ರಷ್ಯಾ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಭಾರತಕ್ಕೆ ಭೇಟಿ ನೀಡಿದ್ದಾರೆ. ಅವರು 23ನೇ ವಾರ್ಷಿಕ ಶೃಂಗಸಭೆಯಲ್ಲಿ ಭಾಗವಹಿಸಲು ಆಗಮಿಸಿದ್ದಾರೆ. ಎರಡು ದಿನಗಳ ಪ್ರವಾಸದ ವೇಳೆ, ಪುಟಿನ್ ಹಲವಾರು ಕಾರ್ಯಕ್ರಮಗಳಲ್ಲಿ ಪಾಲ್ಗೊಳ್ಳಲಿದ್ದಾರೆ. ಅವರ ಭೇಟಿ ವೇಳೆ ನಡೆದ ಪ್ರಮುಖ ಘಟನೆಗಳನ್ನು ಹೀಗಿವೆ:
- ರಾಷ್ಟ್ರಪತಿ ಭವನಕ್ಕೆ ಆಗಮಿಸಿದ ಪುಟಿನ್ ಅವರನ್ನು ರಾಷ್ಟ್ರಪತಿ ದ್ರೌಪದಿ ಮುರ್ಮು ಮತ್ತು ಪ್ರಧಾನಿ ನರೇಂದ್ರ ಮೋದಿ ಸ್ವಾಗತಿಸಿದರು.
- ರಾಷ್ಟ್ರಪತಿಭವನದಲ್ಲಿ ವಿಶೇಷ ಸಂಗೀತ ಕಾರ್ಯಕ್ರಮ ಮತ್ತು ರೆಡ್ ಕಾರ್ಪೆಟ್ ಮೂಲಕ ಗೌರವ ವಂದನೆ ಮಾಡಲಾಯಿತು.
- 21 ಗನ್ ಸೆಲ್ಯೂಟ್, ಸೇನಾ ಶಿಸ್ತು ಹಾಗೂ ವಿವಿಧ ಗೌರವಗಳೊಂದಿಗೆ ಸೇನಾ ಸಿಬ್ಬಂದಿ ಪುಟಿನ್ ಅವರನ್ನು ಸ್ವಾಗತಿಸಿದರು.
- ರಾಷ್ಟ್ರಪತಿಭವನದಿಂದ ಕಾರಿನಲ್ಲಿ ರಾಜ್‌ಘಾಟ್‌ಗೆ ತೆರಳಿದ ಪುಟಿನ್, ಮಹಾತ್ಮ ಗಾಂಧೀಜಿಯವರ ಸ್ಮಾರಕಕ್ಕೆ ಹೂಗುಚ್ಚ ಸಲ್ಲಿಸಿ ನಮನ ಸಲ್ಲಿಸಿದರು.
- ಹೂವಿನ ಗುಚ್ಚದಲ್ಲಿ ರಷ್ಯಾ ಧ್ವಜದ ಬಣ್ಣಗಳನ್ನು ಪ್ರತಿಬಿಂಬಿಸಲಾಗಿದೆ.
- ರಾಜ್‌ಘಾಟ್‌ನಲ್ಲಿ ಜನಸಾಮಾನ್ಯರ ಸಂದರ್ಶಕರ ಪುಸ್ತಕದಲ್ಲಿ ಪುಟಿನ್ ಸಹಿ ಹಾಕಿದರು.
KhushiHost News CMS Pro ®
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.