ಬಳ್ಳಾರಿ. ಅ.12: ಕಟ್ಟಡ ಕಾರ್ಮಿಕರ ಸಂಚಾಲನ ಸಮಿತಿ ವತಿಯಿಂದ ಇಂದು ತಾಲೂಕಿನ ಕುಡುತಿನಿಯ ಇಂದಿರಾ ನಗರದಲ್ಲಿ ಕಟ್ಟಡ ಕಾರ್ಮಿಕ ಕಾರ್ಡುಗಳನ್ನು ವಿತರಿಸಲಾಯಿತು.
ಕಾಡುಗಳನ್ನು ವಿತರಿಸಿ ಮಾತನಾಡಿದ ಸಹ ಸಂಚಾಲಕರು ವಿ ದೇವಣ್ಣ ಕಾರ್ಮಿಕರು, ಕಟ್ಟಡ ಕಾರ್ಮಿಕರ ಸೌಲಭ್ಯಗಳನ್ನು ಸಮರ್ಪಕವಾಗಿ ಬಳಸಿಕೊಳ್ಳಬೇಕು ಶಿಸ್ತುಬದ್ಧವಾಗಿ ಸಂಘದ ಚಟುವಟಿಕೆಗಳಲ್ಲಿ ನಿರಂತರ ಭಾಗವಹಿಸಿ ಪ್ರತಿವರ್ಷ ಕಾರ್ಡುಗಳನ್ನು ರಿನಿವಲ್ ಮಾಡುವುದು ಹಾಗೂ ಮಕ್ಕಳ ಮದುವೆಯ ಸಂದರ್ಭದಲ್ಲಿ ಹಾಗೂ ಮಕ್ಕಳ ವಿದ್ಯಾರ್ಥಿ ವೇತನ ಸೇರಿದಂತೆ ಕೆಲಸ ಮಾಡುವ ಸಂದರ್ಭದಲ್ಲಿ ಆಕಸ್ಮಿಕ ಘಟನೆಗಳು ನಡೆದು ಮರಣದಂತ ಘಟನೆಗಳು ನಡೆದ ಲ್ಲಿ ಈ ಕಾರ್ಡ್ ಅತ್ಯಂತ ಉಪಯುಕ್ತವಾಗಲಿದೆ ನಮ್ಮ ಸಂಘ ನಿರಂತರವಾಗಿ ಸಂಘದ ಜೊತೆಗಿದ್ದು ಸೌಲಭ್ಯಗಳನ್ನು ಪಡೆದುಕೊಳ್ಳಲು ಸಹಾಯ ಮಾಡುವುದಾಗಿ ತಿಳಿಸಿದರು.
ಈ ಸಂದರ್ಭದಲ್ಲಿ ಜಿಲ್ಲಾ ಸಂಚಾಲಕರಾದ ಐ. ಹೊನ್ನೂರು ಸಾಬ್, ಜಿಲ್ಲಾ ಸಹ ಸಂಚಾಲಕ ವಿ. ದೇವಣ್ಣ. ಸಿಐಟಿಯು ರಾಜ್ಯ ಉಪಾಧ್ಯಕ್ಷ, ಜೆ ಸತ್ಯ ಬಾಬು ಜಿಲ್ಲಾ ಸಮಿತಿ ಜಂಟಿ ಕಾರ್ಯದರ್ಶಿ. ಎಂ .ತಿಪ್ಪೇಸ್ವಾಮಿ, ಕುಡತಿನಿ ಘಟಕದ ಅಧ್ಯಕ್ಷರಾದ ಯು. ಶ್ರೀನಿವಾಸು, ಕಾರ್ಯದರ್ಶಿ ಯರಿ ಸ್ವಾಮಿ, ಸಂಡೂರು ತಾಲೂಕು ಸಂಚಾಲಕರು, C.p. ಹಾಲಸ್ವಾಮಿ, ಕಂಪ್ಲಿ ತಾಲೂಕು ಕಾರ್ಯದರ್ಶಿ ನಾಗರಾಜ ಸೇರಿದಂತೆ ಮೊದಲಾದವರು ಇದ್ದರು.
ಈ ಸಂದರ್ಭದಲ್ಲಿ ಕಟ್ಟಡ ಕಾರ್ಮಿಕ ಫೆಡರೇಶನ್ ಜಿಲ್ಲಾ ಸಮಿತಿ ವತಿಯಿಂದ 31 ಜನ ಕಾರ್ಮಿಕರಿಗೆ ಕಾರ್ಡುಗಳನ್ನು ವಿತರಣೆ ಮಾಡಲಾಯಿತು.