ಮುಗಳಖೋಡ (೮) ಹುಕ್ಕೇರಿ ತಾಲೂಕಿನ ಬಸ್ಸಾಪೂರ ಗ್ರಾಮದಲ್ಲಿ ಸರಕಾರಿ ಪ್ರೌಢಶಾಲೆಯಲ್ಲಿ ಜಿಲ್ಲಾ ಮಟ್ಟದ 17 ವಯೋಮಾನದ ಬಾಲಕಿಯರ ಕಬಡ್ಡಿ ಪಂದ್ಯಾವಳಿಯಲ್ಲಿ ಮುಗಳಖೋಡದ ಶ್ರೀ ಸಿದ್ದರಾಮೇಶ್ವರ ಪ್ರೌಢಶಾಲೆಯ ಬಾಲಕಿಯರು ಆಯ್ಕೆಯಾಗಿದ್ದಾರೆ. ಈ ಕಬಡ್ಡಿ ತಂಡವು 3 ಸಲ ರಾಜ್ಯಮಟ್ಟ 5 ಸಲ ವಿಭಾಗ ಮಟ್ಟಕ್ಕೆ ಆಯ್ಕೆಯಾಗಿ ಹೆಗ್ಗಳಿಕೆಗೆ ಪಾತ್ರವಾಗಿದೆ .
ಪ್ರಸಕ್ತ 2026-27 ನೇ ಸಾಲಿನ ಕಬಡ್ಡಿಯಲ್ಲಿ ತಾಲೂಕು , ಜಿಲ್ಲಾ ಮಟ್ಟದಲ್ಲಿ ಬಾಲಕಿಯರಾದ ಸ್ನೇಹಾ ಯಡವನ್ನವರ, ಅಮೃತ ಮಡಿವಾಳ, ದೀಪಾ ತೂಗದಲಿ, ಸ್ನೇಹ ಐಗಳಿ, ಅಕ್ಷತಾ ಸೋರಗಾಂವಿ , ತಸ್ಮೀಯ ಹನಗಿ, ಅಕ್ಷತಾ ಯಲ್ಲಟ್ಟಿ , ರೋಹಿಣಿ ಭಾನುಸೇ, ಸುಮಾ ಬೋರಗಾವೆ , ನೇತ್ರಾ ತೇಲಿ, ತ್ರಿವೇಣಿ ನಿಡವಣಿ ಪ್ರೀತಿ ಜಾಧವ ತರಬೇತಿದಾರರು ಬಿ ಬಿ ಬಂಡಿಗಣಿ , ಮಾರ್ಗದರ್ಶನದಲ್ಲಿ ಅತ್ಯುತ್ತಮ ಪ್ರದರ್ಶನ ನೀಡಿ ಆಯ್ಕೆಯಾದ ವಿದ್ಯಾರ್ಥಿಗಳ ಈ ಸಾಧನೆಗೆ ಸಂಸ್ಥೆಯ ಅಧ್ಯಕ್ಷ ಸಿದ್ಧಾರೂಢ ಈಟಿ , ಸಂಸ್ಥೆಯ ಕಾರ್ಯದರ್ಶಿ ಅಶೋಕ ಕೊಪ್ಪದ ಹಾಗೂ ಪಾಲಕರು ಆಡಳಿತ ಮಂಡಳಿ ಗುರು ವೃಂದ ಹರ್ಷ ವ್ಯಕ್ತಪಡಿಸಿದ್ದಾರೆ.
ಫೋಟೋ ,ವಿಭಾಗ ಮಟ್ಟಕ್ಕೆ ಆಯ್ಕೆಯಾದ ವಿದ್ಯಾರ್ಥಿನಿಯರೊಂದಿಗೆ ಶಿಕ್ಷಕ ವೃಂದ.