ಬೆಳಗಾವಿ.ಜಿಲ್ಲಾ ಪಂಚಾಯತ್ ಬೆಳಗಾವಿ ಮತ್ತು ಸಾರ್ವಜನಿಕ ಶಿಕ್ಷಣ ಇಲಾಖೆ ಚಿಕ್ಕೋಡಿ ಇವರ ಸಂಯುಕ್ತ ಆಶ್ರಯದಲ್ಲಿ ರಾಯಬಾಗ ತಾಲೂಕಿನ ಚಿಂಚಲಿಯಲ್ಲಿ ನಡೆದ ಚಿಕ್ಕೋಡಿ ಶೈಕ್ಷಣಿಕ ಜಿಲ್ಲಾ ಮಟ್ಟದ ಕ್ರೀಡಾಕೂಟದಲ್ಲಿ ಟೇಕ್ವಾಂಡೋ ಕ್ರೀಡೆಯಲ್ಲಿ ಘಟಪ್ರಭಾದ ಸಲೋನಿ ಬಸವರಾಜ ಮೇತ್ರಿ (ಕ್ರೈಸ್ತ ಕಾನ್ವೆಂಟ್ ಘಟಪ್ರಭಾದ ವಿದ್ಯಾರ್ಥಿನಿ) ಜಿಲ್ಲಾ ಮಟ್ಟದಲ್ಲಿ ವಿಜೇತರಾಗಿ ಚಿನ್ನದ ಪದಕ ಗೆಲ್ಲುವ ಮೂಲಕ ರಾಜ್ಯ ಮಟ್ಟಕ್ಕೆ ಆಯ್ಕೆ ಆಗಿದ್ದಾರೆ.
ಕುಮಾರ್ ಉತ್ತಮ ಬಸವರಾಜ ಕುಂಟೋಜಿ (ಡಾ ಗಂಗಾಧರ ಆಂಗ್ಲ ಮಾಧ್ಯಮ ಶಾಲೆ, ಶಿರಢಾಣ) ಬೆಳ್ಳಿ ಪದಕ ಗಳಿಸಿದ್ದಾರೆ.
ಸಾಧನಾ ಅ ಹಾಲುಕ್ಕಿ ( ಕ್ರೈಸ್ತ ಕಾನ್ವೆಂಟ್ ಘಟಪ್ರಭಾ) ಕಂಚಿನ ಪದಕ ಗಳಿಸಿ ಕೀರ್ತಿ ತಂದಿದ್ದಾರೆ.
ಈ ಮೂವರಿಗೂ ಘಟಪ್ರಭಾದ ಶ್ರೀ ಶಿವಯೋಗಿ ಟೇಕ್ವಾಂಡೋ ಕೋಚಿಂಗ್ ಸೆಂಟರ್ ಘಟಪ್ರಭಾದ ಲಕ್ಷ್ಮಣ ಮೇತ್ರಿ ಅವರು ತರಬೇತಿ ನೀಡಿದ್ದಾರೆ,
ಅವರೆಲ್ಲರಿಗೂ ಶಿಕ್ಷಣ ಇಲಾಖೆಯ ಅಧಿಕಾರಿಗಳು, ಕೆಂಪಯ್ಯಸ್ವಾಮಿ ಮಠದ ಪರಮಪೂಜ್ಯ ಡಾ. ಮಲ್ಲಿಕಾರ್ಜುನ ಮಹಾಸ್ವಾಮಿಗಳು, ಕ್ರೈಸ್ಟ್ ಕಾನ್ವೆಂಟ್ ಶಾಲೆಯ ಛೇರ್ಮನ ರಾಜು ಆರ್ ಬೆಂಗಳೂರೆ, ಪ್ರಾಂಶುಪಾಲರಾದ ಶ್ರೀಮತಿ ವೀಣಾ ಬೆಂಗಳೂರೆ, ಘಟಪ್ರಭಾದ, ಶಿರಡಾಣ ಎಲ್ಲ ಶಿಕ್ಷಣ ಸಂಸ್ಥೆಗಳ ಅಧ್ಯಕ್ಷರು, ಪ್ರಾಂಶುಪಾಲರು, ಶಿಕ್ಷಕರು, ಪಾಲಕರು ಹಾಗೂ ಸಾಮಾಜಿಕ ಕಾರ್ಯಕರ್ತರಾದ ಶ್ರೀಕಾಂತ ವಿ ಮಹಾಜನ ಅಭಿನಂದಸಿದ್ದಾರೆ.