ಇಂಡಿ: ನಗರದ ಕುಂಬಾರ ಓಣಿಯಲ್ಲಿ ಶ್ರೀ ಭುವನೇಶ್ವರಿ ಯುವಕ ಮಂಡಳಿಯ ವತಿಯಿಂದ ಪ್ರತಿ?ಪಿಸಲಾಗಿರುವ ಶ್ರೀ ನಾಡದೇವಿಯ ದರ್ಶನವನ್ನು ಶಾಸಕ ಯಶವಂತರಾಯಗೌಡ ಪಾಟೀಲ ದರ್ಶನ ಪಡೆದುಕೊಂಡು ನಾಡಿನ ಆರಾಧ್ಯ ದೇವಿಯ ಆಶೀರ್ವಾದದಿಂದ ಸಮಸ್ತ ಜನರ ಜೀವನದಲ್ಲಿ ಸುಖ, ಶಾಂತಿ, ನೆಮ್ಮದಿ ಹಾಗೂ ಸಮೃದ್ಧಿ ಕರುಣಿಸಲಿ. ರೈತಾಪಿ ವರ್ಗಕ್ಕೆ ಉತ್ತಮ ಮಳೆಯಾಗಿ ಕೃಷಿ ಚಟುವಟಿಕೆಗಳು ಸಮೃದ್ಧಿಗೊಳ್ಳಲಿ, ನಮ್ಮ ಇಂಡಿ ಕ್ಷೇತ್ರವು ಅಭಿವೃದ್ಧಿಯ ಪಥದಲ್ಲಿ ಮತ್ತ? ಮುನ್ನಡೆಯಲಿ ಎಂದು ಪ್ರಾರ್ಥಿಸಿದರು.
ಧಾರ್ಮಿಕ ಸಂಪ್ರದಾಯಗಳನ್ನು ಉಳಿಸಿ ಬೆಳೆಸುವ ಕಾರ್ಯದಲ್ಲಿ ತೊಡಗಿರುವ ಶ್ರೀ ಭುವನೇಶ್ವರಿ ಯುವಕ ಮಂಡಳಿಯ ಸದಸ್ಯರ ಭಕ್ತಿ ಹಾಗೂ ಸೇವಾ ಮನೋಭಾವಕ್ಕೆ ಮೆಚ್ಚುವಂತದು ಎಂದರು.
ಈ ಸಂದರ್ಭದಲ್ಲಿ ಲಿಂಬೆ ಅಭಿವೃದ್ದಿ ಮಂಡಳಿ ಅಧ್ಯಕ್ಷ ಭೀಮಣ್ಣ ಕವಲಗಿ, ಕುಂಬಾರ ಸಮಾಜದ ಅಧ್ಯಕ್ಷ ಸತೀಶ ಕುಂಬಾರ, ಶ್ರೀಕಾಂತ ಕುಡಿಗನೂರ, ರಮೇಶ ಕಂಬಾರ, ಚನ್ನು ದೇವರ, ರಾಘು ಕುಡಿಗನೂರ, ಮಲ್ಲು ದೇವರ, ಶಿವು ಕುಂಬಾರ, ಕುಡಲಪ್ಪ ಕುಂಟೋಜಿ ಇದ್ದರು.