E-PAPER
21 Nov 2026, 03:24:44 AM|
Gold₹12977/gGold24K ₹12,977/g - 22K ₹11,885/gTap for full details
Press ID & Credential Portal
Apply / Verify  ➔
LIVE TV LocalCrimeNationalInternationalPoliticsBusinessEditorialEducationTechnologyEntertainmentSportsHealthFeatureTravelingBeauty
Press & Media Credential Portal
✕
1. Apply for Press ID Card
Register official reporter application with Email OTP.
➔
2. Download Approved Badge
Enter Card ID to receive authorization code via email.
3. Verify Reporter ID & Card (View Only)
For Public & Police: Check if card is authentic.
National News

Rajasthan | ಪಂಚಾಯತ್ ಚುನಾವಣೆ; ಕಾಂಗ್ರೆಸ್ ಜಯಭೇರಿ, ಬಿಜೆಪಿಗೆ ಮುಖಭಂಗ

ಹೊಸದಿಲ್ಲಿ, ನ. 20: ರಾಜಸ್ಥಾನದ ಪಂಚಾಯತ್ ಹಾಗೂ ಜಿಲ್ಲಾ ಪರಿಷತ್ ಚುನಾವಣೆಗಳಲ್ಲಿ ಕಾಂಗ್ರೆಸ್ ಪಕ್ಷ ಮೇಲುಗೈ ಸಾಧಿಸಿದ್ದು, ಆಡಳಿತಾರೂಢ ಬಿಜೆಪಿಗೆ ಭಾರೀ ಮುಖಭಂಗವಾಗಿದೆ. ಮತಎಣಿಕೆ ಪ್ರಗತಿಯಲ್ಲಿದ್ದು, ಕಾಂಗ್ರೆಸ್ ಈವರೆಗೆ 2,463 ಪಂಚಾಯತ್ ಸಮಿತಿ ಸ್ಥಾನಗಳನ್ನು ಹಾಗೂ 66 ಜಿಲ್ಲಾ ಪರಿಷತ್ ಸ್ಥಾನಗಳನ್ನು ಗೆದ್ದುಕೊಂಡಿದೆ.

ಕಾಂಗ್ರೆಸ್ ಪಕ್ಷವು 20 ಜಿಲ್ಲಾ ಪರಿಷತ್ಗಳನ್ನು ವಶಪಡಿಸಿಕೊಂಡಿದ್ದರೆ, ಬಿಜೆಪಿ ಕೇವಲ 5 ಜಿಲ್ಲಾ ಪರಿಷತ್ಗಳನ್ನು ಗಳಿಸಿದೆ. ಒಂದು ಪರಿಷತ್ ರಾಷ್ಟ್ರೀಯ ಲೋಕತಾಂತ್ರಿಕ ಪಕ್ಷದ (RLP) ಪಾಲಾಗಿದೆ.

ಇಲ್ಲಿಯವರೆಗೆ 4,958 ಪಂಚಾಯತ್ ಸಮಿತಿ ಸ್ಥಾನಗಳ ಫಲಿತಾಂಶ ಪ್ರಕಟವಾಗಿದ್ದು, ಬಿಜೆಪಿಯು 1,512 ಸ್ಥಾನಗಳನ್ನು ಗೆದ್ದಿದೆ. ರಾಷ್ಟ್ರೀಯ ಲೋಕತಾಂತ್ರಿಕ ಪಕ್ಷ (RLP) 354, ಭಾರತ್ ಆದಿವಾಸಿ ಪಕ್ಷ (BAP) 168, ಸಿಪಿಎಂ 43, ಬಿಎಸ್ಪಿ 36, ಆಪ್ 2 ಸ್ಥಾನಗಳನ್ನು ಪಡೆದುಕೊಂಡಿವೆ. 380 ಸ್ಥಾನಗಳು ಪಕ್ಷೇತರರ ಪಾಲಾಗಿವೆ.

ಜಿಲ್ಲಾ ಪರಿಷತ್ನಲ್ಲಿ ಕಾಂಗ್ರೆಸ್ 66, ಬಿಜೆಪಿ 25, ಸಿಪಿಎಂ 3, RLP 2 ಹಾಗೂ ಪಕ್ಷೇತರರು ಒಂದು ಸ್ಥಾನದಲ್ಲಿ ಗೆಲುವು ಸಾಧಿಸಿದ್ದಾರೆ.

ರಾಜಸ್ಥಾನದ ನಗರಾಭಿವೃದ್ಧಿ ಹಾಗೂ ವಸತಿ ಸಚಿವ ಝುಬಾರ್ ಸಿಂಗ್ ಖಾರ್ರಾ ಅವರ ಪತ್ನಿ ಶಾಂತಿ ದೇವಿ ಹಾಗೂ ಪುತ್ರ ಅಜಯ್ ಸಿಂಗ್, ಸಿಕಾರ್ ಜಿಲ್ಲೆಯಲ್ಲಿ ಪಂಚಾಯತ್ ಸಮಿತಿ ಸ್ಥಾನಗಳಿಗೆ ಸ್ಪರ್ಧಿಸಿದ್ದು, ಇಬ್ಬರೂ ಸೋಲನುಭವಿಸಿದ್ದಾರೆ. ಖಾರ್ರಾ ಅವರ ಇನ್ನೋರ್ವ ಪುತ್ರ ದುರ್ಗಾ ಸಿಂಗ್ ಪಕ್ಷೇತರರಾಗಿ ಸ್ಪರ್ಧಿಸಿದ್ದು, ಅವರು ಕೂಡ ಪರಾಭವಗೊಂಡಿದ್ದಾರೆ.

ರಾಜಸ್ಥಾನದ 37 ಜಿಲ್ಲೆಗಳ ಒಟ್ಟು 7,543 ಪಂಚಾಯತ್ ಸಮಿತಿ ಸ್ಥಾನಗಳಿಗೆ ಹಾಗೂ 1,275 ಜಿಲ್ಲಾ ಪರಿಷತ್ ಸ್ಥಾನಗಳ ಮತಎಣಿಕೆ ನಡೆಯುತ್ತಿದೆ. ಕೋಟಾ, ಬರನ್, ಕರೌಲಿ ಹಾಗೂ ಶ್ರೀಗಂಗಾನಗರ—ಈ ನಾಲ್ಕು ಜಿಲ್ಲೆಗಳಲ್ಲಿ ಮತಎಣಿಕೆಯನ್ನು ಡಿಸೆಂಬರ್ 17ರವರೆಗೆ ಮುಂದೂಡಲಾಗಿದೆ.

ರಾಜಸ್ಥಾನದ 41 ಜಿಲ್ಲೆಗಳ 1,403 ಜಿಲ್ಲಾ ಪರಿಷತ್ ವಾರ್ಡ್ ಗಳಿಗೆ ಹಾಗೂ 457 ಪಂಚಾಯತ್ ಸಮಿತಿಗಳ 8,245 ವಾರ್ಡ್ ಗಳಿಗೆ ಚುನಾವಣೆಗಳು ನಡೆದಿದ್ದವು.

Author
KhushiHost News CMS Pro ®
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
KhushiHostWatch on YouTube →
जाहिराती, बॅकअप, सुरक्षा आणि साधने | Marathi Tutorial — KhushiHost News
Comments (0)
Comments appear after approval.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಮದುವೆಯಾಗಲು ಬಲವಂತಪಡಿಸಿದ ‘ಹುಚ್ಚು’ ಅಭಿಮಾನಿ; ಇನ್‌ ಫ್ಲುಯೆನ್ಸರ್ ಗಳ ಬಂಧುಗಳಿಂದ ಯುವಕನ ಥಳಿಸಿ ಹತ್ಯೆGujarat | ಖಾಸಗಿ ವಾಹನಗಳ ಮೇಲೆ ಜಾತಿ, ಸಮುದಾಯದ ಗುರುತು ಪ್ರದರ್ಶನ ನಿಷೇಧಿಸಿದ ಸರಕಾರವಿದೇಶಿ ವಿನಿಮಯ ಉಲ್ಲಂಘನೆ ಪ್ರಕರಣ | ರಾಜ್ಯ ಸಭಾ ಸದಸ್ಯ ಸತ್ನಾಮ್ ಸಂಧುಗೆ ED ಸಮನ್ಸ್Tamil Nadu | ವಿವಾದಾತ್ಮಕ ತಿರುಪ್ಪರಂಕುಂಡ್ರಂ ಬೆಟ್ಟದ ತುದಿಯಲ್ಲಿ ನ. 24ರಂದು ಒಂದು ಬಾರಿಗೆ ಕಾರ್ತಿಕೈ ದೀಪ ಬೆಳಗಲು ಸುಪ್ರೀಂ ಅನುಮತಿManipur | ಎನ್ಕೌಂಟರ್ ನಲ್ಲಿ ಓರ್ವ ಮೃತ್ಯು; 8 ಮಂದಿ ಬಂಡುಕೋರರ ಬಂಧನRajasthan | ಪಂಚಾಯತ್ ಚುನಾವಣೆ; ಕಾಂಗ್ರೆಸ್ ಜಯಭೇರಿ, ಬಿಜೆಪಿಗೆ ಮುಖಭಂಗತಪ್ಪು ಮಾಹಿತಿ ನೀಡಿ ಫಾರ್ಮ್-7 ಸಲ್ಲಿಸಿದ ಆರೋಪ; ಸಿ.ಕೆ.ರಾಮಮೂರ್ತಿ ಸೇರಿ ನಾಲ್ವರ ವಿರುದ್ಧದ ತನಿಖೆಗೆ ತಡೆ ನೀಡಲು ಹೈಕೋರ್ಟ್ ನಕಾರಭ್ರಷ್ಟಾಚಾರ, ಡ್ರಗ್ಸ್, ಆರ್ಥಿಕ ಅಪರಾಧ-ದ್ವೇಷ ಭಾಷಣದ ವಿರುದ್ಧ ಶೂನ್ಯ ಸಹಿಷ್ಣುತೆ : ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್‘ದಿ ಫೈಲ್’ ಫೇಸ್ ಬುಕ್ ಪುಟ ನಿರ್ಬಂಧ ಪ್ರಶ್ನಿಸಿ ಹೈಕೋರ್ಟ್‌ಗೆ ಅರ್ಜಿ‘ಸಿಎಂ ಡ್ಯಾಶ್‍ಬೋರ್ಡ್’ ಲೋಕಾರ್ಪಣೆ ಮಾಡಿದ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್