ಬಳ್ಳಾರಿ, ಆ,08;: ತಾಲೂಕಿನ ಚೆಳ್ಳಗುರ್ಕಿ ಹಾಗೂ ಕೆ.ವೀರಾಪುರ ಪಶು ಚಿಕಿತ್ಸಾಲಯಗಳ ವ್ಯಾಪ್ತಿಯ ಗ್ರಾಮಗಳಲ್ಲಿ ಮಂಗಳವಾರದಂದು ಬರಗಾಲದ ಹಿನ್ನೆಲೆಯಲ್ಲಿ ಜಾನುವಾರುಗಳಿಗೆ ಉಂಟಾಗಿರುವ ಮೇವಿನ ಅಭಾವ ನೀಗಿಸಲು ಸರ್ಕಾರದ ವತಿಯಿಂದ ರೈತರಿಗೆ ಉಚಿತವಾಗಿ ಮೇವು ಬೀಜದ ಪೊಟ್ಟಣಗಳನ್ನು ವಿತರಿಸಲಾಯಿತು.
ಜಾನುವಾರುಗಳಿಗೆ ಅಗತ್ಯವಿರುವ ಮೇವು ಬೆಳೆಯಲು ಸುಮಾರು 70 ರೈತರಿಗೆ ಮೇವು ಬೀಜದ ಕಿರುಪೊಟ್ಟಣಗಳನ್ನು ಪಶು ಚಿಕಿತ್ಸಾಲಯದ ಸಿಬ್ಬಂದಿ ಹಾಗೂ ಹಿರಿಯ ಪಶುವೈದ್ಯಕೀಯ ಪರೀಕ್ಷಕರಾದ ಶ್ರೀ ಪಂಢರಿ ಅವರು ರೈತರಿಗೆ ಕಿರುಪೊಟ್ಟಣಗಳನ್ನು ವಿತರಿಸಿದರು. ಬರಗಾಲದ ಸಂದರ್ಭದಲ್ಲಿ ರೈತರು ತಮ್ಮ ಜಮೀನಿನಲ್ಲಿ ಮೇವು ಬೆಳೆದು ಜಾನುವಾರುಗಳಿಗೆ ಅಗತ್ಯವಾದ ಮೇವಿನ ಲಭ್ಯತೆ ಖಚಿತಪಡಿಸಿಕೊಳ್ಳುವಂತೆ ಅವರು ಸಲಹೆ ನೀಡಿದರು.