ಬಳ್ಳಾರಿ: 13: ನಗರದ ಗಾನಯೋಗಿ ಕಲಾಕೇಂದ್ರದಲ್ಲಿ ಶ್ರೀ ಗುರು ಪುಟ್ಟರಾಜ ಸಂಗೀತ ಪಾಠಶಾಲೆ ವತಿಯಿಂದ ದಸರಾ ಸಂಗೀತ ಸಂಭ್ರಮ ರಾಗರಂಗ ಮಾಸಿಕ ಕಾರ್ಯಕ್ರಮ ನಡೆಯಿತು.
ಸತ್ಯನಾರಾಯಣಪೇಟೆಯ ರವಿಕುಮಾರ್ ಕಾರ್ಯಕ್ರಮ ಉದ್ಘಾಟಿಸಿದರು.
ಮುಖ್ಯ ಅತಿಥಿಗಳಾಗಿ ಪಟೇಲ್ ನಗರ ಶಾಲೆಯ ಶಿಕ್ಷಕರಾದ ಸುಭದ್ರ ಅವರು ಮಾತನಾಡಿ, ಸಂಗೀತ ಶಾಲೆ ನಡೆಸುವ ಮೂಲಕ ಸಂಗೀತವನ್ನು ಉಳಿಸಿ ಬೆಳೆಸಲು ಅನುಕೂಲವಾಗುತ್ತದೆ. ಅಲ್ಲದೆ, ಸಂಗೀತ ಶಾಲಾ ಮಕ್ಕಳಿಗೆ ಉತ್ತೇಜನ ನೀಡಿದಂತಾಗುತ್ತದೆ ಎಂದು ಹೇಳಿದರು.
ಸಂಗೀತ ಶಾಲೆ ಶಿಕ್ಷಕರಾದ ಸಿದ್ಧಲಿಂಗ ಸ್ವಾಮಿ, ಎರೇಗೌಡ, ಸರಸ್ವತಿ, ಕವಿತಾ, ದೊಡ್ಡ ಬಸವ ಗವಾಯಿ ಸೇರಿದಂತೆ ಮತ್ತಿತರರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.
ಇದೇ ಸಂದರ್ಭದಲ್ಲಿ ಅಭಯ್ ವಿಶೇಷ ಸಂಗೀತ ಕಾರ್ಯಕ್ರಮ ನಡೆಸಿ ಕೊಟ್ಟರು.
ಶಾಲಾ ಮಕ್ಕಳಿಂದ ಸಂಗೀತ ಕಾರ್ಯಕ್ರಮ ನಡೆಯಿತು.