲಿಸಲಾಗಿದೆ.

ಹಿಂದೆ ಆಗಸ್ಟ್ 14ರಂದು ಸುಪ್ರೀಂ ಕೋರ್ಟ್ ಜಾಮೀನು ರದ್ದುಪಡಿಸಿ ಆರೋಪಿಗಳಿಗೆ ತಕ್ಷಣ ಶರಣಾಗುವಂತೆ ಸೂಚಿಸಿತ್ತು. ಆ ಆದೇಶದ ನಂತರ ಜೈಲು ಸೇರಿದ ದರ್ಶನ್, ಇದೀಗ ಮಧ್ಯಂತರ ಜಾಮೀನು ಕೋರಿ ಮತ್ತೊಮ್ಮೆ ಅರ್ಜಿ ಸಲ್ಲಿಸಿದ್ದಾರೆ.

Author
KhushiHost News CMS Pro ®
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ನಾಗಮಂಗಲ: ತಾಲೂಕಿನ ರಾ ಹೆ 75ರ ವರಾಹಸಂದ್ರ ಸಮೀಪ ಕೆಎಸ್‌ಆರ್‌ಟಿಸಿ ಬಸ್‌ ಹಾಗೂ ಟ್ರ್ಯಾಕ್ಟ‌ರ್ ಅಪಘಾತ : ಬಸ್ ಚಾಲಕ ದುರ್ಮರಣದೇವರಾಜ್ ಎಂಬ ವ್ಯಕ್ತಿ ಅನುಮಾನಾಸ್ಪದ ಸಾವು: ಕೊಲೆ ಶಂಕೆ, ಪೊಲೀಸ್ ತನಿಖೆಗೆ ಗ್ರಾಮಸ್ಥರ ಒತ್ತಾಯಉತ್ತಮ ವ್ಯಕ್ತಿತ್ವ, ಚಾಣಾಕ್ಷ ಕಾರ್ಯವೈಖರಿ; ವರ್ಗಾವಣೆಯಾದ ಚಾ ವಿ ಸ ನಿ ನಿ ಯ AE ಮತ್ತು ಪ್ರಭಾರ AEE ಅವರಿಗೆ ಭಾವಪೂರ್ಣ ಬೀಳ್ಕೊಡುಗೆಹಾಸನ: ನಿರ್ಮಾಣ ಹಂತದ ಮನೆಯ ಕ್ಯೂರಿಂಗ್ ವೇಳೆ ವಿದ್ಯುತ್ ಅವಘಡ – ಕುಣಿಗಲ್ ಆರ್‌ಎಫ್‌ಒ ಜಗದೀಶ್ ಸಾವುಟಾಟಾ ಪವರ್ ಲೈಸೆನ್ಸ್‌ಗೆ ವಿರೋಧ: ಹೆಚ್.ಡಿ. ರೇವಣ್ಣರಿಂದ ಸಂಪೂರ್ಣ ಬೆಂಬಲವಿದ್ಯುತ್ ವಿತರಣಾ ಖಾಸಗೀಕರಣ ವಿರೋಧಿಸಿ ಸಂಸದರಿಗೆ ಮನವಿಇರಾನ್–ಅಮೆರಿಕ ಶಾಂತಿ ಮಾತುಕತೆ ನಡುವೆ ಖಮೇನಿ ಅಂತ್ಯಕ್ರಿಯೆ ದಿನಾಂಕ ಘೋಷಣೆಮಧ್ಯಪ್ರಾಚ್ಯದಲ್ಲಿ ಕಾಳಗದ ಕಾವು: US ನೌಕಾನೆಲೆ ಮೇಲೆ ಇರಾನ್ ದಾಳಿ, ಪ್ರತೀಕಾರ ಅನಿವಾರ್ಯ ಎಂದ ಟ್ರಂಪ್13 ಕಿ.ಮೀ ಕಾಮಗಾರಿ ಪೂರ್ಣಗೊಂಡ ತುಮಕೂರು–ಚಿತ್ರದುರ್ಗ ರೈಲು ಯೋಜನೆ; ಸಂಪೂರ್ಣ ಮಾರ್ಗ ಯಾವಾಗ ಸಿದ್ಧ?ಬಂಡೀಪುರದಲ್ಲಿ ಭದ್ರತಾ ಲೋಪ: ರೌಡಿ ಶೀಟರ್ ಗ್ಯಾಂಗ್‌ನ ಎಣ್ಣೆ ಪಾರ್ಟಿ ಬಹಿರಂಗ