Press ID & Credential Portal
Apply / Verify  ➔
LIVE TV LocalCrimeNationalInternationalPoliticsBusinessEducationTechnologyEntertainmentSportsHealthFeatureTravelingBeautyRecipes
Press & Media Credential Portal
✕
1. Apply for Press ID Card
Register official reporter application with Email OTP.
➔
2. Download Approved Badge
Enter Card ID to receive authorization code via email.
3. Verify Reporter ID & Card (View Only)
For Public & Police: Check if card is authentic.
Local News | Districts Bijapur

ಧರ್ಮಸ್ಥಳ ಸಂಸ್ಥೆಯ ಸೇವಾ ಕಾರ್ಯಗಳು ಮಾದರಿ-ನಾಯಕ

ಶ್ರೀ ಮೂಲಸ್ಥಾನೇಶ್ವರ ದೇವಸ್ಥಾನದ ಜೀರ್ಣೋದ್ಧಾರಕ್ಕೆ ಧರ್ಮಸ್ಥಳ ಸಂಸ್ಥೆಯಿಂದ ೨.೫೦ ಲಕ್ಷ ಅನುದಾನ

ತಾಳಿಕೋಟೆ, ಸಮಾಜದಿಂದ ದೊರೆಯುವ ಸಂಪನ್ಮೂಲಗಳನ್ನು ವೈಯಕ್ತಿಕ ಉದ್ದೇಶಗಳಿಗೆ ಸೀಮಿತಗೊಳಿಸದೆ, ಸಮಾಜಮುಖಿ ಕಾರ್ಯಗಳಿಗೆ ಹಾಗೂ ಧರ್ಮದ ಉಳಿವು ಮತ್ತು ಬೆಳವಣಿಗೆಗೆ ವಿನಿಯೋಗಿಸುವ ಕಾರ್ಯವನ್ನು ಶ್ರೀ ಕ್ಷೇತ್ರ ಧರ್ಮಸ್ಥಳದ ಪೂಜ್ಯ ಶ್ರೀ ವಿರೇಂದ್ರ ಹೆಗಡೆ ಅವರು ಮಾಡುತ್ತಾ ಸಾಗಿದ್ದಾರೆಂದು ಧರ್ಮಸ್ಥಳ ಸಂಸ್ಥೆಯ ಜಿಲ್ಲಾ ನಿರ್ದೇಶಕ ಮೋಹನ್ ನಾಯಕ ಅವರು ಹೇಳಿದರು.
      ಬುಧವಾರರಂದು ಪಟ್ಟಣದ ಐತಿಹಾಸಿಕ ರಾಜವಾಡೆಯ ಶ್ರೀ ಮೂಲಸ್ಥಾನೇಶ್ವರ(ಮಹಾದೇವ) ದೇವಸ್ಥಾನದ ಜೀರ್ಣೋದ್ಧಾರ ಕಾರ್ಯಕ್ಕೆ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ವತಿಯಿಂದ ಮಂಜೂರಾದ ೨.೫೦ ಲಕ್ಷ ಮೊತ್ತದ ಡಿ.ಡಿ.ಯನ್ನು ದೇವಸ್ಥಾನ ಕಮಿಟಿಯವರಿಗೆ ವಿತರಿಸಿ ಮಾತನಾಡಿದ ಅವರು ದೇವಸ್ಥಾನದ ಐತಿಹಾಸಿಕ ಪರಂಪರೆಯ ಸಂರಕ್ಷಣೆ ಹಾಗೂ ಧಾರ್ಮಿಕ ಮತ್ತು ಸಾಮಾಜಿಕ ಕಾರ್ಯಗಳಿಗೆ ಧರ್ಮಸ್ಥಳ ಸಂಸ್ಥೆ ನೀಡುತ್ತಿರುವ ಕೊಡುಗೆ ದೊಡ್ಡದಿದೆ ಗ್ರಾಮೀಣ ಪ್ರದೇಶಗಳಲ್ಲಿನ ದೇವಸ್ಥಾನಗಳ ಜೀರ್ಣೋದ್ಧಾರಕ್ಕೆ ಧರ್ಮಸ್ಥಳ ಸಂಸ್ಥೆ ನೆರವು ನೀಡುತ್ತಿದೆ. ಮಹಿಳೆಯರನ್ನು ಸ್ವಾವಲಂಬಿಗಳನ್ನಾಗಿ ಮಾಡುವುದು, ಸ್ವಸಹಾಯ ಸಂಘಗಳ ಮೂಲಕ ಆರ್ಥಿಕ ಸಬಲೀಕರಣಕ್ಕೆ ಪ್ರೋತ್ಸಾಹ ನೀಡುವುದು ಹಾಗೂ ಬಡ ಕುಟುಂಬಗಳ ಬದುಕಿಗೆ ಆಸರೆಯಾಗುವಂತಹ ಅನೇಕ ಜನಪರ ಕಾರ್ಯಗಳನ್ನು ಸಂಸ್ಥೆ ನಿರಂತರವಾಗಿ ನಡೆಸುತ್ತಿದೆ. ಇಂತಹ ಸೇವಾ ಕಾರ್ಯಗಳಿಂದ ಅನೇಕ ಕುಟುಂಬಗಳು ಅಭಿವೃದ್ಧಿ ಹೊಂದಲು ಸಾಧ್ಯವಾಗಿದೆ ಎಂದು ತಿಳಿಸಿದ ಅವರು ಪರಮಪೂಜ್ಯ ಡಾ. ವೀರೇಂದ್ರ ಹೆಗ್ಗಡೆಯವರ ಮಾರ್ಗದರ್ಶನದಲ್ಲಿ ಧಾರ್ಮಿಕ ಹಾಗೂ ಸಾಮಾಜಿಕ ಸೇವಾ ಕಾರ್ಯಗಳು ಮುಂದುವರಿಯುತ್ತಿವೆ. ತಾಳಿಕೋಟೆಯ ಶ್ರೀ ಮೂಲಸ್ಥಾನೇಶ್ವರ ಮಹಾದೇವನ ಅನುಗ್ರಹದೊಂದಿಗೆ ದೇವಸ್ಥಾನದ ಜೀರ್ಣೋದ್ಧಾರ ಕಾರ್ಯ ಯಶಸ್ವಿಯಾಗಲಿ ಎಂದರು.
       ಇನ್ನೋರ್ವ ರಾಜವಾಡೆಯ ಗಣ್ಯರಾದ ಚಿದಂಬರ ಕರಮರಕರ ಅವರು ಮಾತನಾಡಿ ತಾಳಿಕೋಟೆಯ ರಾಜವಾಡೆಯ ಶ್ರೀ ಮೂಲಸ್ಥಾನೇಶ್ವರ ದೇವಸ್ಥಾನವು ಪಟ್ಟಣದ ಐತಿಹಾಸಿಕ ಹಾಗೂ ಧಾರ್ಮಿಕ ಪರಂಪರೆಯ ಪ್ರಮುಖ ಕೇಂದ್ರವಾಗಿದೆ. ಊರಿನ ಧಾರ್ಮಿಕ ಜೀವನದಲ್ಲಿ ಮಹತ್ವದ ಸ್ಥಾನ ಪಡೆದಿದೆ ಪ್ರಾಚೀನ ವಾಸ್ತುಶಿಲ್ಪದ ವೈಶಿಷ್ಟ್ಯ ಹೊಂದಿರುವ ದೇವಸ್ಥಾನದ ಐತಿಹಾಸಿಕ ಮಹತ್ವವನ್ನು ಉಳಿಸಿ ಮುಂದಿನ ಪೀಳಿಗೆಗೆ ಪರಿಚಯಿಸುವ ಉದ್ದೇಶದಿಂದ ಜೀರ್ಣೋದ್ಧಾರ ಕಾರ್ಯ ಕೈಗೊಳ್ಳಲು ನಿರ್ಧರಿಸಲಾಯಿತು. ಈ ನಿಟ್ಟಿನಲ್ಲಿ ತರುಣ ಮಂಡಳಿಯು ಕಮಿಟಿಯನ್ನು ರಚಿಸಿ, ದೇವಸ್ಥಾನದ ಅಭಿವೃದ್ಧಿಗೆ ಪ್ರಯತ್ನಿಸುತ್ತಿದ್ದಾರೆ  ಧರ್ಮಸ್ಥಳದ ಧರ್ಮಾಧಿಕಾರಿಗಳನ್ನು ಭೇಟಿಯಾಗಿ ಅನುದಾನಕ್ಕಾಗಿ ಮನವಿ ಸಲ್ಲಿಸಲಾಗಿತ್ತು. ಇದೀಗ ೨.೫೦ ಲಕ್ಷ ಅನುದಾನ ಮಂಜೂರಾಗಿರುವುದು ಸಂತಸದ ಸಂಗತಿಯಾಗಿದೆ ಎಂದು ಹೇಳಿದ ಅವರು ದೇವಸ್ಥಾನವು ಕೇವಲ ಪೂಜಾ ಸ್ಥಳವಾಗಿರದೆ, ಸಮಾಜದ ಎಲ್ಲ ವರ್ಗದ ಜನರನ್ನು ಒಗ್ಗೂಡಿಸುವ ಕೇಂದ್ರವಾಗಬೇಕು. ಜಾತಿ, ಮತ, ಪಂಥ ಹಾಗೂ ಬಡವ-ಶ್ರೀಮಂತ ಎಂಬ ಭೇದವಿಲ್ಲದೆ ಎಲ್ಲರೂ ಸಮಾನತೆಯಿಂದ ಬೆರೆಯುವ ವಾತಾವರಣ ನಿರ್ಮಾಣವಾಗಬೇಕು. ಧಾರ್ಮಿಕ ಕಾರ್ಯಗಳ ಜೊತೆಗೆ ಸಾಮಾಜಿಕ ಸಾಮರಸ್ಯ ಮತ್ತು ಜನಪರ ಚಟುವಟಿಕೆಗಳಿಗೂ ಆದ್ಯತೆ ನೀಡುತ್ತದೆ ಎಂದರು. 
       ಜನ ಜಾಗೃತಿ ಸಮಿತಿಯ ಜಿಲ್ಲಾ ಉಪಾಧ್ಯಕ್ಷ ವಾಸುದೇವ ಹೆಬಸೂರ ಅವರು ಮಾತನಾಡಿ ಶ್ರೀ ಮೂಲಸ್ಥಾನೇಶ್ವರ ದೇವಸ್ಥಾನದ ಜೀರ್ಣೋದ್ಧಾರ ಕಾರ್ಯಕ್ಕೆ ಧರ್ಮಸ್ಥಳ ಸಂಸ್ಥೆಯ ವತಿಯಿಂದ ಅನುದಾನ ಮಂಜೂರಾಗಿರುವುದಕ್ಕೆ ಕೃತಜ್ಞತೆ ಸಲ್ಲಿಸಿದ ಅವರು ದೇವಸ್ಥಾನದ ಅಭಿವೃದ್ಧಿಗಾಗಿ ಕೈಗೊಂಡ ಪ್ರಯತ್ನಗಳಿಗೆ ಸಂಸ್ಥೆಯ ಅಧಿಕಾರಿಗಳು ಸ್ಪಂದಿಸಿ ಅಗತ್ಯ ದಾಖಲೆಗಳನ್ನು ಪಡೆದು ಪ್ರಕ್ರಿಯೆ ಪೂರ್ಣಗೊಳಿಸಿದ್ದಾರೆ. ಅಲ್ಪಾವಧಿಯಲ್ಲಿಯೇ ದೇವಸ್ಥಾನದ ಹೆಸರಿನಲ್ಲಿ ಅನುದಾನ ಮಂಜೂರಾಗಿರುವುದು ಸಂತಸ ತಂದಿದೆ ದೇವಸ್ಥಾನದ ಜೀರ್ಣೋದ್ಧಾರ ಕಾರ್ಯವು ಯಶಸ್ವಿಯಾಗಿ ಪೂರ್ಣಗೊಳ್ಳಲು ಊರಿನ ಹಿರಿಯರು, ಗಣ್ಯರು, ಯುವಕರು ಹಾಗೂ ಸಾರ್ವಜನಿಕರ ಸಹಕಾರ ಅತ್ಯಗತ್ಯವಾಗಿದೆ. ಎಲ್ಲರೂ ಒಗ್ಗಟ್ಟಿನಿಂದ ಕಾರ್ಯನಿರ್ವಹಿಸಿದರೆ ಐತಿಹಾಸಿಕ ದೇವಸ್ಥಾನವನ್ನು ಸುಂದರವಾಗಿ ಅಭಿವೃದ್ಧಿಪಡಿಸಿ ಅದರ ಪರಂಪರೆಯನ್ನು ಉಳಿಸಿಕೊಳ್ಳಲು ಸಾಧ್ಯವಾಗುತ್ತದೆ ಎಂದರು.
      ಸಾನಿದ್ಯ ವಹಿಸಿದ ವೇ. ಸಂತೋಷ ಜೋಶಿ ಅವರು ಮಾತನಾಡಿ ಶ್ರೀ ಮೂಲಸ್ಥಾನೇಶ್ವರ ಮಹಾದೇವ ದೇವಸ್ಥಾನದ ಜೀರ್ಣೋದ್ಧಾರ ಕಾರ್ಯವು ತಾಳಿಕೋಟೆಯ ಜನರ ಧಾರ್ಮಿಕ ಭಾವನೆ ಹಾಗೂ ಐತಿಹಾಸಿಕ ಪರಂಪರೆಯೊಂದಿಗೆ ನಿಕಟ ಸಂಬಂಧ ಹೊಂದಿದೆ. ದೇವಸ್ಥಾನದ ಅಭಿವೃದ್ಧಿ ಒಂದು ಸಮುದಾಯಕ್ಕೆ ಸೀಮಿತವಾಗದೆ, ಊರಿನ ಎಲ್ಲ ಜನರ ಸಹಭಾಗಿತ್ವದಲ್ಲಿ ನಡೆಯಲಿದೆ ಧರ್ಮಸ್ಥಳ ಸಂಸ್ಥೆಯ ನೆರವು ದೇವಸ್ಥಾನದ ಜೀರ್ಣೋದ್ಧಾರ ಕಾರ್ಯಕ್ಕೆ ಮಹತ್ವದ ಪ್ರೋತ್ಸಾಹ ನೀಡಿದೆ. ದೇವಸ್ಥಾನದ ಸಂರಕ್ಷಣೆ, ಧಾರ್ಮಿಕ ಪರಂಪರೆಯ ಉಳಿವು ಮತ್ತು ಮುಂದಿನ ಪೀಳಿಗೆಗೆ ನಮ್ಮ ಸಂಸ್ಕೃತಿಯನ್ನು ಪರಿಚಯಿಸುವ ಕಾರ್ಯದಲ್ಲಿ ಪ್ರತಿಯೊಬ್ಬರೂ ಕೈಜೋಡಿಸಬೇಕೆಂದರು.
ಈ ಸಮಯದಲ್ಲಿ ತಾಲೂಕಾ ಯೋಜನಾಧಿಕಾರಿ ಶಿವಾನಂದ ಪಿ, ವಲಯ ಮೇಲ್ವಿಚಾರಕಿ ಶೋಭಾ ಹಿರೇಕಲ್ಲಪ್ಪನವರ, ಜನ ಜಾಗೃತಿ ಸಮಿತಿಯ ಸದಸ್ಯೆ ಶ್ರೀಮತಿ ಸುವರ್ಣಾ ಬಿರಾದಾರ, ಮುದಕಪ್ಪ ಬಡಿಗೇರ, ದೇವಸ್ಥಾನ ಸಮಿತಿಯ ಅಧ್ಯಕ್ಷ ಅಪ್ಪಾಸಾಹೇಬಗೌಡ ಪಾಟೀಲ, ಅಣ್ಣಾಜಿ ಜಗತಾಪ, ಪ್ರಕಾಶ ಸಾಸಾಬಾಳ, ಡಿ.ವ್ಹಿ.ಪಾಟೀಲ, ರವಿ ಮಠಪತಿ, ಗುರಸಂಗಪ್ಪ ಕಶೆಟ್ಟಿ, ರಾಜಣ್ಣ ಸೊಂಡೂರ, ಶಶಿಧರ ಡಿಸಲೆ, ರಮೇಶ ಮೂಕೀಹಾಳ, ರಾಘವೇಂದ್ರ ಮಾನೆ, ಭೀಮನಗೌಡ ಪಾಟೀಲ, ರೇವಣಸಿದ್ದಪ್ಪ ಬಿರಾದಾರ, ಶಿವಾಜಿ ಶೇವಳಕರ, ಲಂಕೇಶ ಪಾಟೀಲ, ವಿಶ್ವನಾಥ ಹೇರೂರ, ಗುರು ಕಾಜಗಾರ, ಬಸನಗೌಡ ಪಾಟೀಲ, ಪರಮಣ್ಣ ಪಾಟೀಲ, ಶಿವಪ್ಪ ಬೊಮ್ಮಗೌಡ, ಬಸಯ್ಯ ಹಿರೇಮಠ, ಸಿ.ಬಿ.ತಂಗಡಗಿ, ಮಲ್ಲು ಕೋರಿ, ಆದಪ್ಪ ಕೋರಿ, ಸಂತೋಷ ಚೌದ್ರಿ, ಸತೀಶ ಪಾಟೀಲ, ರಾಜವಾಡೆಯ ಮಹಿಳಾ ಮಂಡಳದ ಸದಸ್ಯನಿಯರು ಮೊದಲಾದವರು ಉಪಸ್ಥಿತರಿದ್ದರು.

Author
KhushiHost News CMS Pro ®
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಅಂಧ, ವಿಕಲಚೇತನರ ಬಾಳಿಗೆ ಬೆಳಕಾದ ಸ್ನೇಹ ಜ್ಯೋತಿ ಸಂಸ್ಥೆ : ಧರ್ಮಾಧ್ಯಕ್ಷ ಡೇರಿಕ್ ಫರ್ನಾಂಡಿಸ್ ಧಾರವಾಡ ಜಿಲ್ಲಾ ಕ್ರೀಡಾ ವಸತಿ ನಿಲಯದ ಅಥ್ಲೇಟಿಕ್ ಕ್ರೀಡಾಕೂದಲ್ಲಿ ಸಾಧನೆಮಹಿಳೆಯರ ಸಾಮಾಜಿಕ, ಆರ್ಥಿಕ ಪ್ರಗತಿಗೆ ಜ್ಞಾನವಿಕಾಸ ಕಾರ್ಯಕ್ರಮ ಪೂರಕ: ದಯಾಶೀಲಅಂಜನಾದ್ರಿ ದೇವಸ್ಥಾನದ ಆಡಳಿತ ವಿವಾದ: ನ್ಯಾಯಾಲಯದ ಆದೇಶದಂತೆ ಅವಕಾಶ ನೀಡಿಸುರಕ್ಷಿತ ಬಚಪನ್ ಅಭಿಯಾನ: ಬೂದಗುಂಪಾದಲ್ಲಿ ಮಕ್ಕಳ ಹಕ್ಕುಗಳು & ಕಾನೂನುಗಳ ಜಾಗೃತಿ ಕಾರ್ಯಕ್ರಮನವೆಂಬರ್ 3 ರಂದು ಗಂಗಾವತಿಯಲ್ಲಿ ಬಸವಾದಿ ಶಿವಶರಣರ ಬೃಹತ್ ಹಿಂದೂ ಸಮಾವೇಶನಾಳೆ ದಲಿತ ಸೇನೆ ರಾಜ್ಯ ಸಮಿತಿಯ ಪೂರ್ವಭಾವಿ ಸಭೆ ಹಾಗೂ ನೂತನ ಪದಾಧಿಕಾರಿಗಳಿಗೆ ಸನ್ಮಾನಹುಲಿಗೆಮ್ಮ ದೇವಿ ದೇವಸ್ಥಾನದ ಅಧಿಕಾರಿ ವಿರುದ್ಧ ದೂರು ದಾಖಲಿಸಿ ಕ್ರಮಕ್ಕೆ ಒತ್ತಾಯಕೊಪ್ಪಳ ಭಾಗ್ಯನಗರ ಬಂದ್‌ಗೆ ಹೈದರಾಬಾದ್ ಕರ್ನಾಟಕ ಯುವಶಕ್ತಿ ಬೆಂಬಲಹಣಕಾಸು ಒಳಗೊಳ್ಳುವಿಕೆ ಸ್ಯಾಚುರೇಶನ್ ಅಭಿಯಾನ: ವಿಶೇಷ ಜಾಗೃತಿ ಪೋಸ್ಟರ್ ಬಿಡುಗಡೆ