ತಾಳಿಕೋಟೆ, ತಾಲೂಕಿನ ರೈತ ಸಂಪರ್ಕ ಕೇಂದ್ರದ ಕಚೇರಿಯಲ್ಲಿ ೨೦೨೬-೨೭ನೇ ಸಾಲಿನ ಹಿಂಗಾರು ಹಂಗಾಮಿನ ಬಿತ್ತನೆ ಬೀಜ ವಿತರಣಾ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಯಿತು.
ಹಿಂಗಾರು ಹಂಗಾಮಿಗೆ ಅಗತ್ಯವಿರುವ ಕಡಲೆ ಸೇರಿದಂತೆ ವಿವಿಧ ಬೆಳೆಗಳ ಬಿತ್ತನೆ ಬೀಜಗಳನ್ನು ರೈತರಿಗೆ ವಿತರಿಸಲಾಗುತ್ತಿದೆ. ಕಡಲೆ ಜೆಜಿ-೧೧ ತಳಿಯ ಒಟ್ಟು ೬೧೦ ಕ್ವಿಂಟಲ್ ಬೀಜ ದಾಸ್ತಾನು ಮಾಡಲಾಗಿದ್ದು, ಒಂದು ಪ್ಯಾಕೆಟ್ನಲ್ಲಿ ೨೦ ಕೆ.ಜಿ. ಬೀಜ ಇರಲಿದೆ. ಸಾಮಾನ್ಯ ರೈತರಿಗೆ ಒಂದು ಪ್ಯಾಕೆಟ್ಗೆ ೧,೩೦೦ ಬೆಲೆ ನಿಗದಿಪಡಿಸಲಾಗಿದೆ. ಪರಿಶಿಷ್ಟ ಜಾತಿ ಹಾಗೂ ಪರಿಶಿಷ್ಟ ಪಂಗಡದ ರೈತರಿಗೆ ರಿಯಾಯಿತಿ ದರದಲ್ಲಿ ೧,೦೫೦ಕ್ಕೆ ಬೀಜ ಪ್ಯಾಕೆಟ್ ನೀಡಲಾಗುವುದು ಬೀಜಗಳೊಂದಿಗೆ ಟ್ರೈಕೋಡರ್ಮಾ ಸೇರಿದಂತೆ ಜೈವಿಕ ಬೀಜೋಪಚಾರ ಸಾಮಗ್ರಿಗಳು ಲಭ್ಯವಿದ್ದು, ರೈತರು ಬಿತ್ತನೆಗೂ ಮುನ್ನ ಬೀಜೋಪಚಾರ ಮಾಡಿಕೊಂಡು ಬಿತ್ತನೆ ಮಾಡಬೇಕು ಪ್ರತಿ ರೈತರಿಗೆ ಗರಿಷ್ಠ ಮೂರು ಪ್ಯಾಕೆಟ್ ಕಡಲೆ ಹಾಗೂ ಎರಡು ಪ್ಯಾಕೆಟ್ ಇತರೆ ಬಿತ್ತನೆ ಬೀಜಗಳನ್ನು ವಿತರಿಸಲು ಸರ್ಕಾರ ನಿರ್ಧರಿಸಿದೆ ಎಂದು ಕೃಷಿ ಇಲಾಖೆ ಅಧಿಕಾರಿ ಮಹೇಶ ಜೋಶಿ ಅವರು ತಿಳಿಸಿದರು.
ಈ ಸಂದರ್ಭದಲ್ಲಿ ತಾಲೂಕು ಕೃಷಿಕ ಸಮಾಜದ ಅಧ್ಯಕ್ಷ ಬಸನಗೌಡ ಮಾಡಗಿ ಮಾತನಾಡಿ, ಎಲ್ಲ ರೈತರಿಗೆ ಅನುಕೂಲವಾಗುವಂತೆ ಅಗತ್ಯ ಪ್ರಮಾಣದಲ್ಲಿ ಬಿತ್ತನೆ ಬೀಜಗಳನ್ನು ದಾಸ್ತಾನು ಮಾಡಲಾಗಿದೆ. ಹಿಂಗಾರು ಹಂಗಾಮಿನ ಬಿತ್ತನೆ ಬೀಜ ವಿತರಣೆಯಲ್ಲಿ ರೈತರಿಗೆ ಯಾವುದೇ ತೊಂದರೆಯಾಗದಂತೆ ಕೃಷಿ ಇಲಾಖೆ ಅಗತ್ಯ ಸಿದ್ಧತೆ ಮಾಡಿಕೊಂಡಿದೆ ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ಜಿಲ್ಲಾ ಕಾಂಗ್ರೆಸ್ ಉಪಾಧ್ಯಕ್ಷ ಸಿದ್ಧನಗೌಡ ಪಾಟೀಲ ನಾವದಗಿ, ಮುಖಂಡರಾದ ನಿಂಗನಗೌಡ ಬಿರಾದಾರ, ಬಸನಗೌಡ ಹಳ್ಳಿ ಪಾಟೀಲ, ಈಸುಗೌಡ ಲಕ್ಕುಂಡಿ, ಕೃಷಿ ಅಧಿಕಾರಿಗಳಾದ ಮಹೇಶ ಜೋಶಿ, ಆತ್ಮ ಸಂಯೋಜಕ ಸಂಗಮೇಶ ಪಾಟೀಲ, ಲೆಕ್ಕಿಗರಾದ ರುಕ್ಸಾನಾ ತಾಳಿಕೋಟಿ, ಕಿರಣ ಬೊಮ್ಮನಹಳ್ಳಿ, ಹಣಮಂತ್ರಾಯ ಕುಂಟ್ರೆಡ್ಡಿ, ಬಸವರಾಜ ಜಾಲವಾದಿ, ರಾಮಣ್ಣ ಹರಿಜನ ಸೇರಿದಂತೆ ಕೃಷಿ ಸಖಿಯರು ಮೊದಲಾದವರು ಉಪಸ್ಥಿತರಿದ್ದರು.