ಮಹಾಲಿಂಗಪುರ: ಇತ್ತಿಚೆಗೆ ಬೆಂಗಳೂರಿನಲ್ಲಿ ಪ್ರತಿಷ್ಠಿತ ವಾಹಿನಿ ನೀಡುವ ’ಎಮಿನೆಂಟ್ ಇಂಜಿನೀಯರ್ ಅವಾರ್ಡ್’ ಪಡೆದಿರುವ ಮಹಾಲಿಂಗಪುರ ಪಟ್ಟಣದ ಹುಚ್ಚೇಶ. ಮುತ್ತಪ್ಪ. ವಡ್ಡರ ಅವರನ್ನು ಬುಧವಾರ ಎಪಿಎಂಸಿ ವಾಯು ವಿಹಾರ ಮಿತ್ರ ಮಂಡಳಿಯವರು ಗೌರವ ಸನ್ಮಾನ ನೀಡಿದರು.
ಸನ್ಮಾನಿತರು ಮೂಲತಃ ಅಮೀನಗಡ ಪಟ್ಟಣದವರು.ಅವರು ದಶಕಗಳಿಂದ ಮಹಾಲಿಂಗಪುರದಲ್ಲಿ ಲಕ್ಷ್ಮಿ ವೆಂಕಟೇಶ್ವರ ಹೆಸರಿನಲ್ಲಿ ಕನ್ಸ್ಟ್ರಕ್ಷನ್,ಗ್ರ್ಯಾನೈಟ್ ಮತ್ತು ರಿಯಲ್ ಎಸ್ಟೇಟ್ ಉದ್ಯಮ ಆರಂಭಿಸಿ ಜೊತೆಗೆ ಸಂಘ ಸಂಸ್ಥೆಯೊಂದರ ಪದಾಧಿಕಾರಿಗಳಾಗಿ ತಮ್ಮನ್ನು ತಾವು ಸಮಾಜ ಸೇವೆಯಲ್ಲಿ ತೊಡಗಿಸಿಕೊಂಡಿದ್ದಾರೆ.ಈ ಎಲ್ಲ ರಂಗಗಳಲ್ಲೂ ಶುಧ್ಧ ಹಸ್ತ ಮತ್ತು ಕೌಶಲ್ಯವಂತವರಾಗಿರುವ ಇವರಿಗೆ ಪ್ರಶಸ್ತಿ ಸಂದಾಯವಾಗಿರುವುದು ಪಟ್ಟಣದ ಗೌರವವನ್ನು ಇಮ್ಮಡಿಗೊಳಿಸಿದೆ.ಇದನ್ನೆಲ್ಲ ಗಮನಿಸಿ ವಾಯು ವಿಹಾರಿಗಳು ಸನ್ಮಾನ ನೀಡಿರುವುದು ಸಹಿತ ಸ್ತುತ್ಯಾರ್ಹ.
ಈ ಸಮಾರಂಭದಲ್ಲಿ ಹಲವು ವಿಹಾರಿಗಳು ಪ್ರಶಸ್ತಿ ಪಡೆದ ಹುಚ್ಚೇಶ ಅವರ ಸಾಮಾಜಿಕ ಕಳಕಳಿ ಮತ್ತು ಅವರು ಮಾಡುವ ಕಾರ್ಯ ವೈಖರಿ ಕುರಿತಾಗಿ ಮಾರ್ಮಿಕವಾಗಿ ಮಾತನಾಡಿದರು.
ಈ ಸನ್ಮಾನ ಸಮಾರಂಭದಲ್ಲಿ ಶಂಕರ ಕೋಳಿಗುಡ್ಡ, ಮಲ್ಲು ಯರಡ್ಡಿ,ಬಾಳು ಮಾಳವದೆ, ಶ್ರೀಶೈಲ ಅಂಗಡಿ, ಸಂಜು ಅಂಗಡಿ, ಮಹಾಲಿಂಗಪ್ಪ ತಟ್ಟಿಮನಿ, ಸಿದ್ದುಗೌಡ ಪಾಟೀಲ್,ಡಾ.ಶಂಕರ ಹೂಗಾರ,ಚನ್ನಪ್ಪ ಹುನ್ನೂರ, ಡಾ.ಪ್ರಭಾಕರ ಕುಳ್ಳೋಳ್ಳಿ,ಅಜಯ ಹಂದ್ರಾಳ,ಈರಣ್ಣ ಕೋಳಿಗುಡ್ಡ,ಮಂಜು ಗುಂಡಾ, ನಾಗೇಶ ಹಲಗಿಗೌಡರ,ಪಾಂಡಪ್ಪ ಪೆಟ್ಲೂರ,ಅಶೋಕ ಕಲ್ಯಾಣಶೆಟ್ಟಿ,ಸಂಗಪ್ಪ ಉಪ್ಪಲದಿನ್ನಿ, ಸುಧೀರ ಗುಂಡಾ ಇದ್ದರು.ಮಹಾಂತೇಶ ತಿರಕನ್ನವರ ಸ್ವಾಗತಿಸಿ, ಕಾರ್ಯಕ್ರಮ ನಿರೂಪಿಸಿ ವಂದಿಸಿದರು.