Press ID & Credential Portal
Apply / Verify  ➔
LIVE TV LocalCrimeNationalInternationalPoliticsBusinessEducationTechnologyEntertainmentSportsHealthFeatureTravelingBeautyRecipes
Press & Media Credential Portal
✕
1. Apply for Press ID Card
Register official reporter application with Email OTP.
➔
2. Download Approved Badge
Enter Card ID to receive authorization code via email.
3. Verify Reporter ID & Card (View Only)
For Public & Police: Check if card is authentic.
Local News | Districts Belagavi

ತಂತ್ರಜ್ಞಾನ ಬೆಳೆಯಲು ಇಂಜಿನೀಯರ ಕಾರಣ :ಶ್ರೀಧರ ಕೋರಿ

 
ಹುಕ್ಕೇರಿ.,ಜಗತ್ತಿನಲ್ಲಿ ತಂತ್ರಜ್ಞಾನ ಮುಂದುವರೆಯಲು ಇಂಜಿನಿಯರ್ ಗಳೆ ಕಾರಣರಾಗಿದ್ದಾರೆ ಎಂದು ಕರ್ನಾಟಕ ವಿದ್ಯುತ್ ನಿಗಮದ ಕಾಳಿ ಯೋಜನೆ ಮುಖ್ಯ ಅಭಿಯಂತರ ಶ್ರೀಧರ ಕೋರಿ ಹೇಳಿದರು.
      ಹುಕ್ಕೇರಿ ತಾಲೂಕಿನ ಹಿಡಕಲ್ ಜಲಾಶಯದ ಘಟಪ್ರಭಾ ವಿದ್ಯುದಾಗರದಲ್ಲಿ  ಭಾರತ ರತ್ನ ಎಂ ವಿಶ್ವೇಶ್ವರಯ್ಯ ನವರ 165 ನೇ ಜನ್ಮ ದಿನಾಚಾರಣೆ ಹಾಗೂ 59 ನೇ ಅಭಿಯಂತರರ ದಿನಾಚಾರಣೆ ಅಂಗವಾಗಿ ಹಮ್ಮಿಕೊಂಡ ಕಾರ್ಯಕ್ರಮ ವನ್ನು ಸ್ಥಾನಿಕ ಅಭಿಯಂತರ ಬಸವರಾಜ ಡಿ ಯವರ ಅದ್ಯಕ್ಷತೆಯಲ್ಲಿ ಕಾಳಿ ಯೋಜನೆಯ ಕಾಮಗಾರಿ ವಿಭಾಗದ ಮುಖ್ಯ ಅಭಿಯಂತರ ಶ್ರೀಮತಿ ಶಿಲ್ಪಾ ಡಿ ರಾಜ್ ದೀಪ ಬೆಳಗಿಸುವ ಮೂಲಕ ಚಾಲನೆ ನೀಡಿದರು.
ಕಾರ್ಯಕ್ರಮ ಉದ್ದೇಶಿಸಿ ಮಾತನಾಡಿದ ಶ್ರೀಧರ ಕೋರಿ  ಪ್ರಪಂಚ ಮುಂದುವರೆಯಲು ತಂತ್ರಜ್ಞಾನ ಕಾರಣ ಅದಕ್ಕೆ ಇಂಜಿನಿಯರಿಂಗ್ ಪಾತ್ರ ಬಹು ಮುಖ್ಯವಾಗಿದೆ ಎಂದರು.
ವೇದಿಕೆ ಮೇಲೆ ಸೂಫಾ ಡ್ಯಾಂ ಅಧೀಕ್ಷಕ ಅಭಿಯಂತರ ಅಶೋಕ ಕುಮಾರ ಎಚ್ ಎಸ್ , ಪ್ರವೀಣಕುಮಾರ ಅರಳಿಕಟ್ಟಿ, ನರಸಯ್ಯ ದೇವಯ್ಯ, ಆರ್ ವಿ ಮಾಪಾರಿ, ದಾಂಡೆಲಪ್ಪಾ ಪಿ ಎಂ, ಶುಷ್ಮಾ ಸಿ ಪಿ ಉಪಸ್ಥಿತರಿದ್ದರು.
ಘಟಪ್ರಭಾ ವಿದ್ಯುದಾಗರ ಸಿಬ್ಬಂದಿಗಳು ಗಣ್ಯರನ್ನು ಸತ್ಕರಿಸಿ ಅಭಿನಂದಿಸಿದರು.
ಇದಕ್ಕೂ ಮೊದಲು ಮುಖ್ಯ ಕಛೇರಿ ಆವರಣದಲ್ಲಿ ಸರ್ ಎಂ ವಿಶ್ವೇಶ್ವರಯ್ಯ ನವರ ಪುತ್ಥಳಿ ಗೆ ಅಧಿಕಾರಿಗಳು ಪುಷ್ಪ ನಮನ ಸಲ್ಲಿಸಿದರು.
ಮಾದ್ಯಮಗಳೊಂದಿಗೆ ಮಾತನಾಡಿದ ಕಾಳಿ ಯೋಜನೆಯ ಮುಖ್ಯ ಅಭಿಯಂತರ ಶ್ರೀಮತಿ ಶಿಲ್ಪಾ ಡಿ ರಾಜ್ ಇಂಜನಿಯರಗಳಿಗೆ ಸರ್ ಎಂ ವಿಶೇಶ್ವರಯ್ಯನವರೆ ರೂಲ್ ಮಾಡಲ್ ರಾಗಿದ್ದಾರೆ ಅವರ ಕನಸು,ಉದ್ದೇಶ ಗಳನ್ನು ನಾವು ಪಾಲಿಸಬೇಕಾಗಿದೆ ಎಂದರು.
ನಂತರ ಪ್ರತಿಜ್ಞಾ ವಿಧಿ,ರಸಪ್ರಶ್ನೆ ,ಸಂಗೀತ ಕಾರ್ಯಕ್ರಮಗಳು ಜರುಗಿದವು.
ಕಾರ್ಯನಿವಾಹಕ ಅಭಿಯಂತರ ಬಸವರಾಜ ಡಿ ಮಾತನಾಡಿ ಕರ್ನಾಟಕ ವಿದ್ಯುತ್ ನಿಗಮದ ಇಬ್ಬರೂ ಮುಖ್ಯ ಅಭಿಯಂತರರ ಸಮ್ಮುಖದಲ್ಲಿ ಇಂದು ಸರ್ ಎಂ ವಿಶ್ವೇಶ್ವರಯ್ಯ ಜನ್ಮ ದಿನಾಚಾರಣೆ ಮತ್ತು ಇಂಜಿನಿಯರ್ಸ್ ಡೇ ಆಚರಣೆ ಮಾಡುತ್ತಿರುವದು ಸಂತಸದ ದಿನವಾಗಿದೆ ಇದಕ್ಕೆ ಸಹಕರಿಸಿದ ನಿಗಮದ ಅಧಿಕಾರಿಗಳಿಗೆ ,ಸಿಬ್ಬಂದಿಗಳಿಗೆ ಕೃತಜ್ಞತೆಯ ತಿಳಿಸಿದರು.
ಈ ಸಂದರ್ಭದಲ್ಲಿ ಹಿಡಕಲ್ ಜಲಾಶಯದ ಘಟಪ್ರಭಾ ವಿದ್ಯುದಾಗರ ಸಿಬ್ಬಂದಿಗಳು,ಕುಟುಂಬ ಸದಸ್ಯರು ಉಪಸ್ಥಿತರಿದ್ದರು.

Author
KhushiHost News CMS Pro ®
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಅಂಧ, ವಿಕಲಚೇತನರ ಬಾಳಿಗೆ ಬೆಳಕಾದ ಸ್ನೇಹ ಜ್ಯೋತಿ ಸಂಸ್ಥೆ : ಧರ್ಮಾಧ್ಯಕ್ಷ ಡೇರಿಕ್ ಫರ್ನಾಂಡಿಸ್ ಧಾರವಾಡ ಜಿಲ್ಲಾ ಕ್ರೀಡಾ ವಸತಿ ನಿಲಯದ ಅಥ್ಲೇಟಿಕ್ ಕ್ರೀಡಾಕೂದಲ್ಲಿ ಸಾಧನೆಮಹಿಳೆಯರ ಸಾಮಾಜಿಕ, ಆರ್ಥಿಕ ಪ್ರಗತಿಗೆ ಜ್ಞಾನವಿಕಾಸ ಕಾರ್ಯಕ್ರಮ ಪೂರಕ: ದಯಾಶೀಲಅಂಜನಾದ್ರಿ ದೇವಸ್ಥಾನದ ಆಡಳಿತ ವಿವಾದ: ನ್ಯಾಯಾಲಯದ ಆದೇಶದಂತೆ ಅವಕಾಶ ನೀಡಿಸುರಕ್ಷಿತ ಬಚಪನ್ ಅಭಿಯಾನ: ಬೂದಗುಂಪಾದಲ್ಲಿ ಮಕ್ಕಳ ಹಕ್ಕುಗಳು & ಕಾನೂನುಗಳ ಜಾಗೃತಿ ಕಾರ್ಯಕ್ರಮನವೆಂಬರ್ 3 ರಂದು ಗಂಗಾವತಿಯಲ್ಲಿ ಬಸವಾದಿ ಶಿವಶರಣರ ಬೃಹತ್ ಹಿಂದೂ ಸಮಾವೇಶನಾಳೆ ದಲಿತ ಸೇನೆ ರಾಜ್ಯ ಸಮಿತಿಯ ಪೂರ್ವಭಾವಿ ಸಭೆ ಹಾಗೂ ನೂತನ ಪದಾಧಿಕಾರಿಗಳಿಗೆ ಸನ್ಮಾನಹುಲಿಗೆಮ್ಮ ದೇವಿ ದೇವಸ್ಥಾನದ ಅಧಿಕಾರಿ ವಿರುದ್ಧ ದೂರು ದಾಖಲಿಸಿ ಕ್ರಮಕ್ಕೆ ಒತ್ತಾಯಕೊಪ್ಪಳ ಭಾಗ್ಯನಗರ ಬಂದ್‌ಗೆ ಹೈದರಾಬಾದ್ ಕರ್ನಾಟಕ ಯುವಶಕ್ತಿ ಬೆಂಬಲಹಣಕಾಸು ಒಳಗೊಳ್ಳುವಿಕೆ ಸ್ಯಾಚುರೇಶನ್ ಅಭಿಯಾನ: ವಿಶೇಷ ಜಾಗೃತಿ ಪೋಸ್ಟರ್ ಬಿಡುಗಡೆ