ನೇಸರಗಿ 15- ಗ್ರಾಮದ ಹಿರಿಯರು, 3 ಬಾರಿ ನೇಸರಗಿ ಗ್ರಾಮ ಪಂಚಾಯತ ಅಧ್ಯಕ್ಷರಾಗಿದ್ದ ಶಿವನಗೌಡ ಶಿವಮೊಗ್ಗೆಪ್ಪ ಪಾಟೀಲ (82) ಇವರು ಗುರುವಾರ ದಿ. 15-10-2026 ರಂದು ಅನಾರೋಗ್ಯದಿಂದ ನಿಧನರಾದರು. ಮೃತರು ಕೆ ಎಲ್ ಇ ಸಂಸ್ಥೆಯ ನಿರ್ದೇಶಕರಾದ ವಾಯ್ ಎಸ್ ಪಾಟೀಲ ಅವರ ಕಿರಿಯ ಸಹೋದರರಾಗಿದ್ದು, ಮೂವರು ಪುತ್ರರು ಹಾಗೂ ಅಪಾರ ಪಾಟೀಲ ಬಂದು ಬಳಗವನ್ನು ಅಗಲಿದ್ದಾರೆ.
ಮೃತರ ಅಂತ್ಯ ಕ್ರೀಯೆಯೂ ಗುರುವಾರ ಮದ್ಯಾಹ್ನ 2-00 ಘಂಟೆಗೆ ಗ್ರಾಮದ ರುದ್ರಭೂಮಿಯಲ್ಲಿ ನೆರವೇರಿತು. ಅಂತ್ಯಕ್ರೀಯಲ್ಲಿ ಕಿತ್ತೂರು ಶಾಸಕ ಬಾಬಾಸಾಹೇಬ ಪಾಟೀಲ, ಮಾಜಿ ಶಾಸಕರಾದ ಮಹಾಂತೇಶ ದೊಡ್ಡಗೌಡರ, ಡಾ. ವಿ ಐ ಪಾಟೀಲ, ಕೆ ಪಿ ಸಿ ಸಿ ಸದಸ್ಯ ರೋಹಿಣಿ ಪಾಟೀಲ, ಮಾಜಿ ಡಿಸಿಸಿ ಬ್ಯಾಂಕ ಅಧ್ಯಕ್ಷ ಅಪ್ಪಸಾಹೇಬ ಕುಲಗುಡೆ, ಮಾಜಿ ಜಿ ಪಂ ಅಧ್ಯಕ್ಷ ಬಸಗೌಡ ಪಾಟೀಲ,ಎಂ ವಾಯ್ ಸೋಮಣ್ಣವರ, ಮಾಜಿ ಜಿ ಪಂ ಸದಸ್ಯ ನಿಂಗಪ್ಪ ಅರಿಕೇರಿ, ಬಾಳಾಸಾಹೇಬ ದೇಸಾಯಿ, ದೀಪಕಗೌಡ ಪಾಟೀಲ, ಮಾಜಿ ಮದ್ಯಪಾನ ಸಂಯಮ ಮಂಡಳಿ ಅಧ್ಯಕ್ಷ ಮಲ್ಲಿಕಾರ್ಜುನ ತುಬಾಕಿ, ಸಚಿನ ಪಾಟೀಲ, ಬಾಳಪ್ಪ ಮಾಳಗಿ, ಸೋಮಪ್ಪ ಸೋಮಣ್ಣವರ, ಬರಮಣ್ಣ ಸತ್ತೇನ್ನವರ, ಅಡಿವಪ್ಪ ಮಾಳಣ್ಣವರ,ಸಿ ಆರ್ ಪಾಟೀಲ,ಸೋಮನಗೌಡ ಪಾಟೀಲ, ಮುಖಂಡರು, ಹಿರಿಯರು, ಗ್ರಾಮಸ್ಥರು,ಎಲ್ಲ ಸಮಾಜದ ಮುಖಂಡರು, ಜನತೆ, ಅಭಿಮಾನಿಗಳು ಪಾಲ್ಗೊಂಡು ಅಂತಿಮ ನಮನ ಸಲ್ಲಿಸಿದರು.