Press ID & Credential Portal
Apply / Verify  ➔
LIVE TV LocalCrimeNationalInternationalPoliticsBusinessEducationTechnologyEntertainmentSportsHealthFeatureTravelingBeautyRecipes
Press & Media Credential Portal
✕
1. Apply for Press ID Card
Register official reporter application with Email OTP.
➔
2. Download Approved Badge
Enter Card ID to receive authorization code via email.
3. Verify Reporter ID & Card (View Only)
For Public & Police: Check if card is authentic.
Local News | Districts Bagalkot

’ಕೊಪ್ಪಳದ ಗವಿಸಿದ್ದೇಶ್ವರರ ಹಸ್ತಾಕ್ಷರದಿಂದ ದಾಸೋಹಿ ಸಹಕಾರಿಗೆ ವಿದ್ಯುಕ್ತ ಚಾಲನೆ’

ರೈತರ ಆರ್ಥಿಕ ಸ್ವಾವಲಂಬನೆಗೆ ಹೊಸ ಹೆಜ್ಜೆ - ಕೃಷಿ ಸಮೃದ್ಧಿಗೆ ಹೊಸ ಅಧ್ಯಾಯ



ಮುದ್ದೇಬಿಹಾಳ : ಮುದ್ದೇಬಿಹಾಳ ನಗರದಲ್ಲಿ ಸ್ಥಾಪಿತವಾದ ದಾಸೋಹಿ ರೈತ ಉತ್ಪಾದಕ ಸಹಕಾರಿ ಸಂಘದ ಆರ್ಥಿಕ ವ್ಯವಹಾರಗಳಿಗೆ ತಮ್ಮ ಪವಿತ್ರ ಹಸ್ತಾಕ್ಷರದ ಮೂಲಕ ಕೊಪ್ಪಳದ ಗವಿಸಿದ್ದೇಶ್ವರ ಮಠದ ಅಭಿನವ ಗವಿ ಸಿದ್ದೇಶ್ವರ ಮಹಾಸ್ವಾಮಿಗಳು ವಿದ್ಯುಕ್ತ ಚಾಲನೆ ನೀಡಿದರು.
ನಗರದ ವಿದ್ಯಾನಗರದಲ್ಲಿರುವ ದಾಸೋಹಿ ರೈತ ಉತ್ಪಾದಕ ಸಮೂಹ ಸಂಸ್ಥೆಗಳ ಕಛೇರಿಯಲ್ಲಿ ನಡೆದ ಸಮಾರಂಭದಲ್ಲಿ ರೈತರ ಅಗತ್ಯತೆಗೆ ಪೂರಕ  ಆರ್ಥಿಕ ನೆರವು ಒದಗಿಸಲು ಮತ್ತು ವ್ಯವಹಾರಿಕ ಚಟುವಟಿಕೆಗಳಿಗೆ ಸಹಕಾರ ನೀಡುವ ಉದ್ದೇಶದಿಂದ ಅಸ್ತಿತ್ವ ಪಡೆದ ನೂತನ  ದಾಸೋಹಿ ರೈತ ಉತ್ಪಾದಕ ಸಹಕಾರಿ ಸಂಘವನ್ನು ಉದ್ಘಾಟಿಸಿದ ಅವರು ರೈತರೇ ಸೇರಿ ಕಟ್ಟಿದ ಸಂಸ್ಥೆಯ ಮೂಲಕ ರೈತರ ಆರ್ಥಿಕ ಮತ್ತು ಸಾಮಾಜಿಕ ಸ್ಥಿತಿಗಳ ಉನ್ನತೀಕರಣಕ್ಕೆ ನಡೆಸುತ್ತಿರುವ ಪ್ರಯತ್ನಗಳನ್ನು ಶ್ಲಾಘಿಸಿದರು.
 ರೈತರ ಒಡೆತನದಲ್ಲಿ ಸಮೃದ್ಧಿಯತ್ತ ನಡಿಗೆ ಎಂಬ ಧ್ಯೇಯ ವಾಕ್ಯದೊಂದಿಗೆ ರೈತರ ಆರ್ಥಿಕ ಬಲವರ್ಧನೆ, ಗ್ರಾಮೀಣ ಉದ್ಯಮಶೀಲತೆ ಮತ್ತು ಸುಸ್ಥಿರ ಸಮೃದ್ಧಿಯತ್ತ ಸಹಕಾರದ ಮೂಲಕ ಸಾಗುವುದರೊಂದಿಗೆ ಉತ್ತರೋತ್ತರ ಅಸಂಖ್ಯಾತ ರೈತರ ಬದುಕು ಕಟ್ಟಿ ಕೊಡುವ ನಿಟ್ಟಿನಲ್ಲಿ ದಾಸೋಹಿಯ ಹೆಸರು ಚಿರಸ್ಥಾಯಿಯಾಗಲೆಂದು ಆಶೀರ್ವದಿಸಿದರು. 
ಈ ಮೊದಲು ದಾಸೋಹಿ ಸಮೂಹ ಸಂಸ್ಥೆಗಳ ರೈತ ಕೇಂದ್ರೀಕೃತ ಚಟುವಟಿಕೆಗಳು, ಸೇವೆಗಳು ಹಾಗೂ ಸೌಲಭ್ಯಗಳ ಬಗ್ಗೆ ತಿಳಿದು ಮೆಚ್ಚುಗೆ ವ್ಯಕ್ತಪಡಿಸಿದರು.
ಸಮಾರಂಭದಲ್ಲಿ ದಾಸೋಹಿ ಸಮೂಹ ಸಂಸ್ಥೆಗಳ ರೂವಾರಿ ಅರವಿಂದ ಹು. ಕೊಪ್ಪ, ಕುಕ್ಕುಟ ಕಂಪನಿಯ ಚೇರ್‍ಮನ್ ರಶ್ಮಿ ಕೊಪ್ಪ, ಉಪಾಧ್ಯಕ್ಷ ಆರ್.ಬಿ ಸಜ್ಜನ, ಸಹಕಾರಿ ಸಂಘದ ಉಪಾಧ್ಯಕ್ಷ ಮಂಜುನಾಥ ಕಳಸಗೊಂಡ, ನಿರ್ದೇಶಕರಾದ ಅಮರೇಶ ಹಟ್ಟಿ, ಸಿದ್ದಪ್ಪ ಕುರಿ,ಕಾಶೀನಾಥ ಹೆಬ್ಬಾಳ, ಭೀಮಾಶಂಕರಗೌಡ ಪಾಟೀಲ, ಗುರುಬಸಪ್ಪಗೌಡ ಪಾಟೀಲ, ಪ್ರೀತಿ ದೇಗಿನಾಳ, ಕಲ್ಲನಗೌಡ ಹಗರಟಗಿ, ಕಾಂತು ಲಮಾಣಿ, ಮಲ್ಲಣ್ಣ ಮಂಗ್ಯಾಳ, ಬಸವರಾಜ ಸಿದ್ದಾಪೂರ, ಲೇಶಪ್ಪ ಪ್ಯಾಟಿಗೌಡರ, ಕಂಪನಿ ನಿರ್ದೇಶಕರಾದ ಕಲ್ಲಣ್ಣ ಪ್ಯಾಟಿ, ಜಗದೀಶ ಪಂಪಣ್ಣವರ, ಗೋಲಪ್ಪ ಗಂಗನಗೌಡ್ರ, ಸೋಮನಗೌಡ ಬಿರಾದಾರ(ಮಡಿಕೇಶ್ವರ), ಶ್ರೀಶೈಲ ಮೇಟಿ(ಚೊಂಡಿ),ಪ್ರಭುದೇವಯ್ಯ ಹಿರೇಮಠ, ಬಸವರಾಜ ಕುಂಟೋಜಿ, ಭೀಮಣ್ಣ ಮಳಗೌಡರ, ರವೀಂದ್ರ ಕೋಳೂರ, ಪರಸಪ್ಪ ಮೇಟಿ, ಗುಂಡಪ್ಪ ಬಿರಾದಾರ, ಡಾ. ವಿಜಯ ಹುಬ್ಬಳ್ಳಿ, ಕಾರ್ಯನಿರ್ವಾಹಕ ಮಂಡಳಿ ಅಧ್ಯಕ್ಷ ಸಿ.ಆರ್ ಬಿರಾದಾರ, ಉಪಾಧ್ಯಕ್ಷ ಬಿ.ಎಂ ಪಾಟೀಲ ಸೇರಿದಂತೆ ದಾಸೋಹಿ ಸಮೂಹ ಸಂಸ್ಥೆಗಳ ಪದಾಧಿಕಾರಿಗಳು,ವಿವಿಧ ಗ್ರಾಮಗಳಿಂದ ಆಗಮಿಸಿದ ರೈತರು, ಸಿಬ್ಬಂದಿ ಹಾಗೂ ಹಿತೈಷಿಗಳು ಉಪಸ್ಥಿತರಿದ್ದರು.
ಸಹಕಾರಿ ಸಂಘದ ಆರ್ಥಿಕ ಚಟುವಟಿಕೆಗಳಿಗೆ ಪರಮಪೂಜ್ಯರ ಹಸ್ತಸ್ಪರ್ಶದ ಮೂಲಕ ದೊರೆತ ಈ ಶುಭಾರಂಭವು ದಾಸೋಹಿ ಸಮೂಹ ಸಂಸ್ಥೆಗಳ ಇತಿಹಾಸದಲ್ಲಿ ವಿಶೇಷ ಹಾಗೂ ಐತಿಹಾಸಿಕ ಕ್ಷಣಕ್ಕೆ ಸಾಕ್ಷಿಯಾಯಿತು.
ಮೊದಲಿಗೆ ನಾಗರತ್ನಾ ಅರಮನಿ ಸ್ವಾಗತಿಸಿದರು. ಡಾ. ರಾಜಶೇಖರ ಹತ್ತರಸಂಗ ಪ್ರಾಸ್ತಾವಿಕ ಮಾತುಗಳನ್ನಾಡಿದರು. ರಶ್ಮಿ ಗೋನಾಳ ಕಾರ್ಯಕ್ರಮ ನಿರೂಪಿಸಿದರು. ಕೊನೆಯಲ್ಲಿ ಶೇಖರಗೌಡ ವಂದಿಸಿದರು.

 

Author
KhushiHost News CMS Pro ®
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಅಂಧ, ವಿಕಲಚೇತನರ ಬಾಳಿಗೆ ಬೆಳಕಾದ ಸ್ನೇಹ ಜ್ಯೋತಿ ಸಂಸ್ಥೆ : ಧರ್ಮಾಧ್ಯಕ್ಷ ಡೇರಿಕ್ ಫರ್ನಾಂಡಿಸ್ ಧಾರವಾಡ ಜಿಲ್ಲಾ ಕ್ರೀಡಾ ವಸತಿ ನಿಲಯದ ಅಥ್ಲೇಟಿಕ್ ಕ್ರೀಡಾಕೂದಲ್ಲಿ ಸಾಧನೆಮಹಿಳೆಯರ ಸಾಮಾಜಿಕ, ಆರ್ಥಿಕ ಪ್ರಗತಿಗೆ ಜ್ಞಾನವಿಕಾಸ ಕಾರ್ಯಕ್ರಮ ಪೂರಕ: ದಯಾಶೀಲಅಂಜನಾದ್ರಿ ದೇವಸ್ಥಾನದ ಆಡಳಿತ ವಿವಾದ: ನ್ಯಾಯಾಲಯದ ಆದೇಶದಂತೆ ಅವಕಾಶ ನೀಡಿಸುರಕ್ಷಿತ ಬಚಪನ್ ಅಭಿಯಾನ: ಬೂದಗುಂಪಾದಲ್ಲಿ ಮಕ್ಕಳ ಹಕ್ಕುಗಳು & ಕಾನೂನುಗಳ ಜಾಗೃತಿ ಕಾರ್ಯಕ್ರಮನವೆಂಬರ್ 3 ರಂದು ಗಂಗಾವತಿಯಲ್ಲಿ ಬಸವಾದಿ ಶಿವಶರಣರ ಬೃಹತ್ ಹಿಂದೂ ಸಮಾವೇಶನಾಳೆ ದಲಿತ ಸೇನೆ ರಾಜ್ಯ ಸಮಿತಿಯ ಪೂರ್ವಭಾವಿ ಸಭೆ ಹಾಗೂ ನೂತನ ಪದಾಧಿಕಾರಿಗಳಿಗೆ ಸನ್ಮಾನಹುಲಿಗೆಮ್ಮ ದೇವಿ ದೇವಸ್ಥಾನದ ಅಧಿಕಾರಿ ವಿರುದ್ಧ ದೂರು ದಾಖಲಿಸಿ ಕ್ರಮಕ್ಕೆ ಒತ್ತಾಯಕೊಪ್ಪಳ ಭಾಗ್ಯನಗರ ಬಂದ್‌ಗೆ ಹೈದರಾಬಾದ್ ಕರ್ನಾಟಕ ಯುವಶಕ್ತಿ ಬೆಂಬಲಹಣಕಾಸು ಒಳಗೊಳ್ಳುವಿಕೆ ಸ್ಯಾಚುರೇಶನ್ ಅಭಿಯಾನ: ವಿಶೇಷ ಜಾಗೃತಿ ಪೋಸ್ಟರ್ ಬಿಡುಗಡೆ