ಹುನಗುಂದ; ಶಾಲಾ ಕಾಲೇಜು ವಿದ್ಯಾರ್ಥಿಗಳಿಗೆ, ಪಾದಚಾರಿಗಳಿಗೆ, ವೃದ್ದರಿಗೆ, ಗರ್ಭಿಣಿಯರು ನಡೆದಾಡಲು ಮತ್ತು ದ್ವಿಚಕ್ರವಾಹನ ಸವಾರರಿಗೆ ದಿನನಿತ್ಯ ತೊಂದರೆ ನೀಡುತ್ತಿದ್ದ ಬೀದಿ ದನಗಳನ್ನು ಶಿವಯೋಗಮಂದಿರದ ಗೋಶಾಲೆಗೆ ಕಳಿಸಲಾಗಿದೆ ಎಂದು ಪುರಸಭೆ ಮುಖ್ಯಾಧಿಕಾರಿ ಗುರುರಾಜ ಚೌಕಿಮಠ ಹೇಳಿದರು. ಶುಕ್ರವಾರ ಹಿರೇಹಳ್ಳಕ್ಕೆ ಹೊಂದಿರುವ ವಾರದ ತರಕಾರಿ ಮಾರುಕಟ್ಟೆ ಬಯಲಿನಲ್ಲಿ ಅಮೀನಗಡದಿಂದ ದನಗಳನ್ನು ಹಿಡಿಯುವ ಅನಭವಿಕರಿಂದ ೧೧ ದನ ಮತ್ತು ಆಕಳುಗಳನ್ನು ಹಿಡಿದು ಎರಡು ವಾಹನಗಳಲ್ಲಿ ಸಂಗ್ರಹಿಸಿ ಬದಾಮಿ ತಾಲೂಕಿನ ಸಿವಯೋಗಮಂದಿರುವ ಗೋಶಾಲೆಗೆ ಕಳಿಸಲಾಯಿತು. ಪಟ್ಟಣದ ವಿವಿಧ ರಸ್ತೆಗಳಲ್ಲಿ ಬೀದಿ ದನಗಳ ಹಾವಳಿ ಹೆಚ್ಚಾಗಿದ್ದು, ಸಾರ್ವಜನಿಕರು ತೀವ್ರ ತೊಂದರೆ ಅನುಭವಿಸುತ್ತಿದ್ದರು. ರಸ್ತೆಗಳ ಮಧ್ಯದಲ್ಲಿ ದನಗಳು ಗುಂಪು ಗುಂಪಾಗಿ ನಿಂತುಕೊಳ್ಳುವುದರಿಂದ ಸಾರ್ವಜನಿಕರು ಸಾಕಷ್ಟು ತೊಂದರೆಯ್ನು ಅನುಭವಿಸಿದ್ದಾರೆ. ರಾಸು ಮತ್ತು ಆಕಳುಗಳಿಗೆ ಸಂಬಂಧಿಸಿದವರು ಅವುಗಳನ್ನು ಬೀದಿಗೆ ಬಿಡದೆ ತಮ್ಮ ತಮ್ಮ ದನಗಳನ್ನು ಮನೆಗಳಲ್ಲಿ ಕಟ್ಟಿಕೊಳ್ಳುವಂಗೆ ಸಾಕಷ್ಟು ಪುರಸಭೆ ವಾಹನಗಳ ಧ್ವನಿವರ್ಧಕ ಮೂಲಕ ಪ್ರಚುರಪಡಿಸಿದರೂ ದನಗಳ ಮಾಲಿಕರು ಸ್ಪಂದಿಸಿದ ಕಾರಣ ಜೊತೆಗೆ ಸಾರ್ವಜನಿಕರಿಂದ ತೀವ್ರ ಒತ್ತಡ ಮತ್ತು ಅರ್ಜಿಗಳು ಬಂದ ಕಾರಣ ಅವುಗಳನ್ನು ಗೋಶಾಲೆಗೆ ಕಳಿಸಲಾಗಿದೆ ಎಂದು ಮುಖ್ಯಾಧಿಕಾರಿ ಚೌಕಿಮಠ ತಿಳಿಸಿದರು. ಹಿರಿಯ ಆರೋಗ್ಯ ನಿರೀಕ್ಷಕ ಸಂತೋಷ ವ್ಯಾಪಾರಿಮಠ ಮಾತನಾಡಿ ಬೀದಿ ದನಗಳಿಂದಾಗಿ ರಸ್ತೆ ಅಪಘಾತಗಳು ಸಂಭವಿಸುವ ಆತಂಕವಿದ್ದು, ವಾಹನ ಸವಾರರಿಗೂ ಸಂಚಾರಕ್ಕೆ ಅಡಚಣೆಯಾಗುತ್ತಿದೆ. ವಿಶೇ?ವಾಗಿ ಶಾಲಾ ಮಕ್ಕಳ ಸುರಕ್ಷತೆ ಹಾಗೂ ವೃದ್ಧರು ಮತ್ತು ಗರ್ಭಿಣಿಯರ ಸುಗಮ ಸಂಚಾರದ ದೃಷ್ಟಿಯಿಂದ ಈ ಸಮಸ್ಯೆಗೆ ತಕ್ಷಣ ಪರಿಹಾರ ಕಂಡುಕೊಳ್ಳುವುದು ಅನಿವಾಯವಾಗಿತ್ತು. ಈ ಹಿಂದೆ ಕೆಲವು ದ್ವಿಚಕ್ರವಾಹನ ಸವಾರರಿಗೆ ಬಹಳಷ್ಟು ತೊಂದರೆಯಾಗಿದ್ದು ಮರೆಯುವಂತಿಲ್ಲ. ಆದ್ದರಿಂದ ದನಗಳನ್ನು ಅನುಭವಿಕರು ಮತ್ತು ಪುರಸಭೆ ಸಿಬ್ಬಂದಿ ಸಹಕಾರದಿಂದ ಬೀದಿ ದನಗಳನ್ನು ಹಿಡಿದು ಗೋಶಾಲೆಗೆ ಕಳಿಸಲಾಗಿದೆ ಎಂದು ಅವರು ತಿಳಿಸಿದರು ಪುರಸಭೆ ಸೆನೆಟರಿ ಸೂಪರವೈಸರ್ ಬಾಬು ಲೈನ, ಎನ್.ಎಚ್. ಬದಾಮಿ, ಪೌರಕಾರ್ಮಿಕ ವೆಂಕಟೇಶ ನಡುವಿನಮನಿ, ಪಕೀರಪ್ಪ ಮರ್ಜಿ, ಶ್ರೀ ಜಗದೀಶ ಇತರರಿದ್ದರು. ; ಬೀದಿ ದನಗಳು ಮತ್ತೆ ರಸ್ತೆಗೆ ಬಾರದಂತೆ ಮತ್ತು ಬೀದಿ ನಾಯಿಗಳು ಕೂಡಾ ಸಾರ್ವಜನಿಕರಿಗೆ ನೀಡುವ ತೊಂದರೆಯನ್ನು ಗಮನಿಸಿ ಶಾಶ್ವತ ಪರಿಹಾರಕ್ಕೆ ಸೂಕ್ತ ಕ್ರಮಗಳನ್ನು ಕೈಗೊಳ್ಳಬೇಕು. ಬಸವರಾಜ ಬಡಿಗೇರ.
೯;ಎಚ್‌ಎನ್‌ಡಿ;೧; ಹುನಗುಂದ ಪುರಸಭೆಯಿಂದ ಸಾರ್ವಜನಿಕರಿಗೆ ತೊಂದರೆ ಕೊಡುತ್ತಿದ್ದ ಬೀದಿ ದನಗಳನ್ನು ಹಿಡಿದು ವಾಹನದಲ್ಲಿ ಶಿವಯೋಗಮಂದಿರದ ಗೋಶಾಲೆಗೆ ಕಳಿಸಲಾಯಿತು.