Press ID & Credential Portal
Apply / Verify  ➔
LIVE TV LocalCrimeNationalInternationalPoliticsBusinessEducationTechnologyEntertainmentSportsHealthFeatureTravelingBeautyRecipes
Press & Media Credential Portal
✕
1. Apply for Press ID Card
Register official reporter application with Email OTP.
➔
2. Download Approved Badge
Enter Card ID to receive authorization code via email.
3. Verify Reporter ID & Card (View Only)
For Public & Police: Check if card is authentic.
Local News | Districts Bijapur

ಇಂಡಿ: ಜಲಧಾರೆ ಯೋಜನೆಯಿಂದ ಶಾಶ್ವತ ಕುಡಿಯುವ ನೀರು – ಶಾಸಕ ಯಶವಂತರಾಯಗೌಡ ಪಾಟೀಲ

ಇಂಡಿ: ಕುಡಿಯುವ ನೀರಿನ ಮಹತ್ವಕಾಂಕ್ಷಿ ಜಲಧಾರೆ ಯೋಜನೆಯು ಜನೇವರಿ ಅಂತ್ಯದವರಗೆ ಕಾಮಗಾರಿ ಪೂರ್ಣಗೊಳ್ಳಲಿದೆ. ಇದರಿಂದ ನಮ್ಮ ಭಾಗ ಶಾಶ್ವತ ಕುಡಿಯುವ ನೀರಿ ಸಮಸ್ಯಯಿಂದ ಪಾರಾಗಲಿದ್ದು ಅಲ್ಲಿಯವರೆಗೆ ಸಂಬಂದಪಟ್ಟ ಅಧಿಕಾರಿಗಳು ಹಾಗೂ ಗ್ರಾಮ ಪಂಚಾಯತಿ ಪಿಡಿಒಗಳು ಜಾಗೃತರಾಗಿ ಕಾರ್ಯ ನಿರ್ವಹಿಸಬೇಕು. ಒಂದು ವೇಳೆ ಎಲ್ಲಿಯಾದರು ಕುಡಿಯುವ ನೀರಿನ ಸಮಸ್ಯ ತಲೆ ದೋರಿದ್ದಲ್ಲಿ ನೇರವಾಗಿ ನನಗೆ ಸಂಪರ್ಕಿಸಿ ಎಂದು ಗ್ರಾಪಂ ಪಿಡಿಒಗಳಿಗೆ ಶಾಸಕ ಯಶವಂತರಾಯಗೌಡ ಪಾಟೀಲ ಹೇಳಿದರು. 
 ಅವರು ಶುಕ್ರವಾರರಂದು ನಗರದ ತಾಪಂ ಸಭಾಭವನದಲ್ಲಿ ಟಾಸ್ಕ್ ಫೊರ್ಸ್ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು. 
ಮುಂಬರುವ ದಿನಗಳಲ್ಲಿ ತಾಲೂಕಿನ ಯಾವುದೆ ಗ್ರಾಮಗಳಲ್ಲಿ ಕುಡಿಯುವ ನೀರಿನ ತೊಂದರೆ ತಲೆ ದೋರದಂತೆ ಜಾಗೃವಹಿಸಬೇಕು. ನಮ್ಮ ಮೋದಲನೆ ಆಧ್ಯತೆ ಏನಿದ್ದರು ಕುಡಿಯುವ ನೀರಿಗೆ ನೀಡಬೇಕು. ಕುಡಿಯುವ ನೀರು ಸರಬರಾಜಾಗುವ ಅರ್ಜನಾಳ, ಹಂಜಗಿ, ಲೋಣಿ.ಕೆಡಿ  ಕೇರೆಗಳನ್ನು ಮೊದಲು ತುಂಬಿಸಲು ಕ್ರಮ ಕೈಗೊಳ್ಳಿ.  ಇಲ್ಲ ಸಲ್ಲದ ಕಾರಣ ಹೇಳಬೇಡಿ ಎಂದು ಯುಕೆಪಿ ಅಧಿಕಾರಿಗಳನ್ನು ಶಾಸಕರು ತರಾಟೆಗೆ ತೆಗೆದುಕೊಂಡರು
ಬಾಕ್ಸ್: ಕುಡಿಯುವ ನೀರಿನ ಸಮಸ್ಯ ಪರಿಹಾರಕ್ಕಾಗಿ ಈಗಾಗಲೆ ೧ ಕೋಟಿ ರೂಪಾಯಿ ಅನುದಾನ ನೀಡಿದ್ದೆನೆ. ಇನ್ನೂ ಎಷ್ಟು ಬೇಕು ಅಷ್ಟು ಅನುದಾನ ನೀಡುತ್ತೆನೆ. ಯಾವುದೆ ಕಾರಣಕ್ಕೂ ಕುಡಿಯುವ ನೀರಿನ ತೊಂದರೆಯಾಗಬಾರದು. ನಗರ ಹಾಗೂ ಗ್ರಾಮಗಳಲ್ಲಿ ಕೊರೆಸಿ ಬಿಟ್ಟಿರುವ ಕೊಳವೆ ಬಾವಿಗಳನ್ನು ಫ್ಲಸಿಂಗ್ ಮಾಡಿ ಅನಿವಾರ್ಯವಾದಲ್ಲಿ ಕೊಳವೆ ಬಾವಿ ಕೊರೆಸಿ. ಇದನ್ನು ಸಾಧ್ಯವಾಗದಿದ್ದಲ್ಲಿ ಟ್ಯಾಂಕರ್  ಮೂಲಕ ಕುಡಿಯುವ ನೀರು ಒದಗಿಸಿ. ಒಟ್ಟಿನಲ್ಲಿ ನಗರ ಸೇರಿದಂತೆ ತಾಲೂಕಿನ ಯಾವುದೆ ಗ್ರಾಮದ ಜನ ವಸತಿ ಪ್ರದೇಶಗಳಿಗೆ ಕುಡಿಯುವ ನೀರಿನ ಹಾಗೂ ಜಾನುವಾರುಗಳಿಗೆ ಮೇವಿನ ಕೊರತೆಯಾಗದಂತೆ ಮುಂಜಾಗೃತ ಕ್ರಮಕೈಗೊಳ್ಳಿ. 
ಯಶವಂತರಾಯಗೌಡ ಪಾಟೀಲ ಶಾಸಕರು.
ಈಗಾಗಲೆ ಭೀಮಾ ನದಿಗೆ ಉಜನಿ ಜಲಾಶಯದಿಂದ ನೀರು ಬೀಡಲು ಮಹಾರಾ? ಸರ್ಕಾರಕ್ಕೆ ಮನವಿ ಮಾಡಿದ್ದೆವೆ. ಇದೇ ಅ.೨೮ ರಂದು ನೀರು ಹರಿ ಬಿಡುವ ಸಾಧ್ಯತೆ ಇದೆ. ತಾಲೂಕಿನ ವಿದ್ಯುತ ಅವಗಡದಿಂದ ೧೨ ಜನ ರೈತರ ಕಬ್ಬು ಸುಟ್ಟಿದ್ದರಿಂದ ಅಪಾರ ಪ್ರಮಾಣದ ಹಾನಿ ಸಂಭವಿಸಿದೆ. ಇದರಿಂದ ರೈತರು ತಿವೃ ತೊಂದರೆ ಅನುಭವಿಸುವಂತಾಗಿದ್ದು ಸಂತ್ರಸ್ತ ರೈತರಿಗೆ ಸಕಾರದಿಂದ ತ್ವರಿತವಾಗಿ ಪರಿಹಾರ ಕೊಡಿಸಲು ಅಧಿಕಾರಿಗಳು ಪ್ರಯತ್ನಿಸಬೇಕು. ನನ್ನ ವ್ಯಯಕ್ತಿಕವಾಗಿ ತಲಾ ರೈತರಿಗೆ ೨೫ ಸಾವಿರೂ ರೂಪಾಯಿ ಸಹಾಯಧನ ನೀಡುವುದಾಗಿ ಸಭೆಗೆ ತಿಳಿಸಿದರು. 

ವೇದಿಕೆಯ ಮೇಲೆ ಕಂದಾಯ ಉಪ ವಿಭಾಗಾಧಿಕಾರಿ ಚಿದಾನಂದ ಗುರುಸ್ವಾಮಿ, ಡಿವೈಎಸ್ಪಿ ಸದಾಶಿವ ಕಟ್ಟಿಮನಿ, ತಹಸಿಲ್ದಾರ ನಾಗೇಂದ್ರ ಕೋಳಶೆಟ್ಟಿ, ತಾಪಂ ಇಒ ಮಹಾದೇವಪ್ಪ ಏವೂರ ಇದ್ದರು. 
ಸಭೆಯಲ್ಲಿ ತಾಪಂ ಯೋಜನಾಧಿಕಾರಿ ನಂದೀಪ ರಾಠೋಡ, ಪಿಡಬ್ಲುಡಿ ಅಭಿಯಂತರ ದಯಾನಂದ ಮಠ, ಹೆಸ್ಕಾಂ ಎಇಇ ಎಸ್.ಆರ್.ಮೆಂಡೆಗಾರ, ಹೆಸ್ಕಾಂ ಎಇಇ ಹವಾಲ್ದಾರ,  ಯುಕೆಪಿ ಅಧಿಕಾರಿ ಗೊಂವಿಂದ ರಾಠೋಡ, ಅಂಗಡಿ,  ನಗರಸಭೆ ಪೌರಾಯುಕ್ತ ಶಿವಾನಂದ ಪೂಜಾರಿ, ಜಿಪಂ ಶಿವಾಜಿ ಬನಸೋಡೆ, ಬಂಡಿ, ಪಶು ಅಧಿಕಾರಿ ಡಾ|| ರಾಜಕುಮಾರ ಅಡಕಿ, ಬಿಸಿಎಮ್ ಅಧಿಕಾರಿ ಗದ್ಯಾಳ ಸೇರಿದಂತೆ ಗ್ರಾಪಂ ಅಭಿವೃದ್ದಿ ಅಧಿಕಾರಿಗಳು ಸಭೆಯಲ್ಲಿ ಭಾಗವಹಿಸಿದ್ದರು.

 

Author
KhushiHost News CMS Pro ®
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಅಂಧ, ವಿಕಲಚೇತನರ ಬಾಳಿಗೆ ಬೆಳಕಾದ ಸ್ನೇಹ ಜ್ಯೋತಿ ಸಂಸ್ಥೆ : ಧರ್ಮಾಧ್ಯಕ್ಷ ಡೇರಿಕ್ ಫರ್ನಾಂಡಿಸ್ ಧಾರವಾಡ ಜಿಲ್ಲಾ ಕ್ರೀಡಾ ವಸತಿ ನಿಲಯದ ಅಥ್ಲೇಟಿಕ್ ಕ್ರೀಡಾಕೂದಲ್ಲಿ ಸಾಧನೆಮಹಿಳೆಯರ ಸಾಮಾಜಿಕ, ಆರ್ಥಿಕ ಪ್ರಗತಿಗೆ ಜ್ಞಾನವಿಕಾಸ ಕಾರ್ಯಕ್ರಮ ಪೂರಕ: ದಯಾಶೀಲಅಂಜನಾದ್ರಿ ದೇವಸ್ಥಾನದ ಆಡಳಿತ ವಿವಾದ: ನ್ಯಾಯಾಲಯದ ಆದೇಶದಂತೆ ಅವಕಾಶ ನೀಡಿಸುರಕ್ಷಿತ ಬಚಪನ್ ಅಭಿಯಾನ: ಬೂದಗುಂಪಾದಲ್ಲಿ ಮಕ್ಕಳ ಹಕ್ಕುಗಳು & ಕಾನೂನುಗಳ ಜಾಗೃತಿ ಕಾರ್ಯಕ್ರಮನವೆಂಬರ್ 3 ರಂದು ಗಂಗಾವತಿಯಲ್ಲಿ ಬಸವಾದಿ ಶಿವಶರಣರ ಬೃಹತ್ ಹಿಂದೂ ಸಮಾವೇಶನಾಳೆ ದಲಿತ ಸೇನೆ ರಾಜ್ಯ ಸಮಿತಿಯ ಪೂರ್ವಭಾವಿ ಸಭೆ ಹಾಗೂ ನೂತನ ಪದಾಧಿಕಾರಿಗಳಿಗೆ ಸನ್ಮಾನಹುಲಿಗೆಮ್ಮ ದೇವಿ ದೇವಸ್ಥಾನದ ಅಧಿಕಾರಿ ವಿರುದ್ಧ ದೂರು ದಾಖಲಿಸಿ ಕ್ರಮಕ್ಕೆ ಒತ್ತಾಯಕೊಪ್ಪಳ ಭಾಗ್ಯನಗರ ಬಂದ್‌ಗೆ ಹೈದರಾಬಾದ್ ಕರ್ನಾಟಕ ಯುವಶಕ್ತಿ ಬೆಂಬಲಹಣಕಾಸು ಒಳಗೊಳ್ಳುವಿಕೆ ಸ್ಯಾಚುರೇಶನ್ ಅಭಿಯಾನ: ವಿಶೇಷ ಜಾಗೃತಿ ಪೋಸ್ಟರ್ ಬಿಡುಗಡೆ