ಕೊಪ್ಪಳ, ಸೆಪ್ಟೆಂಬರ್ 25 ಆರ್ಸೆಟಿ ಇಂದ ಬ್ಯಾಚ್ ಹಾಗೂ ವಿಷಯವಾರು ನೂರಾರು ವಿದ್ಯಾರ್ಥಿಗಳಿಗೆ ಪ್ರತಿ ವರ್ಷ ವಿವಿಧ ವಿಷಯಗಳಲ್ಲಿ ತರಬೇತಿ ನೀಡಲಾಗುತ್ತದೆ. ಅದರ ನಂತರವೂ ಅಭ್ಯರ್ಥಿಗಳಿಗೆ ಸ್ವಂತ ಉದ್ದಿಮೆ ಸ್ಥಾಪಿಸಲು ಸಹಕಾರ, ಮಾರ್ಗದರ್ಶನ ನೀಡಿದರೆ ತರಬೇತಿಯು ಅರ್ಥಪೂರ್ಣ ಕಾರ್ಯವಾಗುತ್ತದೆ ಎಂದು ಜಿಲ್ಲಾ ಪಂಚಾಯತಿಯ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಗಳಾದ ವರ್ಣಿತ್ ನೇಗಿ ಹೇಳಿದರು.
ಗುರುವಾರದಂದು ಜಿಲ್ಲಾ ಪಂಚಾಯತಿಯ ಸ್ಥಾಯಿ ಸಮಿತಿ ಸಭಾಂಗಣದಲ್ಲಿ ಹಮ್ಮಿಕೊಂಡಿದ್ದ ಆರ್ಸೆಟಿ ಪ್ರಗತಿ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಗ್ರಾಮೀಣ ಭಾಗದ ನಿರುದ್ಯೋಗಿ ಅಭ್ಯರ್ಥಿಗಳಿಗೆ ಸ್ವಂತ ಉದ್ಯಮ ಸ್ಥಾಪಿಸಲು ನೆರವಾಗುವ ಉದ್ದೇಶದಿಂದ ವಿವಿಧ ವಿಷಯಗಳಲ್ಲಿ ಆರ್ಸೆಟಿ ಇಂದ ವಿವಿಧ ತರಬೇತಿಗಳನ್ನು ನೀಡಲಾಗುತ್ತದೆ. ತರಬೇತಿಯ ನಂತರ ತರಬೇತಿ ಪಡೆದ ಅಭ್ಯರ್ಥಿಗಳಿಗೆ ಸ್ವಂತ ಉದ್ಯಮ ಸ್ಥಾಪಿಸಲು ಬ್ಯಾಂಕ್ ಸಾಲ, ಸರ್ಕಾರದ ವಿವಿಧ ಇಲಾಖೆಯಲ್ಲಿರುವ ಯೋಜನೆಗಳು, ನುರಿತ ತಜ್ಞರಿಂದ ಮಾರ್ಗದರ್ಶನವನ್ನು ಒದಗಿಸಬೇಕು. ತರಬೇತಿ ಪಡೆದ ಅಭ್ಯರ್ಥಿಗಳು ಸ್ವಂತ ಉದ್ದಿಮೆ ಸ್ಥಾಪಿಸಿ ಆರ್ಥಿಕವಾಗಿ ಸಬಲರಾಗುವವರೆಗೆ ನಿರಂತರವಾಗಿ ಅವರೊಂದಿಗೆ ಸಂಪರ್ಕದಲ್ಲಿರಬೇಕು. ಯಶಸ್ವಿಯಾದ ಉದ್ದಿಮೆದಾರರಿಂದ ತರಬೇತಾರ್ಥಿಗಳಿಗೆ ವಿಶೇಷ ಉಪನ್ಯಾಸ ಮಾಡಿಸಬೇಕು. ಇದರಿಂದ ಅಭ್ಯರ್ಥಿಗಳಿಗೆ ಪ್ರೇರಣೆ ಸಿಗುತ್ತದೆ ಹಾಗೂ ತರಬೇತಿಯ ಉದ್ದೇಶ ಪೂರ್ಣವಾಗುತ್ತದೆ ಎಂದು ಅವರು ಹೇಳಿದರು.

ಅರ್ಸೆಟಿ ನಿರ್ದೇಶಕರಾದ ರಾಯೇಶ್ವರ ರೈ ಅವರು ಆರ್ಸೆಟಿ ಸಂಸ್ಥೆಯ ಉದ್ದೇಶ, ಹಮ್ಮಿಕೊಂಡ ಕಾರ್ಯಕ್ರಮಗಳು, ಸಂಸ್ಥೆಯಿAದ ನೀಡಿದ ತರಬೇತಿಗಳು ಹಾಗೂ ವಿವಿಧ ಕ್ರಿಯಾ ಯೋಜನೆಗಳ ಬಗ್ಗೆ ಮಾಹಿತಿ ನೀಡಿದರು.
ಸಭೆಯಲ್ಲಿ ನಬಾರ್ಡ್ನ ಡಿಡಿಎಂ ಮಹಾದೇವ ಕೀರ್ತಿ, ಜಂಟಿ ಕೈಗಾರಿಕಾ ನಿರ್ದೇಶಕರಾದ ತಾರಕೇಶ್ವರ ಎಚ್.ಬಿ., ಖಾದಿ ಗ್ರಾಮೋದ್ಯೋಗ ಮಂಡಳಿಯ ಜಿಲ್ಲಾ ಅಧಿಕಾರಿ ಕೆ.ವೀರೇಶ, ಎಸ್ಬಿಐನ ಚೀಫ್ ಮ್ಯಾನೇಜರ್ ಕರಣ್ ಕುಮಾರ್, ಸರ್ಕಾರಿ ಪಾಲಿಟೆಕ್ನಿಕ್ ಕಾಲೇಜಿನ ಉಪನ್ಯಾಸಕರಾದ ನಾಗನಗೌಡ, ಸೇರಿದಂತೆ ವಿವಿಧ ಇಲಾಖೆಗಳ ಅಧಿಕಾರಿಗಳು ಉಪಸ್ಥಿತರಿದ್ದರು.