ತಾಳಿಕೋಟೆ, ನಗರದ ಬಸ್ ನಿಲ್ದಾಣದ ಮುಂಭಾಗದ ಪ್ರಮುಖ ರಸ್ತೆಯ ಹೃದಯ ಭಾಗದಲ್ಲಿ ಗುರುತಿಸಲಾಗಿದ್ದ ಮಹಾರಾಣಾಪ್ರತಾಪಸಿಂಹ್ ಸರ್ಕಲ್ದಲ್ಲಿ ರಜಪೂತ ಸಮಾಜ ಬಾಂದವರ ನೇತೃತ್ವದಲ್ಲಿ ಪ್ರತಿಷ್ಠಾಪಿಸಲಾಗಿರುವ ಶ್ರೀ ಮಹಾರಾಣಾ ಪ್ರತಾಪ್ ಸಿಂಹಜೀರವರ ಕಂಚಿನ ಪುತ್ತಳಿ ಲೋಕಾರ್ಪಣೆ ಸಮಾರಂಭಕ್ಕೆ ಕರ್ನಾಟಕ ಸಾಬೂನು ಮತ್ತು ಮಾರ್ಜಕ ನಿಗಮದ ಅಧ್ಯಕ್ಷರು ಹಾಗೂ ಮುದ್ದೇಬಿಹಾಳ ಮತಕ್ಷೇತ್ರ ಶಾಸಕರಾದ ಅಪ್ಪಾಜಿ ನಾಡಗೌಡರಿಗೆ ರಜಪೂತ ಸಮಾಜದ ವತಿಯಿಂದ ರವಿವಾರರಂದು ಆಹ್ವಾನ ನೀಡಲಾಯಿತು.
ರವಿವಾರ ರಜಪೂತ ಸಮಾಜದ ಮುಖಂಡರು ಮುದ್ದೇಬಿಹಾಳ ಪಟ್ಟಣದಲ್ಲಿರುವ ಶಾಸಕ ಅಪ್ಪಾಜಿ ನಾಡಗೌಡರ ನಿವಾಸಕ್ಕೆ ಭೇಟಿ ನೀಡಿ ನವಂಬರ್ ೧೫ರಂದು ನಡೆಯಲಿರುವ ಈ ಮೂರ್ತಿ ಲೋಕಾರ್ಪಣೆ ಕಾರ್ಯಕ್ರಮದ ಕುರಿತು ವಿವರಿಸಿ ನಂತರ ಅವರನ್ನು ಆಮಂತ್ರಿಸಿದರು. ಆಮಂತ್ರಣವನ್ನು ಸ್ವೀಕರಿಸಿ ಶಾಸಕ ಅಪ್ಪಾಜಿ ನಾಡಗೌಡರು ಮಾತನಾಡಿ ರಜಪೂತ ಸಮಾಜ ನನ್ನ ಕ್ಷೇತ್ರದ ಒಂದು ಸಣ್ಣ ಸಮಾಜವಾದರೂ ಮಹಾರಾಣಾ ಪ್ರತಾಪ ಸಿಂಹರ ಒಂದು ಸುಂದರ ವೃತ್ತವನ್ನು ತಾಳಿಕೋಟೆ ಪಟ್ಟಣದಲ್ಲಿ ನಿರ್ಮಿಸಿ ಬಹಳಷ್ಟು ಅಭಿಮಾನದಿಂದ ಅವರ ಮೂರ್ತಿಯನ್ನು ಲೋಕಾರ್ಪಣೆ ಮಾಡುತ್ತಿರುವುದು ಸಂತೋಷದ ವಿಷಯ ಅವರಿಗೆ ನಾನು ಅಭಿನಂದಿಸುತ್ತೇನೆ ಎಂದು ತಿಳಿಸಿದ ಅವರು ನಾನು ಈ ಕಾರ್ಯಕ್ರಮದಲ್ಲಿ ಭಾಗವಹಿಸುವುದರ ಜೊತೆಗೆ ಇದರ ಯಶಸ್ವಿಗೆ ಸಂಪೂರ್ಣ ಸಹಕರಿಸುತ್ತೇನೆ ಎಂದರು.
ಈ ಸಮಯದಲ್ಲಿ ರಜಪೂತ ಸಮಾಜದ ಅಧ್ಯಕ್ಷ ಹರಿಸಿಂಗ್ ಮೂಲಿಮನಿ, ಉಪಾಧ್ಯಕ್ಷ ರತನಸಿಂಗ್ ಕೊಕಟನೂರ, ಸಮಾಜದ ಮುಖಂಡ, ಪುರಸಭೆ ಮಾಜಿ ಸದಸ್ಯ ಪ್ರಕಾಶ ಹಜೇರಿ, ವಿಠ್ಠಲಸಿಂಗ್ ಹಜೇರಿ, ಕಾಂಗ್ರೆಸ್ ಯುವ ಮುಖಂಡ ಸಂಗನಗೌಡ ಅಸ್ಕಿ ಮತ್ತಿತರರು ಉಪಸ್ಥಿತರಿದ್ದರು.