E-PAPER
21 Nov 2026, 03:24:48 AM|
Gold₹12977/gGold24K ₹12,977/g - 22K ₹11,885/gTap for full details
Press ID & Credential Portal
Apply / Verify  ➔
LIVE TV LocalCrimeNationalInternationalPoliticsBusinessEditorialEducationTechnologyEntertainmentSportsHealthFeatureTravelingBeauty
Press & Media Credential Portal
✕
1. Apply for Press ID Card
Register official reporter application with Email OTP.
➔
2. Download Approved Badge
Enter Card ID to receive authorization code via email.
3. Verify Reporter ID & Card (View Only)
For Public & Police: Check if card is authentic.
National News

ವಿದೇಶಿ ವಿನಿಮಯ ಉಲ್ಲಂಘನೆ ಪ್ರಕರಣ | ರಾಜ್ಯ ಸಭಾ ಸದಸ್ಯ ಸತ್ನಾಮ್ ಸಂಧುಗೆ ED ಸಮನ್ಸ್

ಚಂಡೀಗಢ, ನ. 20: ವಿದೇಶಿ ವಿನಿಮಯ ಉಲ್ಲಂಘನೆ ಪ್ರಕರಣಕ್ಕೆ ಸಂಬಂಧಿಸಿದಂತೆ ನಾಮನಿರ್ದೇಶಿತ ರಾಜ್ಯ ಸಭಾ ಸದಸ್ಯ ಹಾಗೂ ಚಂಡೀಗಢ ವಿಶ್ವವಿದ್ಯಾನಿಲಯದ ಕುಲಪತಿ ಸತ್ನಾಮ್ ಸಿಂಗ್ ಸಂಧು ಅವರಿಗೆ ಜಾರಿ ನಿರ್ದೇಶನಾಲಯ (ED) ಸಮನ್ಸ್ ಜಾರಿ ಮಾಡಿದೆ.

ಸಂಧು ಅವರಿಗೆ ಸಂಬಂಧಿಸಿರುವ ಸಂಸ್ಥೆಗಳಿಗೆ ಹಣ ವರ್ಗಾವಣೆ ಮಾಡಿರುವ ಆರೋಪ ಕೇಳಿ ಬಂದಿದೆ. ಈ ಹಣಕಾಸು ವಹಿವಾಟಿನ ಕುರಿತು ವಿಚಾರಣೆಗೆ ಜಲಂಧರ್ ನಲ್ಲಿರುವ ED ಪ್ರಾದೇಶಿಕ ಕಚೇರಿಗೆ ಹಾಜರಾಗುವಂತೆ ಅಧಿಕಾರಿಗಳು ಅವರಿಗೆ ಸಮನ್ಸ್ ಜಾರಿ ಮಾಡಿದ್ದಾರೆ.

57 ವರ್ಷದ ಸಂಧು ಅವರಿಗೆ ಸಂಬಂಧಿಸಿದ ಸಂಸ್ಥೆಗಳು ‘Vuenow Group’ ಕಂಪೆನಿಗಳಿಂದ ಹಣ ಪಡೆದಿವೆ ಎಂದು ಮೂಲಗಳು ತಿಳಿಸಿವೆ. ಸಾರ್ವಜನಿಕರಿಂದ ಸಂಗ್ರಹಿಸಿದ ಹಣವನ್ನು ದುರ್ಬಳಕೆ ಮಾಡಿಕೊಂಡು ಬಹುಕೋಟಿ ರೂ.ಗಳ ‘ಕ್ಲೌಡ್ ಪಾರ್ಟಿಕಲ್ ಹಗರಣ’ ಎಸಗಿರುವ ಆರೋಪದ ಮೇಲೆ ಈ ಗ್ರೂಪ್ ವಿರುದ್ಧ ಪ್ರಸ್ತುತ ತನಿಖೆ ನಡೆಯುತ್ತಿದೆ.

ಈ ವಹಿವಾಟಿನ ಸ್ವರೂಪ ಮತ್ತು ಉದ್ದೇಶವನ್ನು ಸ್ಪಷ್ಟಪಡಿಸಿಕೊಳ್ಳಲು ED ಸಂಧು ಅವರಿಗೆ ಸಮನ್ಸ್ ಜಾರಿ ಮಾಡಿದೆ. ಅವರು ಅಕ್ರಮ ಹಣ ವರ್ಗಾವಣೆ ಪ್ರಕರಣದಲ್ಲಿ ನೇರವಾಗಿ ಭಾಗಿಯಾಗಿದ್ದಾರೆ ಎಂಬ ಕಾರಣಕ್ಕೆ ಈ ಸಮನ್ಸ್ ನೀಡಿಲ್ಲ ಎಂದು ಮೂಲಗಳು ಸ್ಪಷ್ಟಪಡಿಸಿವೆ.

ಸಂಧು ಅವರಿಗೆ ಆರಂಭದಲ್ಲಿ ನ. 12ರಂದು ಹಾಜರಾಗಲು ಸಮನ್ಸ್ ನೀಡಲಾಗಿತ್ತು. ಆದರೆ, ಅವರು ಹಾಜರಾಗಿರಲಿಲ್ಲ. ಈಗ ಅವರಿಗೆ ನ. 25ರಂದು ವಿಚಾರಣೆಗೆ ಹಾಜರಾಗುವಂತೆ ತಿಳಿಸಲಾಗಿದೆ. EDಯ ಜಲಂಧರ್ ವಲಯ ಕಚೇರಿಯಿಂದ ಸಮನ್ಸ್ ನೀಡಲಾಗಿದೆ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಈ ಪ್ರಕರಣದಲ್ಲಿ Vuenow Groupನ ಸಿಇಒ ಮತ್ತು ಸಂಸ್ಥಾಪಕ ಸುಖ್ವಿಂದರ್ ಸಿಂಗ್ ಖರೂರ್ ಹಾಗೂ ಅವರ ಪತ್ನಿ ಡಿಂಪಲ್ ಖರೂರ್ ಸೇರಿದಂತೆ ಮೂವರನ್ನು ED ಈಗಾಗಲೇ ಬಂಧಿಸಿದೆ. ED 2024ರಿಂದ ಅಕ್ರಮ ಹಣ ವರ್ಗಾವಣೆ ತಡೆ ಕಾಯ್ದೆಯಡಿ ಈ ಪ್ರಕರಣದ ತನಿಖೆ ನಡೆಸುತ್ತಿದೆ.

Author
KhushiHost News CMS Pro ®
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
KhushiHostWatch on YouTube →
जाहिराती, बॅकअप, सुरक्षा आणि साधने | Marathi Tutorial — KhushiHost News
Comments (0)
Comments appear after approval.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಮದುವೆಯಾಗಲು ಬಲವಂತಪಡಿಸಿದ ‘ಹುಚ್ಚು’ ಅಭಿಮಾನಿ; ಇನ್‌ ಫ್ಲುಯೆನ್ಸರ್ ಗಳ ಬಂಧುಗಳಿಂದ ಯುವಕನ ಥಳಿಸಿ ಹತ್ಯೆGujarat | ಖಾಸಗಿ ವಾಹನಗಳ ಮೇಲೆ ಜಾತಿ, ಸಮುದಾಯದ ಗುರುತು ಪ್ರದರ್ಶನ ನಿಷೇಧಿಸಿದ ಸರಕಾರವಿದೇಶಿ ವಿನಿಮಯ ಉಲ್ಲಂಘನೆ ಪ್ರಕರಣ | ರಾಜ್ಯ ಸಭಾ ಸದಸ್ಯ ಸತ್ನಾಮ್ ಸಂಧುಗೆ ED ಸಮನ್ಸ್Tamil Nadu | ವಿವಾದಾತ್ಮಕ ತಿರುಪ್ಪರಂಕುಂಡ್ರಂ ಬೆಟ್ಟದ ತುದಿಯಲ್ಲಿ ನ. 24ರಂದು ಒಂದು ಬಾರಿಗೆ ಕಾರ್ತಿಕೈ ದೀಪ ಬೆಳಗಲು ಸುಪ್ರೀಂ ಅನುಮತಿManipur | ಎನ್ಕೌಂಟರ್ ನಲ್ಲಿ ಓರ್ವ ಮೃತ್ಯು; 8 ಮಂದಿ ಬಂಡುಕೋರರ ಬಂಧನRajasthan | ಪಂಚಾಯತ್ ಚುನಾವಣೆ; ಕಾಂಗ್ರೆಸ್ ಜಯಭೇರಿ, ಬಿಜೆಪಿಗೆ ಮುಖಭಂಗತಪ್ಪು ಮಾಹಿತಿ ನೀಡಿ ಫಾರ್ಮ್-7 ಸಲ್ಲಿಸಿದ ಆರೋಪ; ಸಿ.ಕೆ.ರಾಮಮೂರ್ತಿ ಸೇರಿ ನಾಲ್ವರ ವಿರುದ್ಧದ ತನಿಖೆಗೆ ತಡೆ ನೀಡಲು ಹೈಕೋರ್ಟ್ ನಕಾರಭ್ರಷ್ಟಾಚಾರ, ಡ್ರಗ್ಸ್, ಆರ್ಥಿಕ ಅಪರಾಧ-ದ್ವೇಷ ಭಾಷಣದ ವಿರುದ್ಧ ಶೂನ್ಯ ಸಹಿಷ್ಣುತೆ : ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್‘ದಿ ಫೈಲ್’ ಫೇಸ್ ಬುಕ್ ಪುಟ ನಿರ್ಬಂಧ ಪ್ರಶ್ನಿಸಿ ಹೈಕೋರ್ಟ್‌ಗೆ ಅರ್ಜಿ‘ಸಿಎಂ ಡ್ಯಾಶ್‍ಬೋರ್ಡ್’ ಲೋಕಾರ್ಪಣೆ ಮಾಡಿದ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್