ಇಂಡಿ : ತಾಲೂಕು ಪಂಚಾಯತ್ ಸಭಾಭವನದಲ್ಲಿ ಕಾನೂನು ಅರಿವು ಮತ್ತು ನೆರವು (ಹಿರಿಯ ನಾಗರಿಕರ ಕಾಯ್ದೆ -೨೦೦೭, ಹಿರಿಯ ನಾಗರಿಕರಿಗೆ ಕೇಂದ್ರ ಮತ್ತು ರಾಜ್ಯ ಸರ್ಕಾರದ ಯೋಜನೆಗಳು ಸೈಬರ್ ಮತ್ತು ಡಿಜಿಟಲ್ ವಂಚನೆ ಕುರಿತು)
ವಿಕಲಚೇತನರ ಹಾಗೂ ಹಿರಿಯ ನಾಗರಿಕರ ಸಬಲೀಕರಣ ಇಲಾಖೆಯಿಂದ ಹಮ್ಮಿಕೊಳ್ಳಲಾಗಿದ್ದ ಕಾನೂನು ಅರಿವು ಮತ್ತು ನೆರವು ಕಾರ್ಯಕ್ರಮವನ್ನು ನಾಡಗೀತೆ ಪ್ರಾರಂಭಿಸಲಾಯಿತು ಕಾರ್ಯಕ್ರಮವನ್ನು ಬಾಬು.ಎಮ್.ಅವತಾಡೆ ವಕೀಲರು ಅಧ್ಯಕ್ಷರು ನವರಸ ಜಾನಪದ ಕಲಾಯುವಕ ಸಂಘ ವಿಜಯಪುರ ಇವರು ಸಸಿಗೆ ನೀರೆಯುವ ಮುಖಾಂತರ ಉದ್ಘಾಟನೆ ಮಾಡಿದರು. ಉದ್ಧಾಟಸಿದ ನಂತರ ಹಿರಿಯ ನಾಗರಿಕರ ರಕ್ಷಣೆಗಾಗಿ ೨೦೦೭ರ ಕಾಯಿದೆಯನ್ನು ಜಾರಿಗೆ ತಂದಿದ್ದು, ಸದರಿ ಕಾಯ್ದೆ ಮತ್ತು ನಿಯಮಗಳು-೨೦೦೯ರ ಕುರಿತು ಎಲ್ಲ ಹಿರಿಯರು ತಿಳಿದು ಕೊಳ್ಳುವಂತೆ ಹಾಗೂ ಹಿರಿಯ ನಾಗರಿಕರಿಗೆ ಇರುವ ಕಾನೂನುಗಳ ಕುರಿತು ಮಾಹಿತಿ ಪಡೆದುಕೊಳ್ಳಲು ಹಾಜರಿದ್ದ ಎಲ್ಲ ಹಿರಿಯ ನಾಗರಿಕರಿಗೆ ಹಾಗೂ ತಾಲೂಕು ಮಟ್ಟದ ಅಧಿಕಾರಿಗಳಿಗೆ ತಿಳಿಸಿದರು.ಮತ್ತು ಹಿರಿಯ ನಾಗರಿಕರಿಗೆ , ವಿಕಲಚೇತನರಿಗೆ ಎಲ್ಲಾ ಪ್ರೀ ಆಗಿ ಸೇವೆ ಒದಗಿಸುತ್ತೇವೆ ಎಂದು ತಿಳಿಸಿದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಮಹಾದೇವಪ್ಪ ಏವೂರ ಮಾನ್ಯ ಕಾರ್ಯನಿರ್ವಾಹಕ ಅಧಿಕಾರಿಗಳು, ತಾಲೂಕ ಪಂಚಾಯತ ಇಂಡಿ ರವರು ಮಾತನಾಡಿ ಹಿರಿಯ ನಾಗರಿಕರಿಗೆ ಇರುವ ಸರ್ಕಾರಿ ಸೌಲಭ್ಯಗಳ ಕುರಿತು ತೊಂದರೆ ಎದುರಾಗದಂತೆ, ಸೌಲಭ್ಯಗಳನ್ನು ತಲುಪಿಸಲು ಹಾಜರಿದ್ದ ವಿವಿಧ ಇಲಾಖೆಗಳ ಅಧಿಕಾರಿಗಳಿಗೆ ಸೂಚನೆ ನೀಡಿದರು. ಮತ್ತು ಮುಖ್ಯ ಅತಿಥಿಗಳಾಗಿ ಆಗಮಿಸಿರುವ ಉಮೇಶ ಲಮಾಣಿ ಸಹಾಯಕ ನಿರ್ದೇಶಕರು ಸಮಾಜ ಕಲ್ಯಾಣ ಇಲಾಖೆ ಇಂಡಿ ಇವರು ಮಾತನಾಡುತ್ತಾ ಹಿರಿಯ ನಾಗರಿಕರ ಕಾಯ್ದೆಯ ಪ್ರಮುಖ ಅಂಶಗಳ ಕುರಿತು, ಆಸ್ತಿ ವರ್ಗಾವಣೆ ಹಾಗೂ ನಿರ್ವಹಣಾ ವೆಚ್ಚಗಳ ಕುರಿತು ಹಾಜರಿದ್ದ ಹಿರಿಯ ನಾಗರಿಕಗೆ ಅರಿವು ಮೂಡಿಸಿದರು, ಸಂಪನ್ಮೂಲ ವ್ಯಕ್ತಿಗಳಾಗಿ ಆರ್. ಕೆ. ಪೂಜಾರಿ ವಕೀಲರು ಇತ್ತೀಚಿಗೆ ಎದುರಾಗುತ್ತಿರುವ ಡಿಜಿಟಲ್ ವಂಚಣೆ ಕುರಿತು ಹಾಗೂ ಹಿರಿಯ ನಾಗರಿಕರಿಗೆ ಇರುವ ಕೇಂದ್ರ ಮತ್ತು ರಾಜ್ಯ ಸರ್ಕಾರದ ಯೋಜನೆಗಳ ಕುರಿತು ಮಾಹಿತಿ ನೀಡಿದರು. ಮತ್ತು ಎಸ್.ಬಿ.ಯಂಕಚಿ ವಕೀಲರು ಇವರು ಮಾತನಾಡಿ ಜನನ ಮತ್ತು ಮರಣ ಪ್ರಮಾಣ ಪತ್ರಗಳ ಬಗ್ಗೆ ಮಾಹಿತಿ ನೀಡಿದರು. ಎಮ್.ಎಸ್.ಭೋಸಗಿ ವಕೀಲರು ಇಂಡಿ,
ಸದರಿ ಕಾರ್ಯಕ್ರಮದಲ್ಲಿ ಪ್ರಕಾಶ ಕಾಂಬಳೆ ಂಆಐಖ ಇಂಡಿ , ಎಸ್.ಆರ್.ಗಧ್ಯಾಳ ಬಿ.ಸಿ.ಎಮ್ ಅಧಿಕಾರಿಗಳು ಇಂಡಿ, ಎನ್.ಪಿ.ಪೂಜಾರಿ ಶಿಕ್ಷಣ ಇಲಾಖೆ ಇಂಡಿ, ಚಿದಾನಂದ ಬಳಗಾನೂರ ಹಾಗೂ ವಿವಿಧ ಇಲಾಖೆಯ ತಾಲೂಕು ಮಟ್ಟದ ಅಧಿಕಾರಿಗಳು ಮತ್ತು ಇಂಡಿ ತಾಲೂಕಿನ ಎಮ್.ಆರ್.ಡಬ್ಯ್ಲೂ ಪರಶುರಾಮ ಭೋಸ್ಲೆ, ಸಿದ್ದು ಹವಳಗಿ ಶಿವಲಿಂಗಪ್ಪ ನಾಯ್ಕೋಡಿ, ಬಾಬುಶ್ಯಾ ಹೊಸಮನಿ, ಸಿದ್ದಪ್ಪ ಗುಲೆ, ಜ್ಞಾನೇಶ್ವರ ಠೋಕೆ, ಮಹಾನಂದ ಬಂಡಿವಡ್ಡರ, ಶಿವಕಾಂತವ್ವ ಕುಂಬಾರ, ಮಾಬೂಬಿ ಕಾಂಬಳೆ, ಮುಂತಾದವರು ಉಪಸ್ಥಿತರಿದ್ದರು.ಈ ಕಾರ್ಯಕ್ರಮವನ್ನು ಬಸವರಾಜ ಗೋರನಾಳ ನಿರೂಪಣೆ ಮತ್ತು ವಂದನಾರ್ಪಣೆ ಮಾಡಿದರು.