Press ID & Credential Portal
Apply / Verify  ➔
LIVE TV LocalCrimeNationalInternationalPoliticsBusinessEducationTechnologyEntertainmentSportsHealthFeatureTravelingBeautyRecipes
Press & Media Credential Portal
✕
1. Apply for Press ID Card
Register official reporter application with Email OTP.
➔
2. Download Approved Badge
Enter Card ID to receive authorization code via email.
3. Verify Reporter ID & Card (View Only)
For Public & Police: Check if card is authentic.
Politics News

“ಗದಗ ಜಿಲ್ಲೆಯಲ್ಲಿ 4,853 ಮಹಿಳೆಯರಿಗೆ ಭಾಗ್ಯಲಕ್ಷ್ಮಿ ಬಾಂಡ್ ವಿತರಣೆ”

ರಾಜ್ಯದಲ್ಲಿ ಮೊದಲ ಬಾರಿಗೆ 2006-07ರಲ್ಲಿ ಬಿಜೆಪಿ ಅಧಿಕಾರದ ಚುಕ್ಕಾಣಿ ಹಿಡಿದ ಸಂದರ್ಭದಲ್ಲಿ ಮೊದಲ ಬಾರಿಗೆ ಸಿಎಂ ಹುದ್ದೆ ಅಲಂಕರಿಸಿದ್ದ ಬಿ.ಎಸ್​. ಯಡಿಯೂರಪ್ಪ ಜಾರಿಗೆ ತಂದಿದ್ದ  ಭಾಗ್ಯಲಕ್ಷ್ಮಿಬಾಂಡ್​ ಯೋಜನೆ ಈಗ ಸಾಕಾರಗೊಳ್ಳುತ್ತಿದೆ. 2006-&07ರಲ್ಲಿ ಜನಿಸಿದ ಹೆಣ್ಣುಮಗುವಿಗೆ ಮಾಡಿಸಿದ್ದ ಭಾಗ್ಯಲಕ್ಷಿ$್ಮ ಬಾಂಡ್​ಗಳು ಈಗ ಮೆಚ್ಯೂರಿಟಿ ಅವಧಿಗೆ ತಲುಪಿದ್ದು, ರಾಜ್ಯಾದ್ಯಂತ ಅರ್ಹ ಭಾಗ್ಯಲಕ್ಷಿ$್ಮಗಳಿಗೆ ಎಲ್​ಐಸಿ ಮೂಲಕ ಹಣ ತಲುಪುತ್ತಿವೆ. ಅದೇ ರೀತಿ ಜಿಲ್ಲೆಯಲ್ಲೂ  4853 ಜನರಿಗೆ ಈಗಾಗಲೇ ಬಾಂಡ್​ ಹಣ ಸಂದಾಯವಾಗಿದ್ದು, ಇನ್ನೂ ಹಲವು ಅರ್ಹರಿಗೆ ಸಂದಾಯ ಆಗಬೇಕಿದೆ. ಈವರೆಗೆ ಒಟ್ಟು 4853 ಜನ ಲಾನಿಭವಿಗಳಿಗೆ ತಲಾ 32,351 ರೂ ನಂತೆ ಒಟ್ಟು 15.69 ಕೋಟಿ ರೂ. ಪಾವತಿ ಆಗಿದೆ.

ಜಿಲ್ಲೆಯಲ್ಲಿ  ಒಟ್ಟು 6849 ಮಹಿಳೆಯರು ತಮ್ಮ ಹೆಣ್ಣುಮಗುವಿಗೆ  ಭಾಗ್ಯಲಕ್ಷ್ಮಿ ಬಾಂಡ್​ ಮಾಡಿಸಿದ್ದರು. ಅದರಲ್ಲಿ 5313 ಮಹಿಳೆಯರ ದಾಖಲೆಗಳನ್ನು ಜಿಲ್ಲಾ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ತಂತ್ರಾಂಶದಲ್ಲಿ ದಾಖಲಿಸಿದೆ. ಅದರಲ್ಲಿ 4853 ಮಹಿಳೆಯರಿಗೆ ಎಲ್​ಐಸಿಯಿಂದ ಹಣ ಸಂದಾಯವಾಗಿದ್ದು, ಇನ್ನೂ 463 ಜನರಿಗೆ ಎಲ್​ಐಸಿ ಯಿಂದ ಹಣ ಸಂದಾಯ ಆಗುವುದು ಬಾಕಿ ಇದೆ. ಇನ್ನೂ 1536 ಮಹಿಳೆಯರ ಬಾಂಡ್​ಗಳು ಮೆಚ್ಯೂರಿಟಿ ಅವಧಿಗೆ ಬಾರದ ಕಾರಣ ತಂತ್ರಾಂಶದಲ್ಲಿ ದಾಖಲಿಸುವುದು ಬಾಕಿ ಇದ್ದು, ಮೆಚ್ಯೂರಿಟಿ ದಿನಾಂಕದ ನಂತರ ತಂತ್ರಾಂಶದಲ್ಲಿ ಅಳವಡಿಸಲಾಗುವುದು ಎಂದು ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಅಧಿಕಾರಿಗಳು ತಿಳಿಸಿದ್ದಾರೆ.

ಬಡತನ ರೇಖೆಗಿಂತ ಕೆಳಗೆ ಇರುವ (ಬಿಪಿಎಲ್​) ಕುಟುಂಬಗಳಲ್ಲಿ ಜನಿಸಿದ ಹೆಣ್ಣು ಮಕ್ಕಳ ಶಿಕ್ಷಣ ಮತ್ತು ಕ್ಷೇಮಾಭಿವೃದ್ಧಿಗಾಗಿ ಅಂದಿನ ಸಿಎಂ ಬಿ.ಎಸ್​. ಯಡಿಯೂರಪ್ಪ ಅವರು  ಭಾಗ್ಯಲಕ್ಷ್ಮಿ ಯೋಜನೆ ಜಾರಿಗೊಳಿಸಿತ್ತು. ಈ ಯೋಜನೆ ದೇಶಾದ್ಯಂತ ಪ್ರಸಿದ್ಧಿ ಪಡೆದಿತ್ತು. ಈ ಯೋಜನೆ ಜಾರಿಯಾಗಿ ಇದೀಗ 18 ವರ್ಷ ರ್ಪೂಣಗೊಂಡಿದೆ. ಬಾಂಡ್​ಗಳು ಮೆಚ್ಯೂರಿಟಿ ಹಂತ ತಲುಪಿವೆ. ಈ ಯೋಜನೆಯಡಿ ಹೆಸರು ನೋಂದಾಯಿಸಿದ್ದ ಜಿಲ್ಲೆಯ ಹಲವರ ಬ್ಯಾಂಕ್​ ಖಾತೆಗೆ ಹಣ ಸಂದಾಯವಾಗುತ್ತಿದ್ದು, ಲಾನುಭವಿಗಳಲ್ಲಿ ಹರ್ಷ ಮೂಡಿದೆ.


ನಿಬಂಧನೆಗಳು ಇದ್ದವು:

ಹೆಣ್ಣು ಮಕ್ಕಳನ್ನು ಬಾಲ್ಯ ವಿವಾಹ ಹಾಗೂ ಬಾಲ ಕಾಮಿರ್ಕ ಪದ್ಧತಿಗೆ ದೂಡದಿರುವುದನ್ನು ತಡೆಗಟ್ಟಲು ಹಾಗೂ ಹೆಣ್ಣು ಮಕ್ಕಳಿಗೆ ಕನಿಷ್ಠ 8ನೇ ತರಗತಿ ವರೆಗೆ ಶಿಕ್ಷಣ ನೀಡುವುದಕ್ಕಾಗಿ ಈ ಯೋಜನೆ ಜಾರಿ ತರಲಾಗಿತ್ತು. ಮೂರಕ್ಕಿಂತ ಹೆಚ್ಚು ಮಕ್ಕಳು ಹೊಂದಿದವರಿಗೆ ಈ ಯೋಜನೆ ಅನ್ವಯಿಸುವುದಿಲ್ಲ. ಹಲವು ನಿಬಂಧನೆಗಳನ್ನು ಈ ಯೋಜನೆಯ ಲಾಭ ಪಡೆಯಲು ವಿಧಿಸಲಾಗಿತ್ತು. ಈ ನಿಟ್ಟಿನಲ್ಲಿ ಅಂಗನವಾಡಿ ಕಾರ್ಯಕರ್ತೆಯರು ಖುದ್ದಾಗಿ ಮನೆಗಳಿಗೆ ಭೇಟಿ ನೀಡಿ ಸೂಕ್ತ ಮಾಹಿತಿಯನ್ನು ಪರಿಶೀಲಿಸಿ ಕ್ರಮ ಕೈಗೊಳ್ಳುತ್ತಿದ್ದಾರೆ.


 ಏನಿದು ಯೋಜನೆ?

 ಭಾರತೀಯ ಜೀವ ವಿಮೆ (ಎಲ್​ಐಸಿ) ಸಹಯೋಗದೊಂದಿಗೆ 2006- 07ರಲ್ಲಿ ಅಂದಿನ ಸಿಎಂ ಬಿ. ಎಸ್​.ಯಡಿಯೂರಪ್ಪ ನೇತೃತ್ವದ ಬಿಜೆಪಿ ಸರ್ಕಾರ  ಭಾಗ್ಯಲಕ್ಷ್ಮಿ ಯೋಜನೆ ಜಾರಿಗೊಳಿಸಿತ್ತು. 2006ರ ಮಾರ್ಚ 31ರ ನಂತರ ಬಿಪಿಎಲ್​ ಕಾರ್ಡ ಹೊಂದಿರುವವರ ಕುಟುಂಬದಲ್ಲಿ ಹೆಣ್ಣು ಮಗು ಜನಿಸಿದರೆ ಆ ಮಗುವಿನ ಹೆಸರಲ್ಲಿ ಬಾಂಡ್​ಗಳನ್ನು ವಿತರಿಸಲಾಗಿತ್ತು. ಆ ಬಾಂಡ್​ಗಳು ಈಗ 18 ವರ್ಷ ಪೂರೈಸಿದ ಹಿನ್ನೆಲೆಯಲ್ಲಿ ಪ್ರೌಢಾವಸ್ಥೆ (ಮೆಚ್ಯೂರಿಟಿ) ಹಂತಕ್ಕೆ ತಲುಪಿವೆ.


ಯಾರಿಗೆ ಎಷ್ಟು ಸಿಗುತ್ತೆ?

ಬಿಪಿಎಲ್​ ಕಾರ್ಡದಾರ ಕುಟುಂಬದಲ್ಲಿ ಮಾ.31, -2006 ರಿಂದ  ಜುಲೈ 2008 ರವರೆಗೆ ಜನಿಸಿದ ಹೆಣ್ಣು ಮಕ್ಕಳ ಹೆಸರಲ್ಲಿ ಸರ್ಕಾರದಿಂದ ಇಡಲಾದ 10,000 ರೂ. ಠೇವಣಿಗೆ 18 ವರ್ಷದ ಬಳಿಕ ಒಂದನೇ ಮಗುವಿಗೆ ಅಂದಾಜು 32 ಸಾವಿರ ರೂ. ಹಾಗೂ ಎರಡನೇ ಮಗುವಿಗೆ 40,619 ರೂ. ಸಿಗುತ್ತದೆ. ಆ.1, -2008ರ ನಂತರ ಜನಿಸಿದ ಹೆಣ್ಣು ಮಕ್ಕಳ ಹೆಸರಲ್ಲಿ ಸರ್ಕಾರ ಇರಿಸಿದ್ದ 19,300 ರೂ. ಠೇವಣಿ ಜತೆಗೆ 18 ವರ್ಷದ ಬಳಿಕ ಮೊದಲ ಹಾಗೂ ಎರಡನೇ ಹೆಣ್ಣು ಮಗುವಿಗೆ ಅಂದಾಜು 1 ಲಕ್ಷಕ್ಕೂ ಅಧಿಕ ರೂ. ಜಮೆ ಆಗಲಿದೆ. ಈ ವರೆಗೆ 1 ಲಕ್ಷಕ್ಕೂ ಅಧಿಕ ಮೊತ್ತ ಸಿಗುವ ಬಾಂಡ್​ಗಳು ಮೆಚ್ಯೂರಿಟಿಗೆ ಬಂದಿಲ್ಲ ಎಂದು ಇಲಾಖೆ ತಿಳಿಸಿದೆ.

Author
KhushiHost News CMS Pro ®
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ನಾಗಮಂಗಲ: ತಾಲೂಕಿನ ರಾ ಹೆ 75ರ ವರಾಹಸಂದ್ರ ಸಮೀಪ ಕೆಎಸ್‌ಆರ್‌ಟಿಸಿ ಬಸ್‌ ಹಾಗೂ ಟ್ರ್ಯಾಕ್ಟ‌ರ್ ಅಪಘಾತ : ಬಸ್ ಚಾಲಕ ದುರ್ಮರಣದೇವರಾಜ್ ಎಂಬ ವ್ಯಕ್ತಿ ಅನುಮಾನಾಸ್ಪದ ಸಾವು: ಕೊಲೆ ಶಂಕೆ, ಪೊಲೀಸ್ ತನಿಖೆಗೆ ಗ್ರಾಮಸ್ಥರ ಒತ್ತಾಯಉತ್ತಮ ವ್ಯಕ್ತಿತ್ವ, ಚಾಣಾಕ್ಷ ಕಾರ್ಯವೈಖರಿ; ವರ್ಗಾವಣೆಯಾದ ಚಾ ವಿ ಸ ನಿ ನಿ ಯ AE ಮತ್ತು ಪ್ರಭಾರ AEE ಅವರಿಗೆ ಭಾವಪೂರ್ಣ ಬೀಳ್ಕೊಡುಗೆಹಾಸನ: ನಿರ್ಮಾಣ ಹಂತದ ಮನೆಯ ಕ್ಯೂರಿಂಗ್ ವೇಳೆ ವಿದ್ಯುತ್ ಅವಘಡ – ಕುಣಿಗಲ್ ಆರ್‌ಎಫ್‌ಒ ಜಗದೀಶ್ ಸಾವುಟಾಟಾ ಪವರ್ ಲೈಸೆನ್ಸ್‌ಗೆ ವಿರೋಧ: ಹೆಚ್.ಡಿ. ರೇವಣ್ಣರಿಂದ ಸಂಪೂರ್ಣ ಬೆಂಬಲವಿದ್ಯುತ್ ವಿತರಣಾ ಖಾಸಗೀಕರಣ ವಿರೋಧಿಸಿ ಸಂಸದರಿಗೆ ಮನವಿಇರಾನ್–ಅಮೆರಿಕ ಶಾಂತಿ ಮಾತುಕತೆ ನಡುವೆ ಖಮೇನಿ ಅಂತ್ಯಕ್ರಿಯೆ ದಿನಾಂಕ ಘೋಷಣೆಮಧ್ಯಪ್ರಾಚ್ಯದಲ್ಲಿ ಕಾಳಗದ ಕಾವು: US ನೌಕಾನೆಲೆ ಮೇಲೆ ಇರಾನ್ ದಾಳಿ, ಪ್ರತೀಕಾರ ಅನಿವಾರ್ಯ ಎಂದ ಟ್ರಂಪ್13 ಕಿ.ಮೀ ಕಾಮಗಾರಿ ಪೂರ್ಣಗೊಂಡ ತುಮಕೂರು–ಚಿತ್ರದುರ್ಗ ರೈಲು ಯೋಜನೆ; ಸಂಪೂರ್ಣ ಮಾರ್ಗ ಯಾವಾಗ ಸಿದ್ಧ?ಬಂಡೀಪುರದಲ್ಲಿ ಭದ್ರತಾ ಲೋಪ: ರೌಡಿ ಶೀಟರ್ ಗ್ಯಾಂಗ್‌ನ ಎಣ್ಣೆ ಪಾರ್ಟಿ ಬಹಿರಂಗ