ಇಂಡಿ : ತಾಲೂಕಿನ ತಾಂಬಾ ಗ್ರಾಮದಿಂದ ಅಂದಾಜು ೧ ಕಿ ಮೀ ದೂರದಲ್ಲಿ ಬಂಥನಾಳ ಗ್ರಾಮಕ್ಕೆ ಹೋಗುವ ರಸ್ತೆಯಲ್ಲಿ ದಿನಾಂಕ-೨೩/೦೯/೨೦೨೬ ರಂದು ಮದ್ಯಾಹ್ನ ೦೩.೦೦ ಗಂಟೆಗೆ ನೊಂದಣಿ ಸಂಖ್ಯೆ ಇಲ್ಲದ ಬಿಳಿ ಮತ್ತು ಕಪ್ಪು ಮಿಶ್ರೀತ ಬಣ್ಣದ ಬಜಾಜ ಕಂಪನಿಯ ಬಾಕ್ಸರ ದ್ವಿ ಚಕ್ರ ವಾಹನದ ಮೇಲೆ ಅಬಕಾರಿ ದಾಳಿ ಮಾಡಿ ಒಟ್ಟು-೧೭.೨೦೦ ಲೀಟರ್ ಮದ್ಯವನ್ನು ಹಾಗೂ ಒಂದು ದ್ವಿ ಚಕ್ರ ವಾಹನವನ್ನು ಜಪವು ಪಡಿಸಿಕೊಂಡಿದ್ದು (ಜಪ್ತಿಪಡಿಸಿದ ವಸ್ತುಗಳ ಅಂದಾಜು ಮೌಲ್ಯ-೫೦೦೮೦/-) ಆರೋಪಿತನಾದ ಅಬ್ದುಲಸತ್ಕಾರ ಮಹಮ್ಮದಲಿ ಗೌರ ವಯಾ-೨೫ ಸಾ: ಮಸಳಿ ಬಿಕೆ ತಾ: ಇಂಡಿ ಸದರಿ ಆರೋಪಿತನ ವಿರುದ್ಧ ಪ್ರಕರಣ ದಾಖಲಿಸಿಕೊಂಡು ಮಾನ್ಯ ನ್ಯಾಯಾಲಯಕ್ಕೆ ಹಾಜರು ಪಡಿಸಲಾಯಿತು ಎಸ್ ಜಿ ಅಂಗಡಿ ಅಬಕಾರಿ ಉಪ ನಿರೀಕ್ಷಕರು-೨ ಇಂಡಿ ವಲಯ ರವರು ಪ್ರಕರಣವನ್ನು ದಾಖಲಿಸಿಕೊಂಡರು. ಸಿಬಂದಿಗಳಾದ ಶ್ರೀಮತಿ ಸವಿತಾ ಮುಧೋಳ, ಸಂಜೀವಕುಮಾರ ಹೂವಿನವರ, ಸುಭಾಸ ಅಥರ್ಗಾ, ಮಂಜುನಾಥ ಬಡಿಗೇರ, ಶಿವಶಂಕರ ಗೋಟ್ಯಾಳ ದಾಳಿಯಲ್ಲಿ ಪಾಲ್ಗೊಂಡಿದರು ಅಂತಾ ರಾಹುಲ್ ನಾಯಕ ಅಬಕಾರಿ ನಿರೀಕ್ಷಕರು ಇಂಡಿ ವಲಯ ರವರು ತಿಳಿಸಿರುತ್ತಾರೆ