Press ID & Credential Portal
Apply / Verify  ➔
LIVE TV LocalCrimeNationalInternationalPoliticsBusinessEducationTechnologyEntertainmentSportsHealthFeatureTravelingBeautyRecipes
Press & Media Credential Portal
✕
1. Apply for Press ID Card
Register official reporter application with Email OTP.
➔
2. Download Approved Badge
Enter Card ID to receive authorization code via email.
3. Verify Reporter ID & Card (View Only)
For Public & Police: Check if card is authentic.
Local News | Districts Bijapur

ಇಂಡಿ: ಮಹರ್ಷಿ ವಾಲ್ಮೀಕಿಯವರ ತತ್ವಾದರ್ಶಗಳು ಪ್ರತಿಯೊಬ್ಬರಿಗೂ ಮಾದರಿ – ತಹಶೀಲ್ದಾರ್ ನಾಗೇಂದ್ರ ಕೊಳಶೆಟ್ಟಿ

ಇಂಡಿ:  ವಾಲ್ಮೀಕಿ ಮಹರ್ಶೀಗಳ ಆದರ್ಶವನ್ನು ಪ್ರತಿಯೊಬ್ಬರು ತಮ್ಮ ಜೀವನ ಅಳವಡಿಸಕೊಳ್ಳಬೇಕು. ಋಷಿಗಳು ತಮ್ಮ ಕರ್ಮದಿಂದ ಬದಲಾವಣೆ ಹೊಂದಿ ಇನ್ನೋಬ್ಬರಿಗೆ ಆದರ್ಶಪ್ರಾಯರಾದರು. ಅಲ್ಲದೆ ರಾಮಾಯಣ ಎಂಭ ಮಹಾ ಗ್ರಂಥವನ್ನು ರಚಿಸುವ ಮೂಲಕ ಖ್ಯಾತನಾಮರಾದರು ಎಂದು ತಹಶೀಲ್ದಾರ ನಾಗೇಂದ್ರ ಕೊಳಶೆಟ್ಟಿ ಹೇಳಿದರು. 
ಅವರು ನಗರದ ವಿಜಯಪುರ ರಸ್ತೆಯ ವಾಲ್ಮೀಕಿ ಮರ್ಹಶಿ ಸಭಾ ಭವನದಲ್ಲಿ ತಾಲೂಕಾ ಆಡಳಿತ ಹಾಗೂ ಸಮಾಜ ಕಲ್ಯಾಣ ಇಲಾಖೆಯ ಸಂಯುಕ್ತಾಶ್ರಯದಲ್ಲಿ ಹಮ್ಮಿಕಂಡ ಶ್ರೀವಾಲ್ಮೀಕಿ ಮರ್ಹಶಿ ಜಯಂತಿ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ  ಭಾವಚಿತ್ರಕ್ಕೆ ಪೂಜೆ  ನೆರವೇರಿಸಿ  ಪುಸ್ಪ ನಮನ ಸಲ್ಲಿಸಿ ಮಾತನಾಡಿದರು. .  ಇಂದಿನ ಅವರ ಜೀವನ ಪ್ರತಿಯೊಬ್ಬರಿಗೂ ಮಾದರಿಯಾಗಿದ್ದು ಅವರ ತತ್ವಾಧರ್ಶಗಳನ್ನು ಮೈಗುಡಿಸಕೊಳ್ಳಬೇಕು. ಅಲ್ಲದೆ ಸರ್ವ ಸಮಾಜಕ್ಕೆ ಸಂತರಾಗಿದ್ದು  ನಾವು ಅವರ ಗುಣ ಅಳವಡಿಸಿಕೊಳ್ಳಬೇಕು ಎಂದರು.
  ಸುರೇಶ್ ನಡಗಡ್ಡಿ ದಲಿತ ಮುಖಂಡರು ಪ್ರಾಸ್ತಾವಿಕವಾಗಿ ಮಾತನಾಡಿ ಮಹಶ್ರಿ ವಾಲ್ಮೀಕಿ ರವರು ಸಮಾಜದ ಆಸ್ತಿ, ಅವರು ಜಗತ್ತಿಗೆ ೨೪೦೦೦ಶ್ಲೋಕ ಹೊಂದಿದ್ದ ರಾಮಾಯಣ ಮಹಾ ಗ್ರಂಥ ರಚಸಿದರು. ಇದು ಸಮಾಜದ ಸಂಸ್ಕಾರದ ಮೌಲ್ಯ ಹೊಂದಿರುವ ಗ್ರಂಥವಾಗಿದೆ ಎಂದರು.
ಉಪನ್ಯಾಸಕರಾದ ರವಿಕುಮಾರ ಅರಳಿ ಪ್ರಾಧ್ಯಾಪಕರು ಸರಕಾರಿ ಪ್ರಥಮ ದರ್ಜೆಯ ಕಾಲೇಜು ಇಂಡಿ ರವರು ಮಾತನಾಡಿ ಮಹಾಶ್ರೀ ವಾಲ್ಮೀಕಿ ರವರು  ಸಮಾಜದ ಮಹಾನ್ ಸಂತ ಬೇಟೆಗಾರ ಆಗಿದ ವಾಲ್ಮೀಕಿ ಮನಸು ಪರಿವರ್ತ್ ನೆ ಮಹರ್ಷಿ ವಾಲ್ಮೀಕಿ ಆದರೂ ಜಗತ್ತಿಗೆ ರಾಮನ ಗುಣ ಸೀತೆಯ ಪತಿ ಸೇವೆ, ಭರತನ ಸಹೋದರ ಗುಣಗಳು ಲವ ಕುಶ ಗುರುಬೋದನೆ ಮಾಡಿಯಾದರೂ. ಗುರುವಿನ  ಜೀವನ ನಮಗೆ ಮಾದರಿ ಎಂದು ಉಪನ್ಯಾಸ ನೀಡಿದರು.
ಪ್ರಸಕ್ತ ೨೦೨೫-೨೬ನೇ ಸಾಲಿನಲ್ಲಿ ಎಸ್ ಎಸ್ ಎಲ್ ಸಿ ಪ್ರತಭಾನ್ವಿತ ವಿದ್ಯಾರ್ಥಿಗಳಿಗೆ ಸನ್ಮಾನಿಸಿ ಗೌರವಿಸಿದರು. ಸಮಾಜ ಕಲ್ಯಾಣಾ ಇಲಾಖೆಯ ಸಹಾಯಕ ನಿರ್ದೇಶಕ ಉಮೇಶ್ ಲಮಾಣಿ ಸ್ವಾಗತಿಸಿ ಮಾತನಾಡಿದರು.
ನಗರ ಯೋಜನಾ ಪ್ರಾಧಿಕಾರದ ಅಧ್ಯಕ್ಷ ಅಜೀತ ಧನಶೇಟ್ಟಿ ಕಾರ್ಯಕ್ರಮವನ್ನು ಉದ್ಘಾಟಿಸಿದರು. ವೇದಿಕೆ ಮೇಲೆ  ತಾಲೂಕು ಗ್ಯಾರೆಂಟಿ ಸಮಿತಿ ಅಧ್ಯಕ್ಷ ಪ್ರಶಾಂತ ಕಾಳೆ. ತಾಪಂ ಇಓ ಮಹಾದೇವಪ್ಪ ಏವೂರ, ಅರ್ಜುನ್ ನಾಯೊಕೋಡಿ ವಾಲ್ಮೀಕಿ ಸಮಾಜ ಅಧ್ಯಕ್ಷ ಅರ್ಜುನ ಪೀರಪ್ಪ ನಾಯಕೋಡಿ, ವಾಲ್ಮೀಕಿ ನೌಕರ ಸಂಘಧ ಅಧ್ಯಕ್ಷರ ಬ್ರೀಡರ್ ಸೇರಿದಂತೆ ಅನೇಕರು ಉಪಸ್ಥಿತರಿದ್ದರು. 
  ಬಸವರಾಜ ಗೋರನಾಳ ಶಿಕ್ಷಕರು ನಿರೂಪಿಸಿದರು. ಸಮಾಜ ಕಲ್ಯಾಣ ಇಲಾಖೆಯ ಎಲ್ಲಾ ವಾರ್ಡನ್ ಹಾಗೂ ಸಿಬ್ಬಂದಿಗಳು  ವಿವಿಧ ಇಲಾಖೆಯ ತಾಲೂಕಮಟ್ಟದ ಅಧಿಕಾರಿಗಳು ಸಮಾಜದ ಮುಖಂಡರ ಭಾಗವಹಿಸಿದರು.

Author
KhushiHost News CMS Pro ®
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಅಂಧ, ವಿಕಲಚೇತನರ ಬಾಳಿಗೆ ಬೆಳಕಾದ ಸ್ನೇಹ ಜ್ಯೋತಿ ಸಂಸ್ಥೆ : ಧರ್ಮಾಧ್ಯಕ್ಷ ಡೇರಿಕ್ ಫರ್ನಾಂಡಿಸ್ ಧಾರವಾಡ ಜಿಲ್ಲಾ ಕ್ರೀಡಾ ವಸತಿ ನಿಲಯದ ಅಥ್ಲೇಟಿಕ್ ಕ್ರೀಡಾಕೂದಲ್ಲಿ ಸಾಧನೆಮಹಿಳೆಯರ ಸಾಮಾಜಿಕ, ಆರ್ಥಿಕ ಪ್ರಗತಿಗೆ ಜ್ಞಾನವಿಕಾಸ ಕಾರ್ಯಕ್ರಮ ಪೂರಕ: ದಯಾಶೀಲಅಂಜನಾದ್ರಿ ದೇವಸ್ಥಾನದ ಆಡಳಿತ ವಿವಾದ: ನ್ಯಾಯಾಲಯದ ಆದೇಶದಂತೆ ಅವಕಾಶ ನೀಡಿಸುರಕ್ಷಿತ ಬಚಪನ್ ಅಭಿಯಾನ: ಬೂದಗುಂಪಾದಲ್ಲಿ ಮಕ್ಕಳ ಹಕ್ಕುಗಳು & ಕಾನೂನುಗಳ ಜಾಗೃತಿ ಕಾರ್ಯಕ್ರಮನವೆಂಬರ್ 3 ರಂದು ಗಂಗಾವತಿಯಲ್ಲಿ ಬಸವಾದಿ ಶಿವಶರಣರ ಬೃಹತ್ ಹಿಂದೂ ಸಮಾವೇಶನಾಳೆ ದಲಿತ ಸೇನೆ ರಾಜ್ಯ ಸಮಿತಿಯ ಪೂರ್ವಭಾವಿ ಸಭೆ ಹಾಗೂ ನೂತನ ಪದಾಧಿಕಾರಿಗಳಿಗೆ ಸನ್ಮಾನಹುಲಿಗೆಮ್ಮ ದೇವಿ ದೇವಸ್ಥಾನದ ಅಧಿಕಾರಿ ವಿರುದ್ಧ ದೂರು ದಾಖಲಿಸಿ ಕ್ರಮಕ್ಕೆ ಒತ್ತಾಯಕೊಪ್ಪಳ ಭಾಗ್ಯನಗರ ಬಂದ್‌ಗೆ ಹೈದರಾಬಾದ್ ಕರ್ನಾಟಕ ಯುವಶಕ್ತಿ ಬೆಂಬಲಹಣಕಾಸು ಒಳಗೊಳ್ಳುವಿಕೆ ಸ್ಯಾಚುರೇಶನ್ ಅಭಿಯಾನ: ವಿಶೇಷ ಜಾಗೃತಿ ಪೋಸ್ಟರ್ ಬಿಡುಗಡೆ