ಬಳ್ಳಾರಿ: 15:ಶರನ್ನವರಾತ್ರಿಯ ಪವಿತ್ರ ದಿನಗಳಲ್ಲಿ ತಾಲ್ಲೂಕಿನ ಕಕ್ಕಬೇವಿನಹಳ್ಳಿಯ ಆಂಜನೇಯ ಸ್ವಾಮಿ ದೇಗುಲದಲ್ಲಿ ಪ್ರತಿ ವರ್ಷದ ಪದ್ಧತಿಯಂತೆ ಶ್ರೀ ಚಿದಾನಂದ ಅವಧೂತರು ಬರೆದ ಶ್ರೀ ದೇವಿ ಮಹಾತ್ಮೆ ಪುರಾಣ ಕಾರ್ಯಕ್ರಮಕ್ಕೆ ಶ್ರೀ ಅಜಾತ ಶಂಭುಲಿಂಗ ಶಿವಾಚಾರ್ಯ ಮಹಾಸ್ವಾಮಿಗಳು, ಪುರವರ್ಗ ಮಠ, ಜಂಗಮರ ಹೊಸಳ್ಳಿ, ಆಂಧ್ರಪ್ರದೇಶ ಚಾಲನೆ ನೀಡಿ ಸಾನಿಧ್ಯ ನುಡಿಗಳನ್ನು ಆಡಿದರು.
ಇದೇ ಸಂದರ್ಭದಲ್ಲಿ ಪುರಾಣ ಪ್ರವಚನಕಾರರಾಗಿ ಶ್ರೀ ಬಸವರಾಜ ಅಮಾತಿ, ಕನ್ನಡ ಸಹಾಯಕ ಪ್ರಾಧ್ಯಾಪಕರು ಇಂಡೋ ಅಮೆರಿಕನ್ ಪದವಿ ಕಾಲೇಜು, ಬಳ್ಳಾರಿ. ಸಂಗೀತ ಮತ್ತು ಪುರಾಣ ಪಠಣಕಾರರಾಗಿ ಶ್ರೀ ಲೋಕೇಶ, ಸಿಡಿಗಿನಮಳೆ. ತಬಲವಾದಕರಾಗಿ ಶ್ರೀ ಎರ್ರಿಸ್ವಾಮಿ ಸಿಡಿಗಿನಮಳೆ ಇವರ ಸಾರಥ್ಯದಲ್ಲಿ ಶ್ರೀ ದೇವಿ ಮಹಾತ್ಮೆ ಪುರಾಣ ಪ್ರವಚನವು ಕಾರ್ಯಕ್ರಮ ಒಂಭತ್ತು ದಿನಗಳ ಕಾಲ ಸಾಗಿ ಬಂದು ವಿಜಯದಶಮಿಯಂದು ಮಹಾ ಮಂಗಲಗೊಳ್ಳುವುದು.
ಪುರಾಣ ಪ್ರವಚನ ಕಾರ್ಯಕ್ರಮದಲ್ಲಿ ಗ್ರಾಮದ ಆನಂದ ಆಚಾರಿ ವಿಶ್ವಕರ್ಮ, ಗೆಣಕಿಹಾಳ್ ಶಿವಕುಮಾರ ಗೌಡ, ಹಾಲುಮತ ಮಲ್ಲಿಕಾರ್ಜುನಪ್ಪ ಮುಂತಾದವರು ಸೇರಿದಂತೆ ಗ್ರಾಮದ ಸಕಲ ಸದ್ಭಕ್ತರು, ಸುತ್ತಮುತ್ತಲಿನ ಗ್ರಾಮದ ಸಕಲ ಸದ್ಭಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಉಪಸ್ಥಿತರಿದ್ದರು.