ಇಂಡಿ : ಹಲವಾರು ಬಾರಿ ಝಳಕಿ ಕೇ.ಬಿ.ಜೆ.ಎನ್. ಎಲ್ ಕಚೇರಿ ಮುಂದೆ ರೈತರು ಕೆನಾಲ್ ಟೆಲ್ ಎಂಡ್ ಹತ್ತಳ್ಳಿ ೧೭೨ ವರೆಗೂ ನೀರು ಬರೋದಿಲ್ಲ, ಇದಕ್ಕೆ ಅಧಿಕಾರಿಗಳೇ ಹೊಣೆಗಾರರನ್ನಾಗಿ ಹೋರಾಟಕ್ಕೆ ಇಳಿದ ರೈತರ ಪರವಾಗಿ, ರೈತರ ಹಿತದೃಷ್ಟಿಯಿಂದ ನಾವುಗಳು ಏಳಗಿ ಕೆನಾಲ್ ದಿಂದ ಕೊನೆಯ ೧೭೨ ವರೆಗೂ ಸಿಬ್ಬಂದಿಯೊಂದಿಗೆ ವೀಕ್ಷಣೆ ಮಾಡಿ, ಇಲ್ಲಿನ ಮೋಟರಗಳನ್ನು ಬಂದ ಮಾಡಿಸಿ, ಎಲ್ಲ ರೈತರಿಗು ಸಮನಾಗಿ ನೀರು ಸಿಗಲಿ, ಎಲ್ಲರು ನಗುತ್ತಾ ಇರಲಿ ಅನ್ನೋ ಉದ್ದೇಶದಿಂದ ಈ ಕಾರ್ಯಾಚರಣೆ ನಡೆಸಿದ್ದೇವೆ, ಯಾರು ಅನ್ಯಥಾ ಭಾವಿಸಬಾರದು ಎಂದು ಝಳಕಿ ಠಾಣಾ ಅಧಿಕಾರಿ ಮಂಜುನಾಥ್ ತೀರಕನ್ನವರ ತಿಳಿಹೇಳಿದರು.
ಎಲ್ಲಾ ರೈತರು, ದನ, ಕರುಗಳು, ಜನರಿಗೆ ಕುಡಿಯಲು ನೀರು ಹರಿಸಲಾಗಿದ್ದು , ಇದು ವ್ಯರ್ಥವಾಗಿ ಬಳಕೆ ಮಾಡದಂತೆ ಚಡಚಣ ತಾಲೂಕು ತಹಸೀಲ್ದಾರ್,ಕೇ.ಬಿ.ಜೆ.ಎನ್. ಎಲ್, ಕಂದಾಯ ಇಲಾಖೆ, ಝಳಕಿ ಪೊಲೀಸ್ ಇಲಾಖೆ , ವಿದ್ಯುತ್ ಇಲಾಖೆ ಅಧಿಕಾರಿಗಳು ಸಿಬ್ಬಂದಿಯೊಂದಿಗೆ, ರೈತರ ಎಲ್ಲರ ಸಹಯೋಗದಲ್ಲಿ ನೀರು ಹರಿಸುವ ಕಾರ್ಯಾಚರಣೆ ನಡೆಸಲಾಯಿತು.
ತಹಶೀಲ್ದಾರ್ ಸಂಜಯ್ ಇಂಗಳೇ, .ಬಿ.ಜೆ.ಎನ್. ಎಲ್, ಅಧಿಕಾರಿಗಳು ಅಂಗಡಿ, ಶ್ರೀಮಂತ ಚಂದಕಾಂತ ಕೋಳಿ, ವಿದ್ಯುತ್ ಅಧಿಕಾರಿಗಳು ವಿಜಯಕುಮಾರ್ ಹವಾಲ್ದಾರ್, ಏಳಗಿ ಗ್ರಾಮದ ರೈತರಾದ ಪ್ರವೀಣ ಪಾಟೀಲ ಹಾಗೂ ಎಲ್ಲ ಇಲಾಖೆಯ ಸಿಬ್ಬಂದಿಗಳು, ರೈತರು ಉಪಸ್ಥಿತರಿದ್ದರು.