E-PAPER
21 Nov 2026, 03:24:47 AM|
Gold₹12977/gGold24K ₹12,977/g - 22K ₹11,885/gTap for full details
Press ID & Credential Portal
Apply / Verify  ➔
LIVE TV LocalCrimeNationalInternationalPoliticsBusinessEditorialEducationTechnologyEntertainmentSportsHealthFeatureTravelingBeauty
Press & Media Credential Portal
✕
1. Apply for Press ID Card
Register official reporter application with Email OTP.
➔
2. Download Approved Badge
Enter Card ID to receive authorization code via email.
3. Verify Reporter ID & Card (View Only)
For Public & Police: Check if card is authentic.
National News

Gujarat | ಖಾಸಗಿ ವಾಹನಗಳ ಮೇಲೆ ಜಾತಿ, ಸಮುದಾಯದ ಗುರುತು ಪ್ರದರ್ಶನ ನಿಷೇಧಿಸಿದ ಸರಕಾರ

ಅಹ್ಮದಾಬಾದ್, ನ. 20: ಖಾಸಗಿ ವಾಹನಗಳ ಮೇಲೆ ಜಾತಿ, ಸಮುದಾಯಕ್ಕೆ ಸಂಬಂಧಿಸಿದ ಪದಗಳು, ಚಿಹ್ನೆಗಳು ಮತ್ತು ಸಂದೇಶಗಳನ್ನು ನಿಷೇಧಿಸಲು ಗುಜರಾತ್ ಸರಕಾರ ಮೋಟಾರು ವಾಹನ ನಿಯಮಗಳಿಗೆ ತಿದ್ದುಪಡಿ ತಂದಿದೆ. ಇದರಿಂದ ಇನ್ನು ಮುಂದೆ ಜಾತಿ ಹಾಗೂ ಸಮುದಾಯದ ಗುರುತುಗಳನ್ನು ಪ್ರದರ್ಶಿಸುವವರು ಶಿಕ್ಷೆಗೆ ಗುರಿಯಾಗಲಿದ್ದಾರೆ.

ಈ ನಿಷೇಧ ದ್ವಿಚಕ್ರ ವಾಹನ, ತ್ರಿಚಕ್ರ ವಾಹನ, ಕಾರು, ಬಸ್ ಮತ್ತು ಟ್ರಕ್ಗಳಿಗೆ ಅನ್ವಯಿಸಲಿದ್ದು, ಪ್ರಸ್ತುತ ಚಾಲ್ತಿಯಲ್ಲಿರುವ ವಾಹನ ಪ್ರದರ್ಶನ ನಿಯಮಗಳ ವ್ಯಾಪ್ತಿಗೆ ಜಾತಿ ಆಧಾರಿತ ಫಲಕಗಳು ಹಾಗೂ ಬರಹಗಳನ್ನು ತರುವ ಉದ್ದೇಶವನ್ನು ಹೊಂದಿದೆ.

ಬಂದರು ಮತ್ತು ಸಾರಿಗೆ ಇಲಾಖೆಯು ‘ಗುಜರಾತ್ ಮೋಟಾರು ವಾಹನಗಳ (ಮೂರನೇ ತಿದ್ದುಪಡಿ) ನಿಯಮಗಳು, 2026’ ಅನ್ನು ಅಧಿಸೂಚಿಸಿದ್ದು, ಖಾಸಗಿ ವಾಹನಗಳ ಮೇಲೆ ಜಾತಿ ಮತ್ತು ಸಮುದಾಯದ ಗುರುತುಗಳ ಪ್ರದರ್ಶನವನ್ನು ನಿಯಂತ್ರಿಸಲು ನಿರ್ದಿಷ್ಟ ನಿಬಂಧನೆಗಳನ್ನು ಪರಿಚಯಿಸಿದೆ.

2026ರ ನ. 17ರಂದು ಹೊರಡಿಸಲಾದ ಅಧಿಸೂಚನೆಯಂತೆ, ರಾಜ್ಯ ಸರಕಾರ ಗುಜರಾತ್ ಮೋಟಾರು ವಾಹನ ನಿಯಮಗಳು, 1989ಕ್ಕೆ ತಿದ್ದುಪಡಿ ತಂದಿದೆ. ಈ ತಿದ್ದುಪಡಿಯ ಮೂಲಕ ನಿಷೇಧಿತ ಪ್ರದರ್ಶನಗಳ ಪಟ್ಟಿಯಲ್ಲಿ ಜಾತಿ ಸೂಚಕ ಬರಹಗಳನ್ನು ನಿರ್ದಿಷ್ಟವಾಗಿ ಸೇರಿಸಲಾಗಿದೆ.

ಇದರ ಪರಿಣಾಮ, ಸರಕಾರ ಪ್ರತ್ಯೇಕವಾಗಿ ವಿನಾಯಿತಿ ನೀಡದ ಹೊರತು, ‘ಸನಾತನ’, ‘ಹಿಂದೂ’, ‘ಪಟೇಲ್’/‘ಪಟೀದಾರ್’ ಮತ್ತು ‘ರಾಜಪೂತ್’ನಂತಹ ಪದಗಳು ಹಾಗೂ ಇತರ ಜಾತಿ ಅಥವಾ ಸಮುದಾಯಗಳ ಉಲ್ಲೇಖಗಳನ್ನು ಖಾಸಗಿ ವಾಹನಗಳ ಮೇಲೆ ಪ್ರದರ್ಶಿಸಲು ಇನ್ನು ಮುಂದೆ ಅನುಮತಿ ಇರುವುದಿಲ್ಲ.

ಈ ತಿದ್ದುಪಡಿಯ ಭಾಗವಾಗಿ, ನಿಯಮ 125ರ ಉಪನಿಯಮ (1)ರಲ್ಲಿ ಇದ್ದ ‘‘ಯಾವುದೇ ಜಾಹೀರಾತು ಸಾಧನ, ಚಿತ್ರ’’ ಎಂಬ ಪದದ ಬದಲಿಗೆ ‘‘ಯಾವುದೇ ಜಾಹೀರಾತು ಸಾಧನ, ಜಾತಿ ಸೂಚಕ ಬರಹ, ಚಿತ್ರ’’ ಎಂದು ಬದಲಾಯಿಸಲಾಗಿದೆ.

ಇದಲ್ಲದೆ, ಸರಕಾರವು ನಿಯಮ 138ಕ್ಕೆ ಹೊಸ ಉಪನಿಯಮ (3) ಅನ್ನು ಸೇರಿಸಿದ್ದು, ಅದು ಖಾಸಗಿ ವಾಹನಗಳ ಮೇಲೆ ಯಾವುದೇ ಜಾಹೀರಾತು ಸಾಧನ, ಜಾತಿ ಸೂಚಕ ಚಿಹ್ನೆ ಅಥವಾ ಬರಹವನ್ನು ಪ್ರದರ್ಶಿಸುವುದನ್ನು ಸ್ಪಷ್ಟವಾಗಿ ನಿಷೇಧಿಸುತ್ತದೆ.

Author
KhushiHost News CMS Pro ®
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
KhushiHostWatch on YouTube →
जाहिराती, बॅकअप, सुरक्षा आणि साधने | Marathi Tutorial — KhushiHost News
Comments (0)
Comments appear after approval.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಮದುವೆಯಾಗಲು ಬಲವಂತಪಡಿಸಿದ ‘ಹುಚ್ಚು’ ಅಭಿಮಾನಿ; ಇನ್‌ ಫ್ಲುಯೆನ್ಸರ್ ಗಳ ಬಂಧುಗಳಿಂದ ಯುವಕನ ಥಳಿಸಿ ಹತ್ಯೆGujarat | ಖಾಸಗಿ ವಾಹನಗಳ ಮೇಲೆ ಜಾತಿ, ಸಮುದಾಯದ ಗುರುತು ಪ್ರದರ್ಶನ ನಿಷೇಧಿಸಿದ ಸರಕಾರವಿದೇಶಿ ವಿನಿಮಯ ಉಲ್ಲಂಘನೆ ಪ್ರಕರಣ | ರಾಜ್ಯ ಸಭಾ ಸದಸ್ಯ ಸತ್ನಾಮ್ ಸಂಧುಗೆ ED ಸಮನ್ಸ್Tamil Nadu | ವಿವಾದಾತ್ಮಕ ತಿರುಪ್ಪರಂಕುಂಡ್ರಂ ಬೆಟ್ಟದ ತುದಿಯಲ್ಲಿ ನ. 24ರಂದು ಒಂದು ಬಾರಿಗೆ ಕಾರ್ತಿಕೈ ದೀಪ ಬೆಳಗಲು ಸುಪ್ರೀಂ ಅನುಮತಿManipur | ಎನ್ಕೌಂಟರ್ ನಲ್ಲಿ ಓರ್ವ ಮೃತ್ಯು; 8 ಮಂದಿ ಬಂಡುಕೋರರ ಬಂಧನRajasthan | ಪಂಚಾಯತ್ ಚುನಾವಣೆ; ಕಾಂಗ್ರೆಸ್ ಜಯಭೇರಿ, ಬಿಜೆಪಿಗೆ ಮುಖಭಂಗತಪ್ಪು ಮಾಹಿತಿ ನೀಡಿ ಫಾರ್ಮ್-7 ಸಲ್ಲಿಸಿದ ಆರೋಪ; ಸಿ.ಕೆ.ರಾಮಮೂರ್ತಿ ಸೇರಿ ನಾಲ್ವರ ವಿರುದ್ಧದ ತನಿಖೆಗೆ ತಡೆ ನೀಡಲು ಹೈಕೋರ್ಟ್ ನಕಾರಭ್ರಷ್ಟಾಚಾರ, ಡ್ರಗ್ಸ್, ಆರ್ಥಿಕ ಅಪರಾಧ-ದ್ವೇಷ ಭಾಷಣದ ವಿರುದ್ಧ ಶೂನ್ಯ ಸಹಿಷ್ಣುತೆ : ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್‘ದಿ ಫೈಲ್’ ಫೇಸ್ ಬುಕ್ ಪುಟ ನಿರ್ಬಂಧ ಪ್ರಶ್ನಿಸಿ ಹೈಕೋರ್ಟ್‌ಗೆ ಅರ್ಜಿ‘ಸಿಎಂ ಡ್ಯಾಶ್‍ಬೋರ್ಡ್’ ಲೋಕಾರ್ಪಣೆ ಮಾಡಿದ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್