Press ID & Credential Portal
Apply / Verify  ➔
LIVE TV LocalCrimeNationalInternationalPoliticsBusinessEducationTechnologyEntertainmentSportsHealthFeatureTravelingBeautyRecipes
Press & Media Credential Portal
✕
1. Apply for Press ID Card
Register official reporter application with Email OTP.
➔
2. Download Approved Badge
Enter Card ID to receive authorization code via email.
3. Verify Reporter ID & Card (View Only)
For Public & Police: Check if card is authentic.
Local News

ಹುನಗುಂದ: ಕೆಲಸ, ಕೂಲಿ ಹಾಗೂ ನಿರುದ್ಯೋಗ ಭತ್ಯೆಗೆ ಆಗ್ರಹಿಸಿ 'ಗ್ರಾಕೂಸ' ಸಂಘಟನೆಯಿಂದ ಬೃಹತ್ ಪ್ರತಿಭಟನೆ

ಹುನಗುಂದ: ವ್ಹಿಬಿ ಗ್ರಾಮ ಜಿ ಅಡಿಯಲ್ಲಿ ಕಾನೂನಿನ ಪ್ರಕಾರ ಕೆಲಸ, ಕೂಲಿ, ನಿರುದ್ಯೊಗ ಭತ್ಯೆ, ನ? ಪರಿಹಾರ ನೀಡುವಂತೆ ಹುನಗುಂದ ಇಳಕಲ್ ಅವಳಿ ತಾಲೂಕಿನ ಗ್ರಾಮೀಣ ಕೂಲಿ ಕಾರ್ಮಿಕರ (ಗ್ರಾಕೂಸ) ಸಂಘಟನೆ ಒತ್ತಾಯಿಸಿ ತಾಲೂಕ ಪಂಚಾಯತ್ ಕಚೇರಿ ಮೈದಾನದಲ್ಲಿ ಬೃಹತ್ ಪ್ರತಿಭಟನೆ ನಡೆಸಿತು.   ಬುಧವಾರ ಅವಳಿ ತಾಲೂಕಿನ ಗ್ರಾಮೀಣ ಕೂಲಿ ಕಾರ್ಮಿಕ ಸಂಘಟನೆ ನಡೆಸಿದ ಬೃಹತ್ ಪ್ರತಿಭಟನೆ ನೇತೃತ್ವ ವಹಿಸಿದ ಸಂಘಟನೆ ಮುಖ್ಯಸ್ಥ ಮಹಾಂತೇಶ ಹೊಸಮನಿ ಮಾತನಾಡಿ ನಮ್ಮ ಬೇಡಿಕೆಗಳ್ನಜು ಇಡೇರಿಸುವಂತೆ ಕಳೆದ ೩ತಿಂಗಳಿಂದ ಸಂಬಂಧಿಸಿದ ಅಧಿಕಾರಿಗಳಿಗೆ ಮನವಿ ಸಲ್ಲಿಸಿದ್ದೇವೆ. ಅಧಿಕಾರಿಗಳ ನಿರ್ಲಕ್ಷದಿಂದ ಈವರೆಗೆ ಯಾವುದು ಕೆಲಸ ಮತ್ತು ಕೂಲಿ ಸಿಕ್ಕಿರುವದಿಲ್ಲ ಎಂದು ಆರೋಪಿಸಿದರು. ಈ ಬಗ್ಗೆ ಸಾಕಷ್ಟು ಮೌಖಿಕವಾಗಿ ಮತ್ತು ಲಿಖಿತವಾಗಿ ಸಾಕಷ್ಟು ಭಾರಿ ಅಧಿಕಾರಿಗಳಿಗೆ ಮನವರಿಕೆ ಮಡಕದರೂ ಪ್ರಯೊಜನವಾಗಿಲವೆಂದು ವರು ದೂರಿದರು. ನಮಗೆ ನಮ್ಮ ಬೇಡಿಕೆಗಳು ಇಡೇರಿಸಲೇಬೇಕೆಂದು ಪಟ್ಟು ಹಿಡಿದು ಧಿಕ್ಕಾರ ಕೂಗುತ್ತಾ ಅಧಿಕಾರಿಗಳ ವಿರುದ್ದ ಮತ್ತು ಅವರ ನಿರ್ಲಕ್ಷದ ನಡತೆ ಬಗ್ಗೆ ವ್ಯಂಗ್ಯದ ಹಾಡು ಹಾಡುತ್ತ ಪ್ರತಿಭಟನೆ ಮುಂದುವರೆಸಿದರು.   ಸೈರಾಬಾನು ಹಿರೇಮನಿ ಮಾತನಾಡಿ ಗ್ರಾಮೀಣ ಪ್ರದೇಶಗಳಲ್ಲಿ ಕೂಲಿ ಕೆಲಸವನ್ನೇ ನಂಬಿಕೊಂಡು ಜೀವನ ನಡೆಸುತ್ತಿರುವ ಸಾವಿರಾರು ಕಾರ್ಮಿಕರು ಉದ್ಯೋಗದ ಕೊರತೆ, ಕೂಲಿ ಪಾವತಿಯಲ್ಲಿ ವಿಳಂಬ ಹಾಗೂ ಸರ್ಕಾರದ ಯೋಜನೆಗಳ ಸೌಲಭ್ಯಗಳು ಸಮರ್ಪಕವಾಗಿ ದೊರೆಯದಿರುವುದರಿಂದ ಆರ್ಥಿಕ ಸಂಕ? ಎದುರಿಸುತ್ತಿದ್ದಾರೆ. ಗ್ರಾಮೀಣ ಕಾರ್ಮಿಕರಿಗೆ ಉದ್ಯೋಗದ ಹಕ್ಕು ಕಲ್ಪಿಸುವ ಉದ್ದೇಶದಿಂದ ಜಾರಿಯಲ್ಲಿರುವ ಯೋಜನೆಯ ನಿಯಮಗಳನ್ನು ಅಧಿಕಾರಿಗಳು ಕಟ್ಟುನಿಟ್ಟಾಗಿ ಪಾಲಿಸಬೇಕು. ಕಾನೂನಿನ ಪ್ರಕಾರ ಅರ್ಹ ಕಾರ್ಮಿಕರಿಗೆ ನಿಗದಿತ ದಿನಗಳ ಕೆಲಸ ಒದಗಿಸಬೇಕು. ಕೆಲಸ ಮಾಡಿದ ಕಾರ್ಮಿಕರಿಗೆ ನಿಗದಿತ ಸಮಯದಲ್ಲಿ ಪೂರ್ಣ ಕೂಲಿ ಪಾವತಿಸಬೇಕು. ಕೆಲಸ ಕೇಳಿದರೂ ಉದ್ಯೋಗ ನೀಡದ ಸಂದರ್ಭಗಳಲ್ಲಿ ನಿಯಮಾನುಸಾರ ನಿರುದ್ಯೋಗ ಭತ್ಯೆ ನೀಡಬೇಕು. ಕೆಲಸದ ಸ್ಥಳದಲ್ಲಿ ಅಥವಾ ಯೋಜನೆಯಡಿ ಕೆಲಸ ನಿರ್ವಹಿಸುವಾಗ ಉಂಟಾಗುವ ನ?ಗಳಿಗೆ ಸಂಬಂಧಿಸಿದಂತೆ ಅರ್ಹ ಕಾರ್ಮಿಕರಿಗೆ ನಿಯಮಾನುಸಾರ ಪರಿಹಾರ ಕಲ್ಪಿಸಬೇಕು ಎಂದು ಆಗ್ರಹಿಸಿದರು.    ಶಾರದಾ ಪರಮನಗೌಡ್ರ, ವಿಜಯಲಕ್ಷ್ಮಿ ಜಾಲಿಹಾಳ, ಸುಜಾತಾ ಚವ್ಹಾಣ, ಸರೋಜಾ ಭದ್ರಶಟ್ಟಿ, ರೇಣುಕಾ ತುಪ್ಪದ, ಮಹಾದೇವು ಹಡಪದ, ಶಶಿಕುಮಾರ ಹರಿಜನ, ಮಂಜು ಹಲಕಾವಟಿಗಿ, ಸೌಮ್ಯ ವಟವಟಿ, ಷರೀಪಸಾಬ ಚಪ್ಪರಬಂಡ, ಶಾಂತಾ ಅಂಗಡಿ, ದೇವಮ್ಮ ವಾಲೀಕಾರ, ಮಂಜುಳಾ ಬೆಳಗಲ್ ಸೇರಿದಂತೆ ಬಹುಸಂಖ್ಯೆಯಲ್ಲಿ ಕಾರ್ಮಿಕರು ಪಾಲ್ಗೊಂಡಿದ್ದರು. ಸಂಘಟನೆ ಪ್ರತಿಭಟನಾ ಮೆರವಣಿಗೆಯು ಪ್ರವಾಸಿ ಮಂದಿರದಿಂದ ಪ್ರಮುಖ ರಸ್ತೆಗಳ ಮೂಲಕ ತಾಪಂ ಮೈದಾನ ಸೇರಿತು.   ಸಹಾಯಕ ನಿರ್ದೇಶಕ ಗ್ರಾಮೀಣ ಉದ್ಯೋಗ ಖಾತ್ರಿ ಮಹಾಂತೇಶ ಚಲವಾದಿ, ಐ.ಸಿ. ಚಿನಿವಾಲರ ಮತ್ತು ಎಲ್ಲ ಗ್ರಾಮಂಗಳ  ಪಿಡಿಒ ಮತ್ತು ಕಾರ್‍ಯದರ್ಶಿಗಳು ಪಿಎಸ್ ಸಿದ್ದಾರೂಢ ಆಬಲಕಟ್ಟಿ ಇದ್ದರು. 
ಭಾಕ್ಸ್; ಗ್ರಾಮೀಣ ಭಾಗದ ಬಡ ಕುಟುಂಬಗಳು ದಿನನಿತ್ಯದ ಜೀವನ ನಿರ್ವಹಣೆಗೆ ಕೂಲಿ ಆದಾಯವನ್ನೇ ಅವಲಂಬಿಸಿವೆ. ಇಂತಹ ಸಂದರ್ಭದಲ್ಲಿ ಕೆಲಸ ಮತ್ತು ಕೂಲಿ ದೊರೆಯದಿದ್ದರೆ ಮಕ್ಕಳ ಶಿಕ್ಷಣ, ಕುಟುಂಬದ ಆಹಾರ ಹಾಗೂ ಆರೋಗ್ಯದ ಮೇಲೂ ಪರಿಣಾಮ ಬೀರುತ್ತದೆ. ಆದ್ದರಿಂದ ಕಾರ್ಮಿಕರ ಸಮಸ್ಯೆಗಳನ್ನು ಅಧಿಕಾರಿಗಳು ಗಂಭೀರವಾಗಿ ಪರಿಗಣಿಸಿ ಕೆಲಸ ಒದಗಿಸಿ ತಕ್ಷಣ ಪರಿಹಾರ ಕ್ರಮ ಕೈಗೊಳ್ಳಬೇಕು. ಯಮನೂರ ಮಾದರ ಪ್ರತಿಭಟನಾಕಾರ.. 
ಭಾಕ್ಷ್; ಹುನಗುಂದ ಮತ್ತು ಇಲಕಲ್ಲ ಅವಳಿ ತಾಲೂಕಿನ ೨೪ ಗ್ರಾಮ ಪಂಚಾಯತ್‌ಗಳಲ್ಲಿ ಕಳೆದ ಎಪ್ರೀಲ್‌ದಿಂದ ಜೂನವರೆಗೆ ನರೇಗಾ ಯೋಜನೆಯಡಿ ಅರಣ್ಯ, ಕೃಷಿ ಸೇರಿದಂತೆ ಹಲವಾರು ಇಲಾಖೆಗಳ ಅನುದಾನ ಬಳಸಿಕೊಂಡು ಕಾರ್ಮಿಕರಿಗೆ ಉದ್ಯೋಗ  ನೀಡಲಾಗಿತ್ತು. ಜುಲೈ ೧ರಿಂದ ಸರ್ಕಾರ ಯೋಜನೆ ಬದಲಾಯಿಸಿ ವಿಬಿ-ಗ್ರಾಮ-ಜಿ ಯೋಜನೆಯಡಿ ಕೆಲವು ತಾಂತ್ರಿಕ ಬದಲಾವಣೆಗಳನ್ನು ಮಾಡಿದೆ. ಅದರನ್ವಯ ಎಲ್ಲ ಗ್ರಾಪಂ ಗಳು ಕಾರ್‍ಯ ನಿರ್ವಹಿಸುತ್ತಿವೆ. ಕೆಲವು ತಾಂತ್ರಿಕ ತೊಂದರೆಗಳಿಂದ ಕೆಲಸ, ಕೂಲಿ ಮತ್ತು ಇತರೆ ಸೌಲಭ್ಯ ನೀಡುವಲ್ಲಿ ಇಲಾಖೆಯಿಂದ ಕಾರ್ಮಿಕರಿಗೆ ತೊಂದರೆ ಆಗಿದೆ. ಈಗ ತಮ್ಮ ಬೇಕಡಿಗಳನ್ನು ನಿಯಮಾನುಸಾರ ಬಹುತೇಕ ಪಂಚಾಯತ್‌ಗಳಲ್ಲಿ ಸಮಸ್ಯೆಗಳನ್ನು ಬಗೆ ಹರಿಸಲಾಗಿದೆ. ಇನ್ನು ಉಳಿದ ಕೆಲವುಗಳನ್ನು ಮೇಲಾಧಿಕಾರಿಗಳ ಗಮನಕ್ಕೆ ತಂದು ಇತ್ಯರ್ಥಪಡಿಸಲಾಗುವದು. ಮುರಳೀಧರ ದೇಶಪಾಂಡೆ ಮುಖ್ಯ ಕಾರ್‍ಯನಿರ್ವಾಹಕ ಅಧಿಕಾರಿ ತಾಪಂ 

Author
KhushiHost News CMS Pro ®
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಅಂಧ, ವಿಕಲಚೇತನರ ಬಾಳಿಗೆ ಬೆಳಕಾದ ಸ್ನೇಹ ಜ್ಯೋತಿ ಸಂಸ್ಥೆ : ಧರ್ಮಾಧ್ಯಕ್ಷ ಡೇರಿಕ್ ಫರ್ನಾಂಡಿಸ್ ಧಾರವಾಡ ಜಿಲ್ಲಾ ಕ್ರೀಡಾ ವಸತಿ ನಿಲಯದ ಅಥ್ಲೇಟಿಕ್ ಕ್ರೀಡಾಕೂದಲ್ಲಿ ಸಾಧನೆಮಹಿಳೆಯರ ಸಾಮಾಜಿಕ, ಆರ್ಥಿಕ ಪ್ರಗತಿಗೆ ಜ್ಞಾನವಿಕಾಸ ಕಾರ್ಯಕ್ರಮ ಪೂರಕ: ದಯಾಶೀಲಅಂಜನಾದ್ರಿ ದೇವಸ್ಥಾನದ ಆಡಳಿತ ವಿವಾದ: ನ್ಯಾಯಾಲಯದ ಆದೇಶದಂತೆ ಅವಕಾಶ ನೀಡಿಸುರಕ್ಷಿತ ಬಚಪನ್ ಅಭಿಯಾನ: ಬೂದಗುಂಪಾದಲ್ಲಿ ಮಕ್ಕಳ ಹಕ್ಕುಗಳು & ಕಾನೂನುಗಳ ಜಾಗೃತಿ ಕಾರ್ಯಕ್ರಮನವೆಂಬರ್ 3 ರಂದು ಗಂಗಾವತಿಯಲ್ಲಿ ಬಸವಾದಿ ಶಿವಶರಣರ ಬೃಹತ್ ಹಿಂದೂ ಸಮಾವೇಶನಾಳೆ ದಲಿತ ಸೇನೆ ರಾಜ್ಯ ಸಮಿತಿಯ ಪೂರ್ವಭಾವಿ ಸಭೆ ಹಾಗೂ ನೂತನ ಪದಾಧಿಕಾರಿಗಳಿಗೆ ಸನ್ಮಾನಹುಲಿಗೆಮ್ಮ ದೇವಿ ದೇವಸ್ಥಾನದ ಅಧಿಕಾರಿ ವಿರುದ್ಧ ದೂರು ದಾಖಲಿಸಿ ಕ್ರಮಕ್ಕೆ ಒತ್ತಾಯಕೊಪ್ಪಳ ಭಾಗ್ಯನಗರ ಬಂದ್‌ಗೆ ಹೈದರಾಬಾದ್ ಕರ್ನಾಟಕ ಯುವಶಕ್ತಿ ಬೆಂಬಲಹಣಕಾಸು ಒಳಗೊಳ್ಳುವಿಕೆ ಸ್ಯಾಚುರೇಶನ್ ಅಭಿಯಾನ: ವಿಶೇಷ ಜಾಗೃತಿ ಪೋಸ್ಟರ್ ಬಿಡುಗಡೆ