Press ID & Credential Portal
Apply / Verify  ➔
LIVE TV LocalCrimeNationalInternationalPoliticsBusinessEducationTechnologyEntertainmentSportsHealthFeatureTravelingBeautyRecipes
Press & Media Credential Portal
✕
1. Apply for Press ID Card
Register official reporter application with Email OTP.
➔
2. Download Approved Badge
Enter Card ID to receive authorization code via email.
3. Verify Reporter ID & Card (View Only)
For Public & Police: Check if card is authentic.
Local News | Districts Belagavi

ಹಿರಣ್ಯಕೇಶಿ ಸಕ್ಕರೆ ಕಾರಖಾನೆ ಉಳಿಸಿ-ಬೆಳೆಸುವುದು ಪ್ರತಿಯೊಬ್ಬರ ಕರ್ತವ್ಯ: ನಿಡಸೋಸಿ ಶ್ರೀಗಳು

ಸಂಕೇಶ್ವರ : ಸ್ವಾತಂತ್ರ್ಯ ಸೇನಾನಿ ದಿ.ಅಪ್ಪಣಗೌಡ ಪಾಟೀಲ ಸ್ಥಾಪಿಸಿದ  ಶ್ರೀ ಹಿರಣ್ಯಕೇಶಿ ಸಹಕಾರಿ ಸಕ್ಕರೆ ಕಾರಖಾನೆ ಈ ಭಾಗದ ಸರ್ವತೋಮುಖ ಅಭಿವೃದ್ಧಿಗೆ ಸಾಕಷ್ಟು ವಲಯಗಳಿಗೆ ಹೆಚ್ಚಿನ ಅನುಕೂಲ ಕಲ್ಪಿಸಿದ್ದು, ಸಂಕಷ್ಟದಲ್ಲಿರುವ ಕಾರಖಾನೆ ಉಳಿಸಿ-ಬೆಳೆಸುವ ಮೂಲಕ ಈ ಭಾಗದ ಎಲ್ಲರೂ ಕಾರಖಾನೆಯ ಋಣ ತೀರಿಸುವ ಕೆಲಸ ಮಾಡಬೇಕು ಎಂದು ನಿಡಸೋಸಿ ಜಗದ್ಗುರು ಪಂಚಮ ಡಾ. ಶ್ರೀ ಶಿವಲಿಂಗೇಶ್ವರ ಮಹಾಸ್ವಾಮೀಜಿ ಹೇಳಿದರು.
ಪಟ್ಟಣದ ಶ್ರೀ ಹಿರಣ್ಯಕೇಶಿ ಸಹಕಾರಿ ಸಕ್ಕರೆ ಕಾರಖಾನೆಯ ಸಭಾಭವನದಲ್ಲಿ ಸ್ವಾತಂತ್ರ್ಯ ಸೇನಾನಿ ದಿ.ಅಪ್ಪಣಗೌಡ ಪಾಟೀಲರ ೫೨ನೇ ಪುಣ್ಯಸ್ಮರಣೆ ಅಂಗವಾಗಿ ಆಯೋಜಿಸಿದ ಕಾರ್ಯಕ್ರಮದ ದಿವ್ಯಸಾನಿಧ್ಯವಹಿಸಿ ಮಾತನಾಡಿದ ಅವರು, ಕಾರಖಾನೆ ಈ ಭಾಗದ ಕೃಷಿ, ಸಹಕಾರ, ಶಿಕ್ಷಣ, ನೀರಾವರಿ, ರಾಜಕೀಯ ಕ್ಷೇತ್ರಗಳಿಗೆ ತನ್ನದೇ ಕೊಡುಗೆ ನೀಡಿದ್ದು, ಈ ಕಾರಖಾನೆಯ ಅಸ್ತಿತ್ವ ಉಳಿಸುವ ಜವಾಬ್ದಾರಿ ಕಬ್ಬು ಬೆಳೆಗಾರರು, ಕಾರ್ಮಿಕರು, ಸದಸ್ಯರು, ಆಡಳಿತ ಮಂಡಳಿ ಸಾಮೂಹಿಕವಾಗಿ ನಿರ್ವಹಿಸಬೇಕು ಎಂದರು.
ರೈತ ಮುಖಂಡ ಬಸವರಾಜ ಪಾಟೀಲ ಮಾತನಾಡಿ, ದಿ.ಅಪ್ಪಣಗೌಡ ಪಾಟೀಲ ಈ ಭಾಗದಲ್ಲಿ ಸಹಕಾರ ಕ್ರಾಂತಿಯ ಮೂಲಕ ಅನೇಕ ಕ್ಷೇತ್ರಗಳಲ್ಲಿ ತಮ್ಮದೇ ಕೊಡುಗೆ ನೀಡಿದ್ದು, ಹಿರಣ್ಯಕೇಶಿ ಸಹಕಾರಿ ಸಕ್ಕರೆ ಕಾರಖಾನೆಯ ಬೆಳವಣಿಗೆಗೆ ಕಾರ್ಮಿಕರು ಹಾಗೂ ಕಬ್ಬು ಬೆಳೆಗಾರರು ಸಹಕರಿಸಬೇಕು ಎಂದರು.
ಅಧ್ಯಕ್ಷತೆವಹಿಸಿದ್ದ ಕಾರಖಾನೆಯ ಚೇಅರಮನ್ ಬಸವರಾಜ ಕಲ್ಲಟ್ಟಿ ಅವರು ಅಪ್ಪಣಗೌಡರ ಸತ್ಕಾರ್ಯಗಳನ್ನು ಸ್ಮರಿಸುತ್ತ ಮಾತನಾಡಿ, ಕಾರಖಾನೆಯ ಸ್ಥಾಪಕ ದಿ.ಅಪ್ಪಣಗೌಡ ಪಾಟೀಲರ ತತ್ವಾದರ್ಶಗಳು ಎಲ್ಲರಿಗೂ ಪ್ರೇರಣೆಯಾಗಿರುವದಾಗಿ ತಿಳಿಸಿ, ಕಬ್ಬು ಪೂರೈಸಿದ ಎಲ್ಲ ರೈತರಿಗೆ ರಿಯಾಯತಿ ದರದಲ್ಲಿ ಸಕ್ಕರೆ ವಿತರಣೆ ಆರಂಭಿಸಲಾಗಿದ್ದು, ಕಾರಖಾನೆಯ ಕಾರ್ಮಿಕರಿಗೆ ಪ್ರತಿಶತ ೮.೩೩ ಎಕ್ಸಗ್ರೆಸಿಯಾ ಬೋನಸ ವಿತರಿಸಲು ಆಡಳಿತ ಮಂಡಳಿ ತೀರ್ಮಾನಿಸಿದೆ ಎಂದರು.
ಇದೇ ಸಂದರ್ಭದಲ್ಲಿ ಅಪ್ಪಣಗೌಡ ಪಾಟೀಲ ಪುಣ್ಯಸ್ಮರಣೆ ಅಂಗವಾಗಿ ಆಯೋಜಿಸಿದ ಸ್ಪರ್ಧೆಗಳಲ್ಲಿ ವಿಜೇತರಿಗೆ ಬಹುಮಾನ ವಿತರಿಸಲಾಯಿತು. 
ಕಾರಖಾನೆಯ ಉಪಾಧ್ಯಕ್ಷ ಅಶೋಕ ಪಟ್ಟಣಶೆಟ್ಟಿ, ನಿರ್ದೇಶಕರಾದ ಶಿವನಾಯಿಕ  ನಾಯಿಕ, ಶಿವಪುತ್ರ ಶಿರಕೋಳಿ, ಬಾಬಾಸಾಹೇಬ ಅರಬೋಳೆ, ಪ್ರಭುದೇವ ಪಾಟೀಲ, ಮಲ್ಲಿಕಾರ್ಜುನ ಪಾಟೀಲ, ಬಸಪ್ಪಾ ಮರಡಿ, ಸುರೇಂದ್ರ ದೊಡ್ಡಲಿಂಗನವರ, ವ್ಯವಸ್ಥಾಪಕ ನಿರ್ದೇಶಕರು ಮಹಾದೇವಸ್ವಾಮಿ.ಡಿ.ಎಸ್, ರವಿ ಹಿಡಕಲ್, ಭೀಮಗೌಡ ಗಿರಿಗೌಡನವರ, ಶಂಕರರಾವ ಹೆಗಡೆ, ಗುರು ಪಾಟೀಲ, ಸಿದ್ರಾಮ ಮುಗಳಿ, ಈರಗೌಡ ಪಾಟೀಲ, ಗುರುಸಿದ್ದ ಮಗದುಮ್ಮ, ಕಲ್ಲಪ್ಪ ಮರಡಿ, ಅನ್ನಪ್ಪ ಹಿಟ್ಟಣಗಿ ಉಪಸ್ಥಿತರಿದ್ದರು.

ನಿರ್ದೇಶPರು ಬಾಬಾಸಾಹೇಬ ಅರಬೋಳೆ sಸ್ವಾಗತಿಸಿ ಪ್ರಾಸ್ತಾವಿಸಿದರು. ಕಾರಖಾನೆಯ ಕಛೇರಿ ಅಧೀಕ್ಷಕ ಸುಭಾಷ ನಾಶಿಪುಡಿ ನಿರೂಪಿಸಿ, ವಂದಿಸಿದರು. ಕಾರಖಾನೆಯ ಸನ್ ೨೦೨೬-೨೭ ನೇ ಸಾಲಿನ ೬೭ ನೆಯ ಕಬ್ಬು ಅರೆಯುವ ಹಂಗಾಮಿನ ಶುಭಾರಂಭದ ಅಂಗವಾಗಿ ಬಾಯಲರ ಪ್ರದೀಪನ, ೬೭ ನೇ ಕಬ್ಬು ನುರಿಸುವ ಹಂಗಾಮಿನ ಪ್ರಾರಂಭೋತ್ಸವಕ್ಕೆ ನಿಡಸೋಸಿ ಜಗದ್ಗುರು ಡಾ. ಪಂಚಮ ಶಿವಲಿಂಗೇಶ್ವರ ಸ್ವಾಮೀಜಿ ಚಾಲನೆ ನೀಡಿದರು.
 

 

Author
KhushiHost News CMS Pro ®
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಅಂಧ, ವಿಕಲಚೇತನರ ಬಾಳಿಗೆ ಬೆಳಕಾದ ಸ್ನೇಹ ಜ್ಯೋತಿ ಸಂಸ್ಥೆ : ಧರ್ಮಾಧ್ಯಕ್ಷ ಡೇರಿಕ್ ಫರ್ನಾಂಡಿಸ್ ಧಾರವಾಡ ಜಿಲ್ಲಾ ಕ್ರೀಡಾ ವಸತಿ ನಿಲಯದ ಅಥ್ಲೇಟಿಕ್ ಕ್ರೀಡಾಕೂದಲ್ಲಿ ಸಾಧನೆಮಹಿಳೆಯರ ಸಾಮಾಜಿಕ, ಆರ್ಥಿಕ ಪ್ರಗತಿಗೆ ಜ್ಞಾನವಿಕಾಸ ಕಾರ್ಯಕ್ರಮ ಪೂರಕ: ದಯಾಶೀಲಅಂಜನಾದ್ರಿ ದೇವಸ್ಥಾನದ ಆಡಳಿತ ವಿವಾದ: ನ್ಯಾಯಾಲಯದ ಆದೇಶದಂತೆ ಅವಕಾಶ ನೀಡಿಸುರಕ್ಷಿತ ಬಚಪನ್ ಅಭಿಯಾನ: ಬೂದಗುಂಪಾದಲ್ಲಿ ಮಕ್ಕಳ ಹಕ್ಕುಗಳು & ಕಾನೂನುಗಳ ಜಾಗೃತಿ ಕಾರ್ಯಕ್ರಮನವೆಂಬರ್ 3 ರಂದು ಗಂಗಾವತಿಯಲ್ಲಿ ಬಸವಾದಿ ಶಿವಶರಣರ ಬೃಹತ್ ಹಿಂದೂ ಸಮಾವೇಶನಾಳೆ ದಲಿತ ಸೇನೆ ರಾಜ್ಯ ಸಮಿತಿಯ ಪೂರ್ವಭಾವಿ ಸಭೆ ಹಾಗೂ ನೂತನ ಪದಾಧಿಕಾರಿಗಳಿಗೆ ಸನ್ಮಾನಹುಲಿಗೆಮ್ಮ ದೇವಿ ದೇವಸ್ಥಾನದ ಅಧಿಕಾರಿ ವಿರುದ್ಧ ದೂರು ದಾಖಲಿಸಿ ಕ್ರಮಕ್ಕೆ ಒತ್ತಾಯಕೊಪ್ಪಳ ಭಾಗ್ಯನಗರ ಬಂದ್‌ಗೆ ಹೈದರಾಬಾದ್ ಕರ್ನಾಟಕ ಯುವಶಕ್ತಿ ಬೆಂಬಲಹಣಕಾಸು ಒಳಗೊಳ್ಳುವಿಕೆ ಸ್ಯಾಚುರೇಶನ್ ಅಭಿಯಾನ: ವಿಶೇಷ ಜಾಗೃತಿ ಪೋಸ್ಟರ್ ಬಿಡುಗಡೆ