Press ID & Credential Portal
Apply / Verify  ➔
LIVE TV LocalCrimeNationalInternationalPoliticsBusinessFinancialEducationTechnologyEntertainmentSportsHealthFeatureTravelingBeauty
Press & Media Credential Portal
✕
1. Apply for Press ID Card
Register official reporter application with Email OTP.
➔
2. Download Approved Badge
Enter Card ID to receive authorization code via email.
3. Verify Reporter ID & Card (View Only)
For Public & Police: Check if card is authentic.
State News

ಸಕ್ಕರೆ ಕನಿಷ್ಠ ಮಾರಾಟ ದರ 50 ರೂ.ಗೆ ಹೆಚ್ಚಿಸಲಿ: ಡಿ.ಕೆ. ಶಿವಕುಮಾರ

ಬೆಂಗಳೂರು, ಅ. 31: ಕಬ್ಬು ಬೆಳೆಗಾರರ ಹಿತ ಕಾಪಾಡಲು ಕೇಂದ್ರ ಸರ್ಕಾರ ಸಕ್ಕರೆಯ ಕನಿಷ್ಠ ಮಾರಾಟ ದರವನ್ನು ಪ್ರತಿ ಕೆ.ಜಿ.ಗೆ 50 ರೂ.ಗೆ ಹೆಚ್ಚಿಸಬೇಕು. ಇದರಿಂದ ಮಾತ್ರ ಸಕ್ಕರೆ ಕಾರ್ಖಾನೆಗಳು ರೈತರಿಗೆ ಕಬ್ಬಿಗೆ ಉತ್ತಮ ಬೆಲೆ ನೀಡಲು ಸಾಧ್ಯವಾಗುತ್ತದೆ ಎಂದು ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ ಆಗ್ರಹಿಸಿದರು.

ಶನಿವಾರ ಸದಾಶಿವನಗರದ ತಮ್ಮ ನಿವಾಸದ ಬಳಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸಕ್ಕರೆ ಕನಿಷ್ಠ ಮಾರಾಟ ದರ ಹೆಚ್ಚಿಸುವಂತೆ ಕೋರಿ ಶುಕ್ರವಾರವೇ ಪ್ರಧಾನಮಂತ್ರಿಗೆ ಪತ್ರ ಬರೆದಿದ್ದೇನೆ. ಶೀಘ್ರದಲ್ಲೇ ಕೇಂದ್ರ ಸಚಿವರನ್ನು ಸಂಪರ್ಕಿಸಿ ರೈತರ ಪರವಾಗಿ ಮನವಿ ಮಾಡುತ್ತೇನೆ ಎಂದು ತಿಳಿಸಿದರು.

ರೈತರು ಪ್ರತಿಭಟನೆ ಕೈಬಿಟ್ಟು ಈ ಹಿಂದೆ ನಡೆದ ಮಾತುಕತೆಯಲ್ಲಿ ಕೈಗೊಂಡ ನಿರ್ಧಾರಗಳಿಗೆ ಬದ್ಧರಾಗಬೇಕು. ಕೇಂದ್ರ ಸರ್ಕಾರ ಸಕ್ಕರೆ ದರ ಹೆಚ್ಚಿಸಿದ ಬಳಿಕ ಕಾರ್ಖಾನೆಗಳಿಂದ ರೈತರಿಗೆ ಹೆಚ್ಚಿನ ಹಣ ಕೊಡಿಸುವ ಜವಾಬ್ದಾರಿ ನಮ್ಮದು. ರೈತರು ಹಠ ಮುಂದುವರಿಸಿದರೆ ಅಂತಿಮವಾಗಿ ಅವರಿಗೇ ನಷ್ಟವಾಗಲಿದೆ ಎಂದು ಎಚ್ಚರಿಸಿದರು.

ಕಬ್ಬು ಕಟಾವು ವಿಳಂಬವಾದರೆ ಬೆಳೆ ಒಣಗಿ ರಸದ ಪ್ರಮಾಣ ಕಡಿಮೆಯಾಗುತ್ತದೆ. ಇದರಿಂದ ರೈತರಿಗೆ ಆರ್ಥಿಕ ನಷ್ಟ ಉಂಟಾಗುತ್ತದೆ. ಈಗ ಕಬ್ಬು ಅರೆಯಲು ಸೂಕ್ತ ಸಮಯವಾಗಿದ್ದು, ಕಾರ್ಖಾನೆಗಳು ತಕ್ಷಣ ಕಬ್ಬು ಅರೆಯುವ ಕಾರ್ಯ ಆರಂಭಿಸಬೇಕು. ರೈತರು ಕಾನೂನನ್ನು ಕೈಗೆತ್ತಿಕೊಳ್ಳದೆ ಸಹಕರಿಸಬೇಕು ಎಂದು ಮನವಿ ಮಾಡಿದರು.

ಕೇಂದ್ರ ಸರ್ಕಾರ ಸೆಪ್ಟೆಂಬರ್‌ನಲ್ಲಿಯೇ ಕಬ್ಬು ಅರೆಯುವಂತೆ ಸೂಚಿಸಿತ್ತು. ಆದರೆ ಆಗ ಕಬ್ಬಿನಲ್ಲಿ ರಸದ ಪ್ರಮಾಣ ಕಡಿಮೆ ಇರುವುದಾಗಿ ರೈತರು ತಿಳಿಸಿದ್ದರು. ಈಗ ಸೂಕ್ತ ಸಮಯ ಬಂದಿರುವುದರಿಂದ ಕಬ್ಬು ಅರೆಯುವ ಪ್ರಕ್ರಿಯೆಗೆ ಅಡ್ಡಿಪಡಿಸಬಾರದು ಎಂದರು.

ಕಬ್ಬು ಬೆಳೆಗಾರರೊಂದಿಗೆ ಪ್ರಾಮಾಣಿಕವಾಗಿ ಮಾತುಕತೆ ನಡೆಸಲಾಗಿದೆ. ಕೇಂದ್ರ ಸಚಿವ ಪ್ರಹ್ಲಾದ ಜೋಶಿ ಅವರು ಸೂಕ್ತ ಬೆಲೆ ನಿಗದಿಪಡಿಸುವ ಭರವಸೆ ನೀಡಿರುವುದಾಗಿ ರೈತ ಮುಖಂಡರು ತಿಳಿಸಿದ್ದರು. ಕೇಂದ್ರ ಸರ್ಕಾರ ಕೈಗೊಳ್ಳುವ ನಿರ್ಧಾರವನ್ನು ಪಾಲಿಸುವ ಕುರಿತು ರೈತ ಮುಖಂಡರ ಸಮ್ಮುಖದಲ್ಲಿಯೇ ಸಕ್ಕರೆ ಕಾರ್ಖಾನೆ ಮಾಲೀಕರೊಂದಿಗೆ ಚರ್ಚಿಸಲಾಗಿದೆ. ಕೇಂದ್ರ ಸರ್ಕಾರ ನೇಮಿಸಿರುವ ಸಮಿತಿಯ ಸದಸ್ಯರಿಗೂ ರೈತರ ಸಮಸ್ಯೆಗಳನ್ನು ವಿವರಿಸಲಾಗಿದೆ ಎಂದು ಹೇಳಿದರು.

Author
KhushiHost News CMS Pro ®
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಹಿರಿಯ ಸಾಹಿತಿ ಡಾ. ಜಿನದತ್ತ ದೇಸಾಯಿ ನಿಧನಸಕ್ಕರೆ ಕನಿಷ್ಠ ಮಾರಾಟ ದರ 50 ರೂ.ಗೆ ಹೆಚ್ಚಿಸಲಿ: ಡಿ.ಕೆ. ಶಿವಕುಮಾರಘಟಪ್ರಭಾದಲ್ಲಿ ರೈತರ ಬಂದ್‌ಗೆ ಬೆಂಬಲ: ವ್ಯಾಪಾರ ವಹಿವಾಟು ಸಂಪೂರ್ಣ ಸ್ಥಗಿತರೈತರ ಹೋರಾಟ ತೀವ್ರ: ಬೆಳಗಾವಿ, ಧಾರವಾಡ, ವಿಜಯಪುರದಲ್ಲಿ ಪ್ರತಿಭಟನೆದೀಪಾವಳಿ : ಪ್ರಯಾಣಿಕರಿಗಾಗಿ 2,600 ಹೆಚ್ಚುವರಿ ಬಸ್‌ಗಳ ವ್ಯವಸ್ಥೆಜ್ಞಾನೇಶ ಕುಮಾರ ವಿರುದ್ಧ ಜನತಾ ಮಹಾಭಿಯೋಗ: ಖರ್ಗೆ ನಿವಾಸದಲ್ಲಿ ಅಣಕು ಸಂಸತ್ಭಾರತೀಯ ವಾಯುಪಡೆಗೆ ನೂತನ ಸಾರಥಿ ಅಶುತೋಷ ದೀಕ್ಷಿತಶಿವಾನಂದ ನೀಲಣ್ಣನವರಗೆ ಇಡಿ ಬಿಗ್ ಶಾಕ್: ₹427 ಕೋಟಿ ಆಸ್ತಿ ಜಪ್ತಿಪಂಚತಾರಾ ಹೋಟೆಲ್ ಈಜುಕೊಳದಲ್ಲಿ ವಿದ್ಯುತ್ ಆಘಾತ: ಇಬ್ಬರು ವಿದೇಶಿಗರ ಸಾವುಹಾಲಿನ ದರ ಏರಿಕೆ ಅನಿವಾರ್ಯ: ಡಿ.ಕೆ. ಶಿವಕುಮಾರ ಸಮರ್ಥನೆ