Press ID & Credential Portal
Apply / Verify  ➔
LIVE TV LocalCrimeNationalInternationalPoliticsBusinessEducationTechnologyEntertainmentSportsHealthFeatureTravelingBeautyRecipes
Press & Media Credential Portal
✕
1. Apply for Press ID Card
Register official reporter application with Email OTP.
➔
2. Download Approved Badge
Enter Card ID to receive authorization code via email.
3. Verify Reporter ID & Card (View Only)
For Public & Police: Check if card is authentic.
Local News | Districts Belagavi

ಸೋಲು ಗೆಲುವಿನತ್ತ ಕೊಂಡೊಯ್ಯುವ ಮೆಟ್ಟಿಲು: ನಟ ಡಾ. ವಿ. ರವಿಚಂದ್ರನ್

ನಾಗನೂರ ಪಿ.ಕೆ. ಗ್ರಾಮದಲ್ಲಿ ದಸರಾ ಉತ್ಸವಕ್ಕೆ ಅದ್ಧೂರಿ ತೆರೆ | ಕ್ರೇಜಿ ಸ್ಟಾರ್ ಸಂಗೀತ ಸಂಜೆಗೆ ಜನ ಮಂತ್ರಮುಗ್ಧ


ಅಥಣಿ: ಜೀವನದಲ್ಲಿ ಯಶಸ್ಸು ಸಾಸಲು ಪರಿಶ್ರಮ, ತಾಳ್ಮೆ, ಆತ್ಮವಿಶ್ವಾಸ ಹಾಗೂ ನಿರಂತರ ಪ್ರಯತ್ನ ಅತ್ಯಗತ್ಯ. ಸೋಲಿಗೆ ಹೆದರದೆ ಆತ್ಮವಿಶ್ವಾಸದಿಂದ ಮುನ್ನಡೆಯಬೇಕು. ಸೋಲು ಅಂತಿಮವಲ್ಲ, ಅದು ಗೆಲುವಿನತ್ತ ಕೊಂಡೊಯ್ಯುವ ಮೆಟ್ಟಿಲು ಎಂದು ಖ್ಯಾತ ಚಿತ್ರನಟ ಹಾಗೂ ನಿರ್ದೇಶಕ ಡಾ. ವಿ. ರವಿಚಂದ್ರನ್ ಹೇಳಿದರು.
ತಾಲೂಕಿನ ನಾಗನೂರ ಪಿ.ಕೆ. ಗ್ರಾಮದಲ್ಲಿ ಲಕ್ಷ್ಮೀದೇವಿ ಜಾತ್ರೆಯ ಅಂಗವಾಗಿ ಭಾನುವಾರ ರಾತ್ರಿ ಆಯೋಜಿಸಲಾಗಿದ್ದ ದಸರಾ ಉತ್ಸವದ ಸಮಾರೋಪ ಸಮಾರಂಭವನ್ನು ಖ್ಯಾತ ಚಿತ್ರನಟ ಹಾಗೂ ನಿರ್ದೇಶಕ ಡಾ. ವಿ. ರವಿಚಂದ್ರನ್ ಉದ್ಘಾಟಿಸಿ ಅವರು ಮಾತನಾಡಿ ಗೆಲುವು ಪ್ರತಿಯೊಬ್ಬರಿಗೂ ಸಂತೋಷ ನೀಡುತ್ತದೆ. ಆದರೆ ಸೋಲು ವ್ಯಕ್ತಿಗೆ ತನ್ನ ತಪ್ಪುಗಳನ್ನು ಅರಿತುಕೊಳ್ಳಲು, ಅನುಭವದಿಂದ ಪಾಠ ಕಲಿಯಲು ಹಾಗೂ ಮುಂದಿನ ಪ್ರಯತ್ನದಲ್ಲಿ ಯಶಸ್ಸು ಸಾಸಲು ಪ್ರೇರಣೆ ನೀಡುತ್ತದೆ. ಜೀವನದಲ್ಲಿ ಎದುರಾಗುವ ಸವಾಲುಗಳನ್ನು ಧೈರ್ಯದಿಂದ ಎದುರಿಸಿ, ಆತ್ಮವಿಶ್ವಾಸದೊಂದಿಗೆ ಮುನ್ನಡೆಯುವ ಮನೋಭಾವ ಬೆಳೆಸಿಕೊಳ್ಳಬೇಕು. ನಿರಂತರ ಪ್ರಯತ್ನ ಹಾಗೂ ಪರಿಶ್ರಮದಿಂದ ಯಶಸ್ಸು ಸಾಸಲು ಸಾಧ್ಯ ಎಂದು ಹೇಳಿದರು
ಯುವ ಮುಖಂಡ ಚಿದಾನಂದ ಸವದಿ ಸಮಾರಂಭದ ಅಧ್ಯಕ್ಷತೆ ವಹಿಸಿ ಮಾತನಾಡಿ, ಗ್ರಾಮದ ಎಲ್ಲ ಜನರ ಸಹಕಾರದಿಂದ ದಸರಾ ಉತ್ಸವ ಯಶಸ್ವಿಯಾಗಿ ನೆರವೇರಿದೆ. ಉತ್ಸವದಲ್ಲಿ ಪಾಲ್ಗೊಂಡು ಕಾರ್ಯಕ್ರಮಕ್ಕೆ ವಿಶೇಷ ಮೆರಗು ತಂದ ಖ್ಯಾತ ನಟ ಡಾ. ವಿ. ರವಿಚಂದ್ರನ್ ಅವರಿಗೆ ಕೃತಜ್ಞತೆ ಸಲ್ಲಿಸಿದರು.
ಈ ಸಂದರ್ಭದಲ್ಲಿ ಕುಡಚಿ ಶಾಸಕ ಮಹೇಶ ತಮ್ಮಣ್ಣವರ ಹಾಗೂ ಉದ್ಯಮಿ ದಿಲೀಪ ಗುರುಸ್ವಾಮಿ ಮಾತನಾಡಿದರು. ಶೇಗುಣಸಿ ವಿರಕ್ತಮಠದ ಡಾ. ಮಹಾಂತ ದೇವರು ಸಾನ್ನಿಧ್ಯ ವಹಿಸಿ ಆಶೀರ್ವಚನ ನೀಡಿದರು.
ಕ್ರೇಜಿ ಸ್ಟಾರ್ ಸಂಗೀತ ಸಂಜೆಗೆ ಪ್ರೇಕ್ಷಕರು ಫಿದಾ: ಸಮಾರೋಪ ಸಮಾರಂಭದ ಬಳಿಕ ಕಾಮಿಡಿ ಕಲಾವಿದರು ಹಾಗೂ ಗಾಯಕರು ನಡೆಸಿಕೊಟ್ಟ ಕ್ರೇಜಿ ಸ್ಟಾರ್ ಸಂಗೀತ ಸಂಜೆಯು ಪ್ರೇಕ್ಷಕರನ್ನು ರಂಜಿಸಿತು. ನಾಗನೂರ ಪಿ.ಕೆ. ಗ್ರಾಮದೊಂದಿಗೆ ಸುತ್ತಮುತ್ತಲಿನ ಗ್ರಾಮಗಳಿಂದ ಆಗಮಿಸಿದ್ದ ಜನರು ಸಂಗೀತ ಹಾಗೂ ಮನರಂಜನಾ ಕಾರ್ಯಕ್ರಮಗಳನ್ನು ಆಸ್ವಾದಿಸಿದರು. ಈ ಮೂಲಕ ಲಕ್ಷ್ಮೀದೇವಿ ಜಾತ್ರೆಯ ಅಂಗವಾಗಿ ನಡೆದ ದಸರಾ ಉತ್ಸವಕ್ಕೆ ಸಂಭ್ರಮದ ತೆರೆ ಬಿದ್ದಿತು.
ಲಕ್ಷ್ಮಣ ಸಲಗರ ಸ್ವಾಗತಿಸಿದರು. ಶೃತಿ ನಿಗಡೆ ನಿರೂಪಿಸಿದರು. ಬಸವರಾಜ ತೇಲಿ ವಂದಿಸಿದರು.
ಕಾರ್ಯಕ್ರಮದಲ್ಲಿ ಡಿವೈಎಸ್‌ಪಿ ಪಿ. ವೀರೇಂದ್ರಕುಮಾರ, ಸಿಪಿಐ ಸಂತೋಷ ಹಳ್ಳೂರ, ಶಂಕರ ನಂದೇಶ್ವರ, ಮಲ್ಲೇಶ ಸವದಿ, ಸಂತೋಷ ಸಾವಡಕರ, ರಾಹುಲ ಪೂಜಾರಿ, ಶಿವಗೌಡ ಬಿಳ್ಳೂರ, ಚಂದು ಸಾವಡಕರ, ಅಭಿನಂದನ ಪಾಟೀಲ, ಅಮಿತ ಜಕಾತಿ ಸೇರಿದಂತೆ ಹಲವರು ಉಪಸ್ಥಿತರಿದ್ದರು.


Author
KhushiHost News CMS Pro ®
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಅಂಧ, ವಿಕಲಚೇತನರ ಬಾಳಿಗೆ ಬೆಳಕಾದ ಸ್ನೇಹ ಜ್ಯೋತಿ ಸಂಸ್ಥೆ : ಧರ್ಮಾಧ್ಯಕ್ಷ ಡೇರಿಕ್ ಫರ್ನಾಂಡಿಸ್ ಧಾರವಾಡ ಜಿಲ್ಲಾ ಕ್ರೀಡಾ ವಸತಿ ನಿಲಯದ ಅಥ್ಲೇಟಿಕ್ ಕ್ರೀಡಾಕೂದಲ್ಲಿ ಸಾಧನೆಮಹಿಳೆಯರ ಸಾಮಾಜಿಕ, ಆರ್ಥಿಕ ಪ್ರಗತಿಗೆ ಜ್ಞಾನವಿಕಾಸ ಕಾರ್ಯಕ್ರಮ ಪೂರಕ: ದಯಾಶೀಲಅಂಜನಾದ್ರಿ ದೇವಸ್ಥಾನದ ಆಡಳಿತ ವಿವಾದ: ನ್ಯಾಯಾಲಯದ ಆದೇಶದಂತೆ ಅವಕಾಶ ನೀಡಿಸುರಕ್ಷಿತ ಬಚಪನ್ ಅಭಿಯಾನ: ಬೂದಗುಂಪಾದಲ್ಲಿ ಮಕ್ಕಳ ಹಕ್ಕುಗಳು & ಕಾನೂನುಗಳ ಜಾಗೃತಿ ಕಾರ್ಯಕ್ರಮನವೆಂಬರ್ 3 ರಂದು ಗಂಗಾವತಿಯಲ್ಲಿ ಬಸವಾದಿ ಶಿವಶರಣರ ಬೃಹತ್ ಹಿಂದೂ ಸಮಾವೇಶನಾಳೆ ದಲಿತ ಸೇನೆ ರಾಜ್ಯ ಸಮಿತಿಯ ಪೂರ್ವಭಾವಿ ಸಭೆ ಹಾಗೂ ನೂತನ ಪದಾಧಿಕಾರಿಗಳಿಗೆ ಸನ್ಮಾನಹುಲಿಗೆಮ್ಮ ದೇವಿ ದೇವಸ್ಥಾನದ ಅಧಿಕಾರಿ ವಿರುದ್ಧ ದೂರು ದಾಖಲಿಸಿ ಕ್ರಮಕ್ಕೆ ಒತ್ತಾಯಕೊಪ್ಪಳ ಭಾಗ್ಯನಗರ ಬಂದ್‌ಗೆ ಹೈದರಾಬಾದ್ ಕರ್ನಾಟಕ ಯುವಶಕ್ತಿ ಬೆಂಬಲಹಣಕಾಸು ಒಳಗೊಳ್ಳುವಿಕೆ ಸ್ಯಾಚುರೇಶನ್ ಅಭಿಯಾನ: ವಿಶೇಷ ಜಾಗೃತಿ ಪೋಸ್ಟರ್ ಬಿಡುಗಡೆ